ಬೆಂಗಳೂರು:ಟೆರೇಸ್​ನಲ್ಲಿ ಕೂಡಿ ಹಾಕಿದ್ದ ಬೀದಿ ನಾಯಿಯನ್ನು ಬಿಡಿಸಿಕೊಳ್ಳಲು ಹೋದ ಮಹಿಳೆಗೆ ನೆರೆ ಮನೆಯ ನಿವಾಸಿ ರಾಡ್​ನಿಂದ ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಪ್ರಕರಣದ ಸಂತ್ರಸ್ತೆ, ಕೊಲ್ಕತ್ತಾ ಮೂಲದ ವಿದ್ಯಾರಣ್ಯಪುರ ನಿವಾಸಿ 44 ವರ್ಷದ ಮಹಿಳೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.
ದೂರುದಾರ ಮಹಿಳೆ 2 ವರ್ಷದಿಂದ ಮನೆ ಮುಂದಿನ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದರು. ಅ.4ರಂದು ಬೆಳಗ್ಗೆ ಎಂದಿನಂತೆ ನಾಯಿಗೆ ಊಟ ಹಾಕಲು ಬಂದಾಗ ನೆರೆ ಮನೆಯ ನಿವಾಸಿ ಸುಧಾಕರ್​, ಓಝೀ ಹೆಸರಿನ ನಾಯಿಮರಿಯನ್ನು ಆತನ ಮನೆಯ ಟೆರೇಸ್​ನಲ್ಲಿ ಕೂಡಿ ಹಾಕಿರುವುದು ಕಂಡು ಬಂದಿತ್ತು. ಅದನ್ನು ಬಿಡುವಂತೆ ಮನವಿ ಮಾಡಿದಾಗ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನಾಯಿಯನ್ನು ಬಿಡಿಸಲೆಂದು ಟೆರೆಸ್​ಗೆ ಹತ್ತಲು ಪ್ರಯತ್ನಿಸಿದಾಗ ಸುಧಾಕರ್​ ಮುಖಕ್ಕೆ ಹೊಡೆದು ಟೀ-ಷರ್ಟ್​ನ್ನು ಎಳೆದಾಡಿ ರಾಡ್​ನಿಂದ ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಅ.2ರಂದು ಇದೇ ಮಹಿಳೆಯ ಮನೆ ಸಮೀಪದ ನಿವಾಸಿಯೊಬ್ಬರ ವಿರುದ್ಧವೂ ದೂರು ನೀಡಿದ್ದಾರೆ. ರಸ್ತೆಬದಿ ಮಲಗಿದ್ದ ಬೀದಿನಾಯಿ ಮೇಲೆ ಆತನು ಕಾರು ಹರಿಸಿದ ಪರಿಣಾಮ ನಾಯಿ ಗಂಭೀರವಾಗಿ ಗಾಯಗೊಂಡಿತ್ತು. ಇದನ್ನು ಗಮನಿಸಿದ ನಾನು ಕೂಡಲೇ ನಾಯಿಗೆ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಪಾರ್ಟ್​ಮೆಂಟ್​ನ ಕೆಲ ನಿವಾಸಿಗಳು ಜಗಳ ಮಾಡಿದರು. ನಂತರ ಆ ನಾಯಿಯನ್ನು ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ 5 ಸಾವಿರ ರೂ. ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದೆ. ಚಿಕಿತ್ಸೆ ಫಲಿಸದೆ ನಾಯಿ ಸತ್ತು ಹೋಯ್ತು. ಆತ ಉದ್ದೇಶಪೂರ್ವಕವಾಗಿ ಕಾರು ಹರಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ನಾಯಿಯ ಮೃತದೇಹವನ್ನು ಪೋಸ್ಟ್​ ಮಾರ್ಟಂ ಮಾಡಲು ಅನುಮತಿ ನೀಡಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ ಈ ಎರಡೂ ಪ್ರಕರಣ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಪ್ರತ್ಯೇಕವಾಗಿ 2 ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.
ನಿವೇಶನದ ಸುತ್ತಲೂ 8 ಅಡಿ ಎತ್ತರದ ಕಾಂಪೌಂಡ್​ ನಿರ್ಮಿಸಿ ಗಾಂಜಾ ಬೆಳೆದರು!

ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು, ತಲೆ-ದೇಹ ಇಬ್ಭಾಗ!

ಮಟಮಟ ಮಧ್ಯಾಹ್ನ ಒಂದೇ ಕುಟುಂಬದ ಮೂರು ಮಕ್ಕಳ ಪ್ರಾಣ ಹೊತ್ತೊಯ್ದ ಜವರಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 10 =
Remember me
