ಬೆಳಗಾವಿ:ಇಂತಹ ಘಟನೆಗಳು ನಡೆಯುವುದು, ಕಾಣಸಿಗುವುದು ಬಹಳ ವಿರಳ. ಅಂತಹದ್ದೊಂದು ಅಪರೂಪದ ಘಟನೆ ಇದೀಗ ಬೆಳಗಾವಿಯ ನಿಪ್ಪಾಣಿ ತಾಲೂಕಿನ ಯಮಗಾರ್ನಿ ಗ್ರಾಮದಲ್ಲಿ ಸಂಭವಿಸಿದೆ. ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ಮಾಲೀಕನಿಂದ ದೂರವಾಗಿದ್ದ ಶ್ವಾನವೊಂದು, ಅಲ್ಲಿಂದ 250 ಕಿ.ಮೀ ಪ್ರಯಾಣಿಸಿ, ಕಡೆಗೂ ತನ್ನ ಮಾಲೀಕನ ಮನೆ ಸೇರಿದೆ. ಈ ವಿಷಯ ತಿಳಿಯುತ್ತಿದ್ದಂತೆ ಊರಿನ ಗ್ರಾಮಸ್ಥರು ಹಬ್ಬದಂತೆ ಸಂಭ್ರಮಿಸಿದ್ದು, ಶ್ವಾನದ ಕೊರಳಿಗೆ ಹೂವಿನ ಮಾಲೆ ಹಾಕಿ, ಸಿಹಿ ಹಂಚಿದ್ದಾರೆ.
ಇದನ್ನೂ ಓದಿ:ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕೊಠಡಿ ತೆರವು :ವಿಪತ್ತು ನಿರ್ವಹಣಾ ತಂಡ ಶ್ರಮದಾನ
‘ಮಹಾರಾಜ’ ಎಂದು ಕರೆಯಲ್ಪಟ್ಟ ಕಪ್ಪುಬಣ್ಣದ ಶ್ವಾನವೊಂದು ಕಳೆದ ಜೂನ್ ತಿಂಗಳಲ್ಲಿ ತನ್ನ ಮನೆಯ ಮಾಲೀಕ ಕಮಲೇಶ್​ ಕುಂಬಾರ ಅವರೊಂದಿಗೆ ದಕ್ಷಿಣ ಮಹಾರಾಷ್ಟ್ರದ ಪಂಢರಪುರದ ತೀರ್ಥಕ್ಷೇತ್ರಕ್ಕೆ ತೆರಳಿತ್ತು. ಪ್ರತಿವರ್ಷ ಭೇಟಿ ಕೊಡುವ ಕಮಲೇಶ್​ ಈ ಬಾರಿ ಕೂಡ ದೇವಾಲಯಕ್ಕೆ ಹೋಗಿದ್ದರು. ಮಾಲೀಕನನ್ನು ಬಿಟ್ಟಿರದ ಸಾಕುನಾಯಿ, ಅವರ ಜತೆಯಲ್ಲೇ ಅಷ್ಟು ದೂರ ಪ್ರಯಾಣಿಸಿತು. ಜನರಿಂದ ತುಂಬಿಹೋಗಿದ್ದ ಸ್ಥಳದಲ್ಲಿ ಕಮಲೇಶ್​ರಿಂದ ಶ್ವಾನ ಬೇರ್ಪಟ್ಟಿತ್ತು. ಎಷ್ಟು ಹುಡುಕಿದರೂ ಸಿಗದ ಕಾರಣ ಕುಂಬಾರ ತಮ್ಮ ಊರಿಗೆ ಬೇಸರಿಂದಲೇ ಹಿಂತಿರುಗಿದ್ದರು.
ಜೂನ್​ 14ರಂದು ಮನೆಗೆ ಹಿಂತಿರುಗಿದ್ದ ಕಮಲೇಶ್​ ಕುಟುಂಬಸ್ಥರಿಗೆ ಮಹಾರಾಜ ನಾಪತ್ತೆಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಕಣ್ಮರೆಯಾದ ಸಾಕುನಾಯಿ ಬಗ್ಗೆ ಹೆಚ್ಚು ಯೋಚಿಸದೆ ಸುಮ್ಮನಾದ ಮಾಲೀಕನಿಗೆ ಅಚ್ಚರಿ ಮೂಡಿಸಿದ್ದು, ತನ್ನ ಮನೆಯ ಬಾಗಿಲಲ್ಲಿ ಶ್ವಾನ ಬಂದು ಬೊಗಳಿದಾಗ. ತಕ್ಷಣವೇ ಮುದ್ದಾಡಿದ ಕಮಲೇಶ್​, ಮಾತು ಬಾರದೆ ಮೂಕವಿಸ್ಮಿತರಾಗಿದ್ದಾರೆ. ಈ ವಿಷಯ ತಿಳಿದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಇದು ನಿಜಕ್ಕೂ ಪವಾಡ. ಇದು ಹೇಗೆ ಸಾಧ್ಯ? 250 ಕಿ.ಮೀನಿಂದ ಮಹಾರಾಜ ಬಂದದ್ದು ಹೇಗೆ? ಎಂದು ಪ್ರಶ್ನಿಸಿದ್ದಾರೆ. ಊರಿನವರು ಮಾಹಿತಿ ಪಡೆದ ಬೆನ್ನಲ್ಲೇ ಶ್ವಾನಕ್ಕೆ ಹೂವಿನ ಹಾರ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ:ಕಾಲಿವುಡ್‌ನಲ್ಲಿ ಹೊಸ ವಾರ್!: ನ. 1ರಿಂದ ಚಿತ್ರೀಕರಣ ಬಂದ್ ಮಾಡಲು ನಿರ್ಮಾಪಕರ ತೀರ್ಮಾನ
“ವಿಠ್ಠಲ ದೇವಸ್ಥಾನದ ದರ್ಶನ ಮುಗಿಸಿ ಹೊರಬಂದು ನೋಡಿದಾಗ ಮಹಾರಾಜ ಕಾಣೆಯಾಗಿದ್ದ. ಇದು ನನ್ನ ಗಮನಕ್ಕೆ ಬಂದಿತು. ತಕ್ಷಣ ನನಗೆ ಸುತ್ತುಮುತ್ತಲಿನಲ್ಲಿದ್ದವರು ಶ್ವಾನ ಬೇರೊಂದು ತಂಡದೊಂದಿಗೆ ಹೋಯಿತು. ಅದನ್ನು ನಾವು ನೋಡಿದೆವು ಎಂದರು. ಎಲ್ಲಾ ಕಡೆ ಹುಡುಕಿದೆ. ಎಷ್ಟು ಬಾರಿ ಹುಡುಕಿದರೂ ಸಿಗಲಿಲ್ಲ. ಕಡೆಗೆ ಬೇರೆ ದಾರಿಯಿಲ್ಲದೆ ಮನೆಗೆ ಹಿಂತಿರುಗಿದ್ದೆ. ಆದರೆ, ನನ್ನ ಮನೆಯ ಮುಂದೆ ಮಹಾರಾಜ ಬಂದು ನಿಂತಾಗ ಎಲ್ಲಿಲ್ಲದ ಸಂತಸ ಮೂಡಿತು. ಆತ ಸರಿಯಾಗಿ ಊಟ ಸೇವಿಸಿದ್ದಾನೆ ಹಾಗೂ ಆರೋಗ್ಯವಾಗಿದ್ದಾನೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ಟಿ20 ಕ್ರಿಕೆಟ್​ನಲ್ಲಿ ಈ ಐತಿಹಾಸಿಕ ದಾಖಲೆ ಬರೆದ 2ನೇ ಕ್ರಿಕೆಟಿಗ ರಶೀದ್​ ಖಾನ್​! ಅಭಿನಂದನೆಗಳ ಸುರಿಮಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
