ಹಾವೇರಿ:ಲಾಕ್​ಡೌನ್​ ಸಮಯದಲ್ಲಿ ಬಸ್​ ನಿಲ್ದಾಣವೊಂದರಲ್ಲಿ ರೈತರೊಬ್ಬರು ಮಾಡಿರುವ ಕೆಲಸ ಇದೀಗ ಎಲ್ಲೆಡೆ ಗಮನ ಸೆಳೆಯಲಾರಂಭಿಸಿದೆ. ಮಾತ್ರವಲ್ಲ ಇದು ಮಿಶ್ರ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಇದನ್ನು ಕೆಲವರು ತಪ್ಪು ಎಂದು ಹೇಳಿದರೆ, ಇದರಲ್ಲೇನು ತಪ್ಪು ಎಂಬುದು ಈ ರೈತರ ಪ್ರಶ್ನೆ!
ಬಿಕೋ ಎನ್ನುತ್ತಿರುವ ರಸ್ತೆಯಲ್ಲಿರುವ ಈ ಬಸ್​ ನಿಲ್ದಾಣ ರೈತರೊಬ್ಬರಿಂದಾಗಿ ಗಮನ ಸೆಳೆಯುವಂತಾಗಿದೆ. ಅಂದಹಾಗೆ ಈ ಬಸ್​ ನಿಲ್ದಾಣ ಇರುವುದು ಹಾವೇರಿ ಜಿಲ್ಲೆಯ ಮಣ್ಣೂರು ಗ್ರಾಮದಲ್ಲಿ. ಕಳೆದ ಕೆಲವು ದಿನಗಳ ಹಿಂದೆ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬಸ್​ ಬರದೆ ತಂಗುದಾಣ ಖಾಲಿ ಉಳಿದಿದ್ದು ಒಂದೆಡೆಯಾದರೆ, ಈಗ ಕೆಲವು ದಿನಗಳಿಂದ ಕರ್ಫ್ಯೂ-ಲಾಕ್​ಡೌನ್​ ಕಾರಣದಿಂದಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದು, ಬಸ್​ ನಿಲ್ದಾಣಗಳು ಕೂಡ ಭಣಗುಡುತ್ತಿವೆ. ಮಣ್ಣೂರು ಗ್ರಾಮದ ಈ ಬಸ್​ ನಿಲ್ದಾಣವೂ ಅದಕ್ಕೆ ಹೊರತಾಗಿಲ್ಲ.
ಇದನ್ನೂ ಓದಿ:ಸೋಂಕಿತ ಹಿಂದು ವೃದ್ಧೆಯ ಶವಸಂಸ್ಕಾರಕ್ಕೆ ಹಿಂಜರಿದ ಸಂಬಂಧಿಕರು; ಕೊನೆಗೆ ಮುಸ್ಲಿಂ ಯುವಕರಿಂದ ಅಂತಿಮಸಂಸ್ಕಾರ
ಲಾಕ್​ಡೌನ್​ ಹಿನ್ನೆಲೆಯಲ್ಲಿ ರಸ್ತೆ ಬಿಕೋ ಎನ್ನುತ್ತಿದ್ದು, ಬಸ್ ನಿಲ್ದಾಣವೂ ಖಾಲಿ ಇದೆ. ಹೀಗಾಗಿ ತಮ್ಮ ಜಮೀನಿನಲ್ಲಿ ಬೆಳೆದಿರುವ ಒಂದು ಲೋಡ್​ನಷ್ಟು ಶೇಂಗಾ ಹೊಟ್ಟನ್ನು ರೈತರೊಬ್ಬರು ಇಲ್ಲಿ ಶೇಖರಿಸಿ ಇಟ್ಟಿದ್ದಾರೆ. ಇದು ಬಸ್​ ನಿಲ್ದಾಣದ ಸದ್ಬಳಕೆಯೋ-ದುರ್ಬಳಕೆಯೋ ಎಂಬ ಪ್ರಶ್ನೆ ಮೂಡಿದ್ದು, ಈ ಬಗ್ಗೆ ಹಲವರು ಆಕ್ಷೇಪ ಕೂಡ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಸ್​ ಬರದಿದ್ದರೂ, ಪ್ರಯಾಣಿಕರು ಇರದಿದ್ದರೂ ಈ ಬಸ್​ ನಿಲ್ದಾಣ ಗಮನ ಸೆಳೆಯುತ್ತಿದೆ.
ಗಾರೆ ಕೆಲಸಗಾರರೊಬ್ಬರ ಪ್ರಾಣ ತೆಗೆದ ‘ಲೇಡಿ-ಡಾಗ್’; ಜೀವಕ್ಕೇ ಕುತ್ತು ತಂತು ಕುತ್ತಿಗೆಗೆ ಕಚ್ಚಿದ ನಾಯಿ!

ಕ್ರಿಕೆಟ್​ ಕಿರಿಕ್​ಗೆ ಉರುಳಿತು ಜೀವಂತ ವಿಕೆಟ್​; ಕಾರ್​ ಡಿಕ್ಕಿ ಹೊಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 1 =
Remember me
