
ಕೋಟ:ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1 ಲಕ್ಷ ರೂ. ನೀಡಿದ್ದ ಅಜ್ಜಿ ಅಶ್ವತ್ಥಮ್ಮ ವ್ರತಾನುಷ್ಠಾನದೊಂದಿಗೆ 26ನೇ ಬಾರಿ ಶ್ರೀ ಶಬರಿಮಲೆ ಕ್ಷೇತ್ರಕ್ಕೆ ಯಾತ್ರೆ ಹೊರಟಿದ್ದಾರೆ.
ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಅನ್ನದಾನ ಪೂರೈಸಿ ಶಬರಿಮಲೆ ಯಾತ್ರೆ ಹೊರಟಿದ್ದಾರೆ. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಹಾಗೂ ಮಯ್ಯ ಟಿಫಿನ್ ಮಾಲೀಕ ರಾಫವೇಂದ್ರ ಮಯ್ಯ ಸಮ್ಮುಖದಲ್ಲಿ ಅಶ್ವಥಮ್ಮ ಇರುಮುಡಿ ಕಟ್ಟುವ ಕಾರ್ಯ ನಡೆಸಿದರು.
26 ವರ್ಷಗಳಿಂದ ವಿವಿಧ ಕ್ಷೇತ್ರಗಳಿಗೆ ದಾನಗೈದು ಶಬರಿಮಲೆ ಯಾತ್ರೆ ಕೈಗೊಂಡಿದ್ದು, ಅದರಂತೆ ತಾನು ಭಿಕ್ಷಾಟನೆ ಮಾಡಿ ಸಂಗ್ರಹಿಸಿದ ಹಣವನ್ನು ಉಡುಪಿ, ದಕ್ಷಿಣಕನ್ನಡ ಸೇರಿದಂತೆ ಹೊರರಾಜ್ಯ ಕೇರಳದ ಅಯ್ಯಪ್ಪನ ಸನ್ನಿಧಾನಕ್ಕೂ ಲಕ್ಷ ರೂ. ನೀಡಿ ಮನೆಮಾತಾಗಿದ್ದಾರೆ.
ಅಯ್ಯಪ್ಪನ ಕ್ಷೇತ್ರ ಸಂದರ್ಶನಕ್ಕೆ ಹೊರಟಿರುವ ಅಶ್ವಥಮ್ಮನಿಗೆ ಗುರುನರಸಿಂಹ, ಆಂಜನೇಯ ಶ್ರೇಯಸ್ಸನ್ನು ಉಂಟುಮಾಡಲಿ ಎಂದು ಸಾಲಿಗ್ರಾಮ ದೇವಳ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಆಡಳಿತ ಹಾರೈಸಿದ್ದಾರೆ.
ಚಳಿಯೆಂದು 500 ರೂಪಾಯಿಯ ನೂರಾರು ನೋಟು ಸುಟ್ಟ! ಕಸದ ರಾಶಿಯ ಮೇಲೆ ನೆಮ್ಮದಿಯಿಂದ ಮಲಗಿದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 14 =
Remember me
