ಬೆಂಗಳೂರು:ಕರ್ನಾಟಕ ವಿದ್ಯಾರ್ಥಿ ಕೂಟ ಟ್ರಸ್ಟ್‌ ಬೆಂಗಳೂರು ಮತ್ತು ಭಾರತ್‌ ವಿದ್ಯಾ ಸಂಸ್ಥೆ, ಜಯನಗರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿ ದಿನಾಚರಣೆಯನ್ನು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯಪುರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ:ಅಸಹಜ ಲೈಂಗಿಕ ದೌರ್ಜನ್ಯ ಆರೋಪ: ಸೂರಜ್ ರೇವಣ್ಣ ವಿರುದ್ದ ದಾಖಲಾಯ್ತು ಎಫ್​ಐಆರ್​
ಬಳಿಕ ಮಾತನಾಡಿದ ಅವರು, ಇಂದಿನ ಯಾಂತ್ರಿಕ ಯುಗದಲ್ಲಿ ರಕ್ತದಾನಿಗಳ ಸಂಖ್ಯೆ ಬಹಳ ವಿರಳವಾಗುತ್ತಿದೆ, ಇಂತಹ ನಿಟ್ಟಿನಲ್ಲಿ ಇಂದಿನ ಯುವ ಜನಾಂಗಕ್ಕೆ ಇದರ ಬಗ್ಗೆ ಅರಿವು ಮೂಡಿಸಬೇಕಾಗಿರುವುದು ಅತ್ಯಗತ್ಯವಾಗಿದೆ ಎಂದರು.

ದೇಶದ ಯುವಕ, ಯುವತಿಯರು ರಕ್ತದಾನಿಗಳಾಗಿ ಮುಂದೆ ಬಂದರೆ ಇನ್ನೊಂದು ಜೀವಕ್ಕೆ ಜೀವದಾನ ಮಾಡಿ, ಅವರ ಬದುಕಿಗೆ ಬೆಳಕಾಗಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯೋನ್ಮುಖ ವಾಗಬೇಕಾಗಿದೆ. ಜೊತೆಗೆ ಎಲ್ಲ ದಾನಗಳಿಗಿಂತಲು ರಕ್ತದಾನ ಬಹಳ ಪ್ರಮುಖವಾದದ್ದು ಎಂದು ಹೇಳಿದರು.
ಮನುಷ್ಯ ಹುಟ್ಟಿದಾಗಿನಿಂದಲು ಸಾಯುವವರೆಗು ತಮ್ಮ ಜೀವನದ ಸಾರ್ಥಕತೆ ಪಡೆಯಬೇಕಾದರೆ ಅವನ ಜೀವಿತಾವಧಿಯಲ್ಲಿ ಇನ್ನೊಬ್ಬರ ಬಾಳಿಗೆ ದಾರಿದೀಪವಾಗುವುದಕ್ಕೆ ನಾವುಗಳು ಅಂಗದಾನ, ದೇಹದಾನ ಮತ್ತು ರಕ್ತದಾನ ಮಾಡುವ ಮೂಲಕ ನಮ್ಮ ಜೀವನದ ಸಾರ್ಥಕತೆಯನ್ನು ಮೆರೆಯಬೇಕು ಎಂದರು. ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು ಕೂಡ ವಿಶ್ವ ರಕ್ತದಾನಿ ದಿನಾಚರಣೆ ಪ್ರಯುಕ್ತ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಕೆ.ಆರ್. ನಿರ್ಮಲ್ ಕುಮಾರ್, ಬಿ.ಸಿ ಶಿವಲಿಂಗೇಗೌಡ, ಡಾ. ಬೈರಮಂಗಲ ರಾಮೇಗೌಡ, ದಿವ್ಯ ಕೆ ಮೂರ್ತಿ, ಹರ್ಷ ಎಲ್‌, ಪ್ರೊಫ್ ಎನ್ ಅಶೋಕ್ ಕುಮಾರ್ ಉಪಸ್ಥಿತರಿದ್ದರು.
ಜೋಧ್‌ಪುರದಲ್ಲಿ ಕೋಮುಗಲಭೆ: 51 ಮಂದಿ ಬಂಧನ, ಇಬ್ಬರು ಪೊಲೀಸರಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + three =
Remember me
