ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲವರ್ ಇದ್ರಾ? ಸಿಎಂ ಯಾವತ್ತಾದ್ರೂ ಹೆಂಡ್ತಿಯಿಂದ ಬೈಸಿಕೊಂಡಿದ್ರಾ? ಮುಖ್ಯಮಂತ್ರಿಗೆ ಅಡುಗೆ ಮಾಡಲು ಬರುತ್ತಾ?
– ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಯಾರಾದರೂ ಕೇಳಲು ಸಾಧ್ಯವೇ? ಅದಾಗ್ಯೂ ಯಾರಾದರೂ ಕೇಳಿದರೆ ಹೇಗಿರಬಹುದು? ಹೀಗೆಲ್ಲ ಕೇಳಿದರೆ ಅವರ ಪ್ರತಿಕ್ರಿಯೆ, ಉತ್ತರ ಯಾವ ಥರ ಇರಬಹುದು?
ಖಂಡಿತ ಇಂಥ ಕುತೂಹಲ ಕೆಲವರಿಗಾದರೂ ಇದ್ದೇ ಇರುತ್ತದೆ. ಈ ಥರದ ಕುತೂಹಲಕಾರಿ ಸನ್ನಿವೇಶದಲ್ಲಿ ಖುದ್ದು ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ. ಕಲರ್​ಫುಲ್ ಯುವತಿಯರ ನಡುವೆ ಕುಳಿತ ಸಿದ್ದರಾಮಯ್ಯ ಅವರು ಇಂಥ ಪ್ರಶ್ನೆಗಳನ್ನು ತಮ್ಮ ಎಂದಿನ ಶೈಲಿಯಲ್ಲೇ ಎದುರಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್-2023 ಕಾರ್ಯಕ್ರಮ ಈ ಥರದ್ದೊಂದು ವೇದಿಕೆ ಸೃಷ್ಟಿಸಿದ್ದು, ಇದರಲ್ಲಿ ಸಿದ್ದರಾಮಯ್ಯ ಅವರನ್ನು ಕಿರುತೆರೆಯ ಕಣ್ಮಣಿಗಳು ಸಂದರ್ಶನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮಾಮೂಲಿಯಾಗಿ ಎದುರಿಸುವಂಥ ಪ್ರಶ್ನೆಗಳಿಗೆ ವ್ಯತಿರಿಕ್ತವಾದ, ತಮಾಷೆಯಾದ, ಜನರಿಗೆ ತಿಳಿದುಕೊಳ್ಳಲು ಕುತೂಹಲ ಇರುವಂಥ ಈ ಪ್ರಶ್ನೆಗಳನ್ನು ಇಲ್ಲಿನ ಯುವತಿಯರು ಕೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲವರ್ ಇದ್ರಾ? ಸಿಎಂ ಯಾವತ್ತಾದ್ರೂ ಹೆಂಡ್ತಿಯಿಂದ ಬೈಸಿಕೊಂಡಿದ್ರಾ? ಮುಖ್ಯಮಂತ್ರಿಗೆ ಅಡುಗೆ ಮಾಡಲು ಬರುತ್ತಾ? ಎಂದೆಲ್ಲ ಕೇಳಿರುವ ಪ್ರಶ್ನೆಗಳಿಗೆ ಸಿಎಂ ಏನು ಉತ್ತರ ನೀಡಿರಬಹುದು ಎಂಬ ಕುತೂಹಲ ನಾಡಿದ್ದರಿಂದಲೇ ತಣಿಯಲಿದೆ. ಅರ್ಥಾತ್, ಈ ಸಂದರ್ಶನವು ಸೆ.22, 23, 24ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 7ರಿಂದ ಪ್ರಸಾರವಾಗಲಿದೆ.
A post shared by Colors Kannada Official (@colorskannadaofficial)

ಮೀನು ಮಾರ್ಕೆಟ್​ನಲ್ಲಿ ಮಾತೃವಾತ್ಸಲ್ಯ ಅನಾವರಣ; ವಿದೇಶದಿಂದ ಮಗ ಮುಖಮುಚ್ಚಿಕೊಂಡು ಬಂದರೂ ಗುರುತು ಹಿಡಿದ ಅಮ್ಮ!

ಅಭಿನವ ಹಾಲಶ್ರೀ ನೀಡಿದ್ದ ಲಕ್ಷಾಂತರ ರೂಪಾಯಿ ವಾಪಸ್ ಮಠಕ್ಕೆ ತಲುಪಿದ್ದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + eighteen =
Remember me
