ಬೆಂಗಳೂರು:ಮನೆಯಲ್ಲಿ ಸಾಕಿದ್ದ ನಾಯಿಯನ್ನು ಕಂಡ್ರೆ ಮಾರುದ್ದ ಓಡಿಹೋಗುತ್ತಿದ್ದ ಪತ್ನಿ, ಇದೇ ವಿಚಾರವಾಗಿ ಗಂಡನನ್ನು ತೊರೆದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.
ಬನಶಂಕರಿ 3ನೇ ಹಂತದ ನಿವಾಸಿ 23 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪರಮೇಶ್​ (30) ವಿರುದ್ಧ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.
ಇದನ್ನೂ ಓದರಿಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!
ಏನಿದು ಪ್ರಕರಣ?:ಖಾಸಗಿ ಕಂಪನಿಯ ಇಂಜಿನಿಯರ್​ ಆಗಿರುವ ಪರಮೇಶ್​, ಕಳೆದ ವರ್ಷ ದೂರುದಾರ ಮಹಿಳೆಯನ್ನು ವಿವಾಹವಾಗಿದ್ದರು. ಇತ್ತೀಚೆಗೆ ಪರಮೇಶ್​ ಮನೆಗೆ ಸಾಕು ನಾಯಿಯೊಂದನ್ನು ತಂದಿದ್ದರು. ಬಳಿಕ ಪತ್ನಿಗೆ ಅಲರ್ಜಿಗಿದ್ದು, ವೈದ್ಯರ ಬಳಿ ತೋರಿಸಿದಾಗ ಮನೆಯಲ್ಲಿ ಅಲ್ಲಲ್ಲಿ ಬಿದ್ದ ನಾಯಿಯ ರೋಮ ಮೈಗೆ ತಾಗಿ ಅಲರ್ಜಿ ಆಗಿರುವ ಸಾಧ್ಯತೆಗಳಿವೆ ಎಂದಿದ್ದರು. ಈ ವಿಚಾರವನ್ನು ಪತಿಯ ಗಮನಕ್ಕೆ ತಂದರೂ ನಾಯಿ ಸಾಕುವುದನ್ನು ಮುಂದುವರಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ 50 ಲಕ್ಷ ರೂ. ಹಾಗೂ ಒಡವೆಗಳನ್ನು ನೀಡಿದರೆ ಹೊಸ ಮನೆ ಖರೀದಿಸಬಹುದು. ಹೊಸ ಮನೆಯಲ್ಲಿ ನಾಯಿಗೆ ಬೇರೆ ವ್ಯವಸ್ಥೆ ಮಾಡುವುದಾಗಿ ಹೇಳಿದ ಪರಮೇಶ್,​ ಪತ್ನಿಯನ್ನು ಆಕೆಯ ತವರು ಮನೆಯಲ್ಲೇ ಬಿಟ್ಟು ಹೋಗಿದ್ದರು.
ಹಿರಿಯರು ಮಾತುಕತೆ ನಡೆಸಿ ಪರಮೇಶ್​ ಜತೆಗೆ ಪತ್ನಿಯನ್ನು ವಾಪಸ್​ ಮನೆಗೆ ಕಳುಹಿಸಿದ್ದರು. ಆದರೆ, ಮತ್ತೆ ಆಕೆಗೆ ಅಲರ್ಜಿ ಉಂಟಾಗಿತ್ತು. ಇಷ್ಟಾದರೂ ಪರಮೇಶ್​ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿರಲಿಲ್ಲ. ಕೊನೆಗೆ ಆಕೆಯ ತವರು ಮನೆಯವರೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಕೊನೆಗೆ ಪರಮೇಶ್​ರ ಈ ವರ್ತನೆಯಿಂದ ಬೇಸತ್ತ ಆಕೆ ಗಂಡನನ್ನು ತೊರೆದು ತವರು ಮನೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೆ, ಪರಮೇಶ್​ ಹಾಗೂ ಆತನ ಪಾಲಕರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಡಬಲ್​ ಮರ್ಡರ್​ ಶವಗಳನ್ನು ಶವಾಗಾರಕ್ಕೆ ಸಾಗಿಸಿ ಮನೆಗೆ ಬಂದ ಸಿಪಿಐಗೆ ಹೃದಯಾಘಾತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
