ಹಾವೇರಿ:ರಕ್ತಸೈನಿಕರ ತವರೂರು ಎಂದೇ ಖ್ಯಾತಿ ಪಡೆದಿರುವ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಪಶು ಆಸ್ಪತ್ರೆ ಶನಿವಾರ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಗಿದೆ.
ಕಾಯಿಲೆಯಿಂದ ಬಳಲುತ್ತಿದ್ದ ಶ್ವಾನವೊಂದಕ್ಕೆ ಮತ್ತೊಂದು ಶ್ವಾನ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದೆ. ಬಮ್ಮನಹಳ್ಳಿ ಗ್ರಾಮದ ಶ್ವಾನ ತರಬೇತುದಾರ ರಂಜಿತ ಅವರ ‘ಸಿರಿ’ ಎಂಬ ಶ್ವಾನ ರಕ್ತದಾನ ಮಾಡಿದೆ.
ಹಾನಗಲ್ಲ ತಾಲೂಕು ಹುಲ್ಲತ್ತಿ ಗ್ರಾಮದ ನಾಗರಾಜ ಗೊಲ್ಲರ ಎಂಬುವರ ರಾಕಿ ಎಂಬ ಶ್ವಾನ ಅಕ್ಯೂಟ್ ಲೆಪ್ಟೋಸ್ಪೇರೊಸಿಸ್ ಎಂಬ ರೋಗದಿಂದ ಬಳಲುತ್ತಿತ್ತು. ಇದರ ಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇತ್ತು. ಇದಕ್ಕೆ ಅಗತ್ಯವಾದ ರಕ್ತವನ್ನು ಬಮ್ಮನಹಳ್ಳಿ ಗ್ರಾಮದ ಶ್ವಾನ ತರಬೇತುದಾರ ರಂಜಿತ ಅವರ ‘ಸಿರಿ’ ಎಂಬ ಶ್ವಾನ ರಕ್ತದಾನ ಮಾಡುವ ಮೂಲಕ ರಕ್ತಸೈನಿಕ ಎನಿಸಿಕೊಂಡಿದೆ.

ಅಕ್ಕಿಆಲೂರಿನ ಸ್ನೇಹಮೈತ್ರಿ ಬ್ಲಡ್ ಆರ್ಮಿ ಸಹಕಾರದೊಂದಿಗೆ ಹಿರಿಯ ಪಶುವೈದ್ಯಾಧಿಕಾರಿ, ರಕ್ತಸೈನಿಕರಾದ ಡಾ.ಅಮಿತ ಪುಠಾಣಿಕರ ಮತ್ತು ಡಾ.ಸಂತೋಷ ಮಲಗುಂದ ಮತ್ತು ತಂಡದವರು ‘ಸಿರಿ’ ರಕ್ತ ಪಡೆದು ‘ರಾಕಿ’ಗೆ ಯಶಸ್ವಿಯಾಗಿ ಚಿಕಿತ್ಸೆ ನಡೆಸಿದರು. ಇದು ಅಕ್ಕಿಆಲೂರಿನ ಪಶುಆಸ್ಪತ್ರೆಯಲ್ಲಿ ನಡೆದ ಎರಡನೇ ಶ್ವಾನ ರಕ್ತದಾನ ಎಂದು ಸ್ನೇಹಮೈತ್ರಿ ಬ್ಲಡ್ ಆರ್ಮಿ ಸಂಸ್ಥಾಪಕ, ಪೊಲೀಸ್ ಕಾನ್‌ಸ್ಟೆಬಲ್ ಕರಬಸಪ್ಪ ಗೊಂದಿ ತಿಳಿಸಿದ್ದಾರೆ.
ಚಿತ್ರರಂಗದ ಕಹಿ ಅನುಭವವೇ ತಲೆಗೂದಲಿಲ್ಲದ ಆನಂದ್​ರನ್ನು ಗಂಡನಾಗಿ ಸ್ವೀಕರಿಸಲು ಕಾರಣ: ನಟಿ ಮಧುಬಾಲ

ಸ್ಟಾರ್ಟ್‌ಅಪ್‌ಗಳಿಂದ ಅರ್ಜಿ ಆಹ್ವಾನ

ಪಕ್ಷ ವಿರೋಧಿ ಚಟುವಟಿಕೆ : ಬಿಎಸ್‌ಪಿಯಿಂದ ಸಂಸದ ಡ್ಯಾನಿಶ್ ಅಲಿ ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + nineteen =
Remember me
