ನವದೆಹಲಿ:ಪಿಜ್ಜಾ ಎಂದರೆ ಕೆಲವರಿಗೆ ತುಂಬಾ ಇಷ್ಟ. ತಿನ್ಬೇಕು ಅಂತಾ ಆಸೆಯಾದ್ರೂ ಬೆಲೆ ನೋಡಿ ಅನೇಕರು ಯೋಜನೆ ಕೈ ಬಿಡ್ತಾರೆ. ಇನ್ಮುಂದೆ ಹಾಗೆ ಮಾಡ್ಬೇಕಾಗಿಲ್ಲ. ಡೊಮಿನೊಸ್ ಕಡಿಮೆ ಬೆಲೆಯಲ್ಲಿ ಹೊಸ ಪಿಜ್ಜಾ ಲಾಂಚ್ ಮಾಡಿದೆ.

ಡೊಮಿನೊಸ್ ಪಿಜ್ಜಾ ಭಾರತದ ಫ್ರಾಂಚೈಸಿ ಸಿಇಒ ಮಾತನಾಡಿ, ಡೊಮಿನೊಸ್ ಕಂಪನಿ ಅತ್ಯಂತ ಅಗ್ಗದ ಪಿಜ್ಜಾ ಪರಿಚಯ ಮಾಡಿದೆ. ಬೆಲೆ ಕೇವಲ 49 ರೂಪಾಯಿ. ನಿರಂತರವಾಗಿ ಏರ್ತಿರುವ ಬೆಲೆ ನಮ್ಮ ಲಾಭದ ಮೇಲೆ ಪರಿಣಾಮ ಬೀರುತ್ತದೆ. ಗ್ರಾಹಕರನ್ನು ತೃಪ್ತಿಪಡಿಸುವುದು ನಮ್ಮ ಗುರಿ. ಅತಿ ಕಡಿಮೆ ಬೆಲೆಗೆ ಅವರಿಗೆ ಪಿಜ್ಜಾ ಸಿಗುವಂತಾಗ್ಲಿ ಎನ್ನುವ ಕಾರಣಕ್ಕೆ ನಾವು ಇದನ್ನು ಲಾಂಚ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಡೊಮಿನೊಸ್ ಪರಿಚಯ ಮಾಡ್ತಿರುವ 49 ರೂಪಾಯಿ ಬೆಲೆಯ ಪಿಜ್ಜಾ 7 ಇಂಚುಗಳಿರಲಿದೆ. ಭಾರತದ ಎಲ್ಲ ಡೊಮಿನೊಸ್ ಶಾಖೆಯಲ್ಲಿ ನಿಮಗೆ 49 ರೂಪಾಯಿ ಬೆಲೆಯ ಪಿಜ್ಜಾ ಸಿಗಲಿದೆ.

ಇದನ್ನೂ ಓದಿ:ಮಳೆಗಾಲದಲ್ಲಿ ಒದ್ದೆಯಾದ ಶೂ, ಚಪ್ಪಲಿ ಧರಿಸುವುದು ಸೋಂಕಿಗೆ ಕಾರಣವಾಗಬಹುದು; ಈ 3 ವಿಷಯಗಳ ಬಗ್ಗೆ ಕಾಳಜಿ ವಹಿಸಿ
ಭಾರತದಲ್ಲಿ 49 ರೂಪಾಯಿಗೆ ಫಿಜ್ಜಾ ಸಿಕ್ಕಿದ್ರೆ, ಚೀನಾದ ಶಾಂಘೈನಲ್ಲಿ 3.80 ಡಾಲರ್ ಗೆ ಪಿಜ್ಜಾ. ಅದೇ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಅತಿ ಕಡಿಮೆ ಬೆಲೆ ಪಿಜ್ಜಾ ಬೆಲೆ 12 ಡಾಲರ್ ಆಗಿದೆ.

ಇದನ್ನೂ ಓದಿ:ವಿಶ್ವದಾಖಲೆಗಾಗಿ 7 ದಿನಗಳ ಕಾಲ ಎಡೆಬಿಡದೆ ಕಣ್ಣೀರಿಟ್ಟ!
ಭಾರತದ ಮಾರುಕಟ್ಟೆಯಲ್ಲಿ ಉಳಿದ ಫಾಸ್ಟ್ ಫುಡ್ ಗಳ ಬೆಲೆ ತುಂಬಾ ಕಡಿಮೆಯಿದೆ. ನಿಮಗೆ ಸಮೋಸಾ ಕೇವಲ 10 ರೂಪಾಯಿಗೆ ಸಿಗುತ್ತದೆ. ಜನರು ಪಿಜ್ಜಾ ಮೇಲೆ ಆಸೆಯಿದ್ರೂ ಬೆಲೆ ಹೆಚ್ಚಾಗಿರುವ ಕಾರಣಕ್ಕೆ ಪಿಜ್ಜಾ ಬದಲು ಬೇರೆ ಫಾಸ್ಟ್ ಫುಡ್ ಮೊರೆ ಹೋಗುತ್ತಾರೆ. ಹೀಗಾಗಿ ಬೆಲೆ ಕಡಿಮೆ ಮಾಡುವುದು ಅನಿವಾರ್ಯವಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಕೂಗಾಡಿದ್ದಕ್ಕೆ ಅರೆಸ್ಟ್!; ಸೋಶಿಯಲ್​​ ಮೀಡಿಯಾ ಸ್ಟಾರ್​ಗೆ​​ 2 ತಿಂಗಳು ಜೈಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 18 =
Remember me
