ಕಾರ್ಕಳ:ಲಾಕ್​ಡೌನ್​ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದು, ವಿನಾಕಾರಣ ಬೀದಿಗಿಳಿದವರಿಗೆ ಲಾಠಿ ಏಟು ಬೀಳುತ್ತಿದ್ದು, ಅವರ ವಾಹನಗಳ ಜಪ್ತಿಯೂ ನಡೆಯುತ್ತಿದೆ. ಆದರೆ ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದಲೇ ಇಲ್ಲೊಬ್ಬರು ಸಾವಿಗೀಡಾಗಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ತೀವ್ರ ಎದೆನೋವಿಗೆ ಒಳಗಾಗಿದ್ದ ಮಹಿಳೆ ಮಂಜುಳಾ ಎಂಬಾಕೆಯನ್ನು ಸಂಬಂಧಿಕರು ವಾಹನದಲ್ಲಿ ಕರೆಯುತ್ತಿದ್ದಾಗ, ಮಾರ್ಗಮಧ್ಯೆ ಚೆಕ್​ಪೋಸ್ಟ್​ನಲ್ಲಿ ತಡೆದಿದ್ದು, ಖಾಸಗಿ ವಾಹನಕ್ಕೆ ಪ್ರವೇಶವಿಲ್ಲ, ಬೇಕಿದ್ದರೆ ಆಂಬುಲೆನ್ಸ್​ನಲ್ಲಿ ಕರೆದೊಯ್ಯಿರಿ ಎಂದಿದ್ದಾರೆ. ಹೀಗಾಗಿ ಅಲ್ಲಿಂದ ಹಿಂದಕ್ಕೆ ಬಂದ ಸಂಬಂಧಿಕರು ಬೇರೊಂದು ಒಳದಾರಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತಡವಾದ್ದರಿಂದ ಮಹಿಳೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ:‘ತಂದೆ ಕಾಣೆಯಾಗಿದ್ದಾರೆ, ಹುಡುಕಿಕೊಡಿ ಪ್ಲೀಸ್​.. ಲಾಕ್​ಡೌನ್​ನಿಂದ ಹೊರಗೆ ಹೋಗಲಾಗುತ್ತಿಲ್ಲ, ಸಹಾಯ ಮಾಡಿ: ಪುತ್ರನ ವಿನಂತಿ
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಮಂಜುಳಾ ಮೃತಪಟ್ಟವರು. ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಬಜಗೋಳಿ ಸಮೀಪದ ಚೆಕ್​ಪೋಸ್ಟ್​ನಲ್ಲಿ ವಾಹನ ತಡೆದ ಪೊಲೀಸರು ಅಲ್ಲಿಂದ ಮುಂದಕ್ಕೆ ಸಾಗಲು ಅವಕಾಶ ನೀಡಿರಲಿಲ್ಲ. ಕೊನೆಗೆ ಒಳದಾರಿಯಲ್ಲಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪೊಲೀಸರ ಅಸಹಕಾರದಿಂದ ಸಾವು ಸಂಭವಿಸಿದೆ ಎಂದು ಸಂಬಂಧಿಕರು ಆರೋಪಿಸಿದ್ದು, ಆ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.
ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

ವೈದ್ಯರ ಏಪ್ರನ್ ಧರಿಸಿ ತರಕಾರಿ ತರಲು ದ್ವಿಚಕ್ರ ವಾಹನದಲ್ಲಿ ಹೋದ; ಆಮೇಲಾಗಿದ್ದು ನಗೆಪಾಟಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
