ಬೆಂಗಳೂರು:ಕೇಂದ್ರ ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಕುಟುಂಬಸಮೇತರಾಗಿ ದೆಹಲಿಗೆ ಹೊರಟಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಅವರು ಸಚಿವರಾಗಲಿದ್ದಾರೆಯೇ ಎಂಬ ಪ್ರಶ್ನೆಗಳೂ ಮೂಡಿದ್ದು, ಅವುಗಳಿಗೆ ಸ್ವತಃ ನಾರಾಯಣಸ್ವಾಮಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ನಾನು ಎರಡು ಸ್ಟ್ಯಾಂಡಿಂಗ್​ ಕಮಿಟಿಯಲ್ಲಿ ಇದ್ದೇನೆ, ನಾಳೆ ಇದರ ಸಭೆ ಇದೆ, ಆ ಸಭೆ ನಂತರ ಹಿಮಾಲಯ ಬೆಟ್ಟದಲ್ಲಿ ಹಿಮ ಬೀಳುತ್ತಿರುವ ಬಗ್ಗೆ ಅಧ್ಯಯನ ಮಾಡಲು ಟೂರ್ ಹಾಕಿದ್ದಾರೆ ಎಂದ ಅವರು, ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದುದರಿಂದ ಅವರನ್ನೂ ಕರೆದುಕೊಂಡು ಹೋಗುತ್ತಿದ್ದೇನೆ ಎಂದರು.
ಇದನ್ನೂ ಓದಿ:ಈ ಟೀ ಸ್ಟಾಲ್​ನಲ್ಲಿ ಕೋತಿಯೇ ಕ್ಲೀನರ್​; ಅದೆಷ್ಟು ಚೆನ್ನಾಗಿ ತಟ್ಟೆ ತೊಳೆಯುತ್ತಿದೆ ನೋಡಿ..
ಇನ್ನು ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ನಾಳೆ ಸಚಿವ ಸಂಪುಟ ವಿಸ್ತರಣೆ ಇದೆ, ಯಾರ್ಯಾರು ರಾಜ್ಯದಿಂದ ಸಚಿವರಾಗುತ್ತಾರೆ ಅಂತ ಗೊತ್ತಿಲ್ಲ. ಸಚಿವ ಸ್ಥಾನ‌ ನೀಡುವ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ ಹೊರತು ನನಗೆ ಮಾಹಿತಿ ಬಂದಿಲ್ಲ. ನಾನು ಕಿರಿಯ ಸಂಸದ. ಶಾಸಕನಾಗಿದ್ದೇನೆ, ಮಂತ್ರಿಯೂ ಆಗಿದ್ದೇನೆ, ಪಕ್ಷದಲ್ಲಿ ದುಡಿದಿದ್ದೇನೆ, ನಾನು ಯಾವತ್ತೂ ಹುದ್ದೆಗಳಿಗೆ ಆಸೆ ಪಟ್ಟವನಲ್ಲ, ಪಡೋದು ಇಲ್ಲ ಎಂದ ಅವರು, ಏನೇ ಜಬಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ, ಪಕ್ಷದ ಸೂಚನೆಗಳನ್ನ ಪಾಲಿಸುತ್ತೇನೆ ಎಂದರು.
ಇದನ್ನೂ ಓದಿ:ಲಸಿಕೀಕರಣದಲ್ಲಿ ಯಾದಗಿರಿಯ ಈ ಗ್ರಾಮ ರಾಜ್ಯಕ್ಕೇ ಮಾದರಿ!; 100% ವ್ಯಾಕ್ಸಿನೇಷನ್ ಘೋಷಣೆ
ನಾನು ಸಚಿವ ಸ್ಥಾನದ ನಿರೀಕ್ಷೆಯಲ್ಲಿಲ್ಲ. ಆದರೆ ಸಚಿವ ಸ್ಥಾನ ಕೊಟ್ಟರೆ ಅದನ್ನು ನಿಭಾಯಿಸುವ ಶಕ್ತಿ ನನ್ನಲ್ಲಿದೆ ಎನ್ನುತ್ತ ಮೇಲಿಂದ ಮೇಲೆ ಬರುತ್ತಿದ್ದ ಫೋನ್​ ಕರೆಗಳಿಗೆ ಸ್ಪಂದಿಸುತ್ತ ನಾರಾಯಣಸ್ವಾಮಿ ವಿಮಾನನಿಲ್ದಾಣದೊಳಕ್ಕೆ ಪ್ರವೇಶಿಸಿದರು. ಪತ್ನಿ ಹಾಗೂ ಮೂವರು ಮಕ್ಕಳು ಮಾತ್ರವಲ್ಲದೆ ಸಹೋದರಿಯೊಬ್ಬರೊಂದಿಗೆ ಇಂಡಿಗೋ ವಿಮಾನದಲ್ಲಿ ದೆಹಲಿಗೆ ಹೊರಟ ನಾರಾಯಣಸ್ವಾಮಿ, ಅಲ್ಲಿ ದೆಹಲಿಯ ಟಿಬಿ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ತಂಗಲಿದ್ದಾರೆ. ನಂತರ ಕೇಂದ್ರ ಸಚಿವ ಸದಾನಂದ ಗೌಡ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ಭಾರತೀಯ ಯೋಧರಿಂದಲೇ ಪಾಕ್​ಗೆ ಮಾಹಿತಿ!; ಸಿಕ್ಕಿಬಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು..

18 ತಿಂಗಳ ಮಗುವಿಗಾಗಿ ಏಳೇ ದಿನಗಳಲ್ಲಿ ಸಂಗ್ರಹವಾಯ್ತು 18 ಕೋಟಿ ರೂ.; ಬೇಡ ಎಂಬಷ್ಟು ಬಂತು ಹಣ!

ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

Sign in to your account
Please enter an answer in digits:15 + 8 =
Remember me
