ಬೆಂಗಳೂರು:ಬೆಂಗಳೂರಿನ ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡವರಿಗೆ ಡೊಮಿನೋಸ್ ಏಜೆಂಟ್‌ಗಳು ಟ್ರಾಫಿಕ್‌ ಸಿಗ್ನಲ್​ಗೆ ಬಂದು ಆಹಾರವನ್ನು ತಲುಪಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಬುಧವಾರ ಸಾಮಾನ್ಯ ದಿನಕ್ಕಿಂತ ದುಪ್ಪಟ್ಟು ಸಂಚಾರ ದಟ್ಟಣೆ ಉಂಟಾಗಿತ್ತು. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲದೊಂದಿಗೆ ರೈತರು ಮತ್ತು ಕನ್ನಡ ಒಕ್ಕೂಟಗಳು ನಿನ್ನೆ ಬಂದ್‌ಗೆ ಕರೆ ನೀಡಿದ್ದರಿಂದ ಬೆಂಗಳೂರಿನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು . ಆದರೆ  ಸಾಲು ಸಾಲು ರಜೆ ಹಾಗೂ ಮಳೆ ಇರುವುದರಿಂದ ಊರಿಗೆ ಜನರು ಹೊರಡುತ್ತಿರುವ ಹಿನ್ನೆಲೆ ನಿನ್ನೆ ಟ್ರಾಫಿಕ್​​ ಉಂಟಾಗಿತ್ತು ಎನ್ನಲಾಗಿದೆ. ರಿಂಗ್​ ರೋಡ್​ ಬಳಿ ಟ್ರಾಫಿಕ್​ ಉಂಟಾಗಿತ್ತು ಎನ್ನಲಾಗಿದೆ.
ಬೆಂಗಳೂರಿನಲ್ಲಿ ಬುಧವಾರ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.ಹಿಂದೆಂದೂ ಕಾಣದ ರೀತಿಯಲ್ಲಿ ಗಂಟೆಗಟ್ಟಲೆ ವಾಹನಗಳು ನಿಂತಿದ್ದವು. ರಸ್ತೆಗಳಲ್ಲಿ ನಿಮಿಷಕ್ಕೆ ಒಂದು ಇಂಚು ಕಾರುಗಳು ಚಲಿಸುತ್ತಿದ್ದವು.ಟ್ರಾಫಿಕ್‌ನಲ್ಲಿ ಸಿಲುಕಿದ ಜನರು ಹಸಿವಿನಿಂದ ಆಹಾರವನ್ನು ಆರ್ಡರ್ ಮಾಡಿದರು. ಡೊಮಿನೊ ಡೆಲಿವರಿ ಏಜೆಂಟ್‌ಗಳು ಆಹಾರವನ್ನು ತಲುಪಿಸುವ ವೀಡಿಯೊ ವೈರಲ್ ಆಗುತ್ತಿದೆ.
When we decided to order from@dominosduring the Bangalore choke. They were kind enough to track our live location (a few metres away from our random location added in the traffic) and deliver to us in the traffic jam.#Bengaluru#bengalurutraffic#bangaloretrafficpic.twitter.com/stnFDh2cHz
— Rishivaths (@rishivaths)September 27, 2023

ಟ್ರಾಫಿಕ್‌ನಲ್ಲಿ ಸಿಲುಕಿದ ಜನರು ಹಸಿವಿನಿಂದ ಆಹಾರವನ್ನು ಆರ್ಡರ್ ಮಾಡಿದರು. ಭಾರೀ ಟ್ರಾಫಿಕ್‌ ಜಾಮ್​ ಆಗಿರುವುದರಿಂದ ಲೈವ್ ಸ್ಥಳವನ್ನು ಟ್ರ್ಯಾಕ್ ಮಾಡುವುದು ಡೆಲಿವರಿ ಏಜೆಂಟ್‌ಗಳಿಗೆ ಸವಾಲಾಗಿದೆ. ಆದರೆ, ಡೊಮಿನೊ ಫುಡ್ ಡೆಲಿವರಿ ಏಜೆಂಟರು ಸಮಯಕ್ಕೆ ಸರಿಯಾಗಿ ಕಾರುಗಳಿಗೆ ಆಹಾರವನ್ನು ತಂದು ವಿತರಿಸಿದರು.
ಟ್ವಿಟರ್ ಬಳಕೆದಾರರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.‘ಬೆಂಗಳೂರು ಟ್ರಾಫಿಕ್‌ನಲ್ಲಿ ನಮ್ಮ ಲೈವ್ ಲೊಕೇಶನ್ ಅನ್ನು ಅವರು ಟ್ರ್ಯಾಕ್ ಮಾಡಿದ್ದಾರೆ ಮತ್ತು ಟ್ರಾಫಿಕ್ ಜಾಮ್‌ನಲ್ಲಿಯೂ ನಮಗೆ ಆಹಾರವನ್ನು ತಲುಪಿಸಿದ್ದಾರೆ’ ಎಂಬ ಶೀರ್ಷಿಕೆಯ ಪೋಸ್ಟ್‌ನಲ್ಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 9 =
Remember me
