ಮಂಡ್ಯ: ಗಿಳಿ ಶಕುನ ಹೇಳಿದಂತೆ ಇಲ್ಲಿ ಶ್ವಾನ ಭವಿಷ್ಯ ನುಡಿದಿದೆ. ಅರ್ಥಾತ್, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ನಾಯಿಯೊಂದು ಸೂಚ್ಯವಾಗಿ ಹೇಳಿದೆ. ಮಂಡ್ಯ ಜಿಲ್ಲೆಯ ಅಶೋಕನಗರದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಶ್ರೀಕಾಲಭೈರವನ ಭಕ್ತರಾಗಿರುವ ಗೋಪಿ ಎಂಬುವರು ಸಾಕಿರುವ ಶ್ವಾನ ಈ ಭವಿಷ್ಯವನ್ನು ತಿಳಿಸಿದೆ. ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಪೈಕಿ ಯಾರು ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಈ ಶ್ವಾನದ ಬಳಿ ಕೇಳಲಾಗಿತ್ತು.
ಇದನ್ನೂ ಓದಿ:ಒಬ್ಬ 14 ಫ್ಲ್ಯಾಟ್​ಗಳ ಒಡೆಯ, ಇನ್ನೊಬ್ಬ 15 ಸೈಟ್​ಗಳ ಮಾಲೀಕ: ಇಲ್ಲಿದೆ ಭ್ರಷ್ಟರ ಆಸ್ತಿ ವಿವರ!
ಮನೆಯ ದೇವರ ಕೋಣೆಯಲ್ಲಿ ಈ ಮೂವರೂ ಸಿಎಂ ಆಕಾಂಕ್ಷಿಗಳ ಫೋಟೋ ಇಟ್ಟು, ನಂತರ ಭೈರವ ಹೆಸರಿನ ಈ ಶ್ವಾನಕ್ಕೆ ಪೂಜೆ ಮಾಡಿದ ಕುಟುಂಬಸ್ಥರು, ಬಳಿಕ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಯನ್ನು ಕೇಳಿದ್ದರು. ತಿರುಗಿಸಿ ಇಟ್ಟಿದ್ದ ಈ ಮೂವರ ಫೋಟೋಗಳ ಪೈಕಿ ಕುಮಾರಸ್ವಾಮಿಯ ಫೋಟೋ ಕಚ್ಚಿ ತಂದ ಶ್ವಾನ, ಆ ಮೂಲಕ ಕುಮಾರಸ್ವಾಮಿ ಮುಂದಿನ ಸಿಎಂ‌ ಎಂಬ ಸೂಚನೆ ನೀಡಿದೆ.
ಇದನ್ನೂ ಓದಿ:ಬಿಜೆಪಿ ಟಿಕೆಟ್ ಮಿಸ್, ಕೇಸರಿ v/s ಕೆಂಪು: ಪಕ್ಷೇತರ ಸ್ಪರ್ಧೆಗೆ ನುಗ್ಗಿದ ‘ಗೂಳಿ’ಹಟ್ಟಿ ಶೇಖರ್
ನಾಯಿಗೆ ಭೈರವ ಎಂದು ಹೆಸರಿಟ್ಟು ದೇವರಂತೆ ಪೂಜಿಸುವ ಈ ಮನೆಯವರು, ಪ್ರತಿವಾರ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ ಬಳಿಕ ನಾಯಿಗೂ ಪೂಜೆ ಸಲ್ಲಿಸುತ್ತಾರೆ. ಈ ಹಿಂದೆ ಇದೇ ಶ್ವಾನ ನೀಡಿದ ಸೂಚನೆಗಳು ನಿಜ ಆಗಿವೆ ಎನ್ನುವ ಈ ಮನೆಯವರು, ತಮ್ಮ ನಾಯಿಗೆ ವಿಶೇಷ ಶಕ್ತಿ ಇದೆ ಎಂದು ನಂಬಿದ್ದಾರೆ.
ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 14 =
Remember me
