ಹಾಸನ:ಐತಿಹಾಸಿಕ ಬೇಲೂರು ಚನ್ನಕೇಶವ ಸ್ವಾಮಿ ದೇವಸ್ಥಾನದ ರಥೋತ್ಸವ ವೇಳೆ ಕುರಾನ್ ಪಠನೆ ಬೇಕೋ ಬೇಡವೋ?!– ಇಂಥದ್ದೊಂದು ಜಿಜ್ಞಾಸೆ ಇದೀಗ ಉಂಟಾಗಿದ್ದು, ಹಿಂದಿನ ಪದ್ಧತಿಯೊಂದನ್ನು ಮುಂದುವರಿಸಬೇಕೋ ಬೇಡವೋ ಎಂಬ ಗೊಂದಲವೂ ಉಂಟಾಗಿದೆ.
ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವ ಸಂದರ್ಭ ಕುರಾನ್ ಪಠನೆ ಮಾಡುವ ಪದ್ಧತಿ ಇದೆ. ಆದರೆ ಇದೀಗ ರಾಜ್ಯಾದ್ಯಂತ ಕೋಮುಸಂಘರ್ಷ ಉಂಟಾಗಿದ್ದು, ಅದೀಗ ದೇವಸ್ಥಾನಗಳವರೆಗೂ ತಲುಪಿದೆ. ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಹಿಂದುಯೇತರರಿಗೆ ಅಂಗಡಿ ಮುಂಗಟ್ಟು ನೀಡಬಾರದು ಎಂಬ ವಿಚಾರ ಹಲವು ದೇವಸ್ಥಾನಗಳಲ್ಲಿ ವಿವಾದವಾಗಿ ಮಾರ್ಪಟ್ಟಿದೆ.
ಇನ್ನು ನಾಳೆ ಬೇಲೂರು ದೇವಸ್ಥಾನದಲ್ಲಿ ರಥೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಪದ್ಧತಿಯಂತೆ ಕುರಾನ್ ಪಠನೆ ನಡೆಸಬೇಕೋ ಬೇಡವೋ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಗೊಂದಲದಲ್ಲಿ ಸಿಲುಕಿದೆ.
1932ರ ದೇಗುಲದ ಮ್ಯಾನುವಲ್​ನಲ್ಲಿ ಕುರಾನ್ ಪಠನದ ಉಲ್ಲೇಖವಿದ್ದು, ರಥೋತ್ಸವ ವೇಳೆ ಮುಸ್ಲಿಂ ಕುಟುಂಬದವರು ಕುರಾನ್ ಪಠನೆ ಮಾಡುತ್ತಾರೆ. ಅದನ್ನು ಈ ಸಲ ಮುಂದುವರೆಸಬೇಕೇ ಬೇಡವೇ ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಬೇಲೂರು ದೇಗುಲದ ಆಡಳಿತಾಧಿಕಾರಿ ವಿದ್ಯುಲ್ಲತಾ ಪತ್ರ ಬರೆದು ಸ್ಪಷ್ಟನೆ ಕೋರಿದ್ದಾರೆ.
ಕೋವಿಡ್ ಮುನ್ನೆಚ್ಚರಿಕೆ; ಆರೋಗ್ಯ ಇಲಾಖೆಯಿಂದ ಹೊಸ ಆದೇಶ!

ಇಬ್ಬರು ಮಕ್ಕಳ ಕಣ್ಣೆದುರೇ ಸಾವಿಗೀಡಾದ ತಂದೆ; ಮಕ್ಕಳಿಬ್ಬರಿಗೂ ಗಾಯ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + eighteen =
Remember me
