ಆಯನೂರು (ಶಿವಮೊಗ್ಗ) :ಕಾಡಿಗೆ ಕಟ್ಟಿಗೆ ತರಲು ಹೋಗಿ ನಾಪತ್ತೆಯಾಗಿದ್ದ ಸೂಡೂರು ಗ್ರಾಮದ ವ್ಯಕ್ತಿಯನ್ನು ಅವರು ಸಾಕಿದ ನಾಯಿ (Pet Dog) ಪತ್ತೆ ಹಚ್ಚಿದೆ. ಸಾವಿನ ದವಡೆಯಿಂದ ಪಾರು ಮಾಡಿದ ನಾಯಿಯ ಸ್ವಾಮಿ ನಿಷ್ಠೆಗೆ ಇಡೀ ಸೂಡೂರು ಗ್ರಾಮ ಹರ್ಷ ವ್ಯಕ್ತಪಡಿಸಿ ನಾಯಿ ಮೆರವಣಿಗೆ ಮಾಡಿದೆ.
ಆಯನೂರು (Ayanuru) ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಸೂಡೂರು ಗ್ರಾಮದ 50 ವರ್ಷದ ಶೇಖರಪ್ಪ ಸೌದೆ ತರಲು ಬೆಳಗ್ಗೆ 6 ಗಂಟೆಗೆ ಸಮೀಪದ ಕಾಡಿಗೆ ಹೋಗಿದ್ದಾರೆ. ಪ್ರತಿ ಬಾರಿ ಕಾಡಿಗೆ ಹೋದಾಗ 10 ಗಂಟೆಯೊಳಗೆ ಮನೆಗೆ ವಾಪಸ್ ಬರುತ್ತಿದ್ದರು. ಆದರೆ 11 ಗಂಟೆಯಾದರೂ ಮನೆಗೆ ಬಾರದಿದ್ದಾಗ ಕೆಲವರು ಕಾಡಿಗೆ ಹೋಗಿ ನೋಡಿದ್ದಾರೆ. ಹುಡುಕಲು ಹೋದವರಿಗೆ ಶೇಖರಪ್ಪ ಸಿಗದಿದ್ದಾಗ ಗಾಬರಿಗೊಂಡು ಬಂದು ಗ್ರಾಮದಲ್ಲಿ ವಿಷಯ ತಿಳಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಶೇಖರಪ್ಪ ಅವರನ್ನು ಹುಡುಕಲು ಗ್ರಾಮದ 100 ಕ್ಕೂ ಹೆಚ್ಚು ಜನರು ಕಾಡಿಗೆ ತೆರಳಿದ್ದಾರೆ. ಪ್ರತಿ ಬಾರಿ ಅವರು ಕಾಡಿಗೆ ಹೋಗುವ ದಾರಿ, ಕಟ್ಟಿಗೆ ಹುಡುಕುವ ಸ್ಥಳ ಎಲ್ಲವನ್ನೂ ನೋಡಿದ್ದಾರೆ, ಕಾಡಿನಲ್ಲಿ ಕೂಗಿದ್ದಾರೆ. ಯಾವುದಕ್ಕೂ ಪ್ರತಿಕ್ರಿಯೆ ಬಾರದಿದ್ದಾಗ ಏನಾಗಿರಬಹುದು ಎಂದು ಗ್ರಾಮಸ್ಥರು ಗಾಬರಿಯಾಗಿದ್ದಾರೆ.
ಕಾಣೆಯಾದ ಶೇಖರಪ್ಪ ಅವರನ್ನು ಹುಡುಕಲು ಗ್ರಾಮಸ್ಥರೊಂದಿಗೆ ಶೇಖರಪ್ಪ ಸಾಕಿದ ನಾಯಿಯೂ ಹೋಗಿದೆ. ಸಂಜೆ 4 ಗಂಟೆ ಸುಮಾರಿಗೆ ಶೇಖರಪ್ಪ ಅವರನ್ನು ಪತ್ತೆ ಹಚ್ಚಿದ ನಾಯಿ, ಗ್ರಾಮಸ್ಥರನ್ನು ಸ್ಥಳಕ್ಕೆ ಕರೆ ತಂದಿದೆ. ಗ್ರಾಮಸ್ಥರು ಬಂದು ನೋಡಿದಾಗ ಶೇಖರಪ್ಪ ಮರದ ಕೆಳಗೆ ಪ್ರಜ್ಞೆ ಇಲ್ಲದೆ ಬಿದ್ದಿರುವುದು ಕಂಡಿದೆ. ತಕ್ಷಣವೇ ಗ್ರಾಮಸ್ಥರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
VIDEO| ಅಶ್ಲೀಲ ಕಾಮೆಂಟ್​ ಮಾಡುವವರಿಗೆ ಬೋಲ್ಡ್​ ವಿಡಿಯೋ ಹರಿಬಿಟ್ಟು ತಿರುಗೇಟು ನೀಡಿದ ನಟಿ ಆಶು ರೆಡ್ಡಿ

VIDEO: ಜಲ ಬಂಧನದಲ್ಲೇ ವಿವಾಹ ಬಂಧನಕ್ಕೊಳಗಾದ ನವ ಜೋಡಿ!

ಸಾನಿಯಾ-ಶೋಯಿಬ್​​ ಮಧ್ಯೆ ಆಯೇಶಾ? ಡಿವೋರ್ಸ್​ ವದಂತಿಗೆ ಸ್ಫೋಟಕ ತಿರುವು ಕೊಟ್ಟ ಪಾಕ್​ ಮಾಧ್ಯಮಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
