ಬೆಂಗಳೂರು: ದಲಿತರು, ಬಡವರು, ಬುಡಕಟ್ಟು, ಆದಿವಾಸಿ ಸಮುದಾಯದ ಮಕ್ಕಳ ಶಿಕ್ಷಣದ ಬಗ್ಗೆ ಅಸಡ್ಡೆ ಬೇಡವೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿ, ಏನೆಲ್ಲ ಕ್ರಮವಹಿಸಬೇಕು ಎಂದು ಪಾಠ ಮಾಡಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರಗತಿ ಮಂಗಳವಾರ ಪರಿಶೀಲಿಸಿದ ಅವರು, ಹಾಸ್ಟೆಲ್‌ಗಳು, ಆಶ್ರಮ ಶಾಲೆಗಳಿವೆ. ಅಗತ್ಯ ಸವಲತ್ತು ಕಲ್ಪಿಸಿ ಅನುದಾನ ಒದಗಿಸುತ್ತಿದ್ದರೂ ಮಕ್ಕಳ ಶೈಕ್ಷಣಿಕಮಟ್ಟ ಸುಧಾರಿಸಿಲ್ಲವೇಕೆ ? ಎಂದು ಕೇಳಿದ ಅವರು, ಆಶ್ರಮ ಶಾಲೆಗಳಿಗೆ ರಾತ್ರಿ ವೇಳೆ ಅಧಿಕಾರಿಗಳು ಭೇಟಿ ನೀಡದ್ದಕ್ಕೆ ತರಾಟೆಗೆ ತೆಗೆದುಕೊಂಡರು.
ಕೆಲವು ಆಶ್ರಮ ಶಾಲೆಗಳಲ್ಲಿ ರಾತ್ರಿ ವೇಳೆ ಮಕ್ಕಳು ಇರುವುದಿಲ್ಲ. ರಾತ್ರಿ ಊಟವಾದ ನಂತರ ಚಿಕ್ಕ ಮಕ್ಕಳು ಎಂದು ಮನೆಗೆ ಕರೆದುಕೊಂಡು ಹೋಗುತ್ತಾರೆ. ಎಲ್ಲ ಸೌಲಭ್ಯಗಳಿದ್ದೂ ಮನೆಗೆ ಎಕೆ ಕರೆದುಕೊಂಡು ಹೋಗುತ್ತಾರೆ ? ಈ ಬಗ್ಗೆ ಪರಾಮರ್ಶಿಸಿ ಪಾಲಕರ ಮನವೊಲಿಸಲು ಸೂಚಿಸಿದರು.
ಬಡವರು, ದಲಿತರು, ಆದಿವಾಸಿ, ಬುಡಕಟ್ಟು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದರೆ ನೀವು ಸೇವೆಯಲ್ಲಿರಲು ಅನರ್ಹವೆಂದು ಸಿಎಂ ಸಿದ್ದರಾಮಯ್ಯ ುಲ್ ಕ್ಲಾಸ್ ತೆಗೆದುಕೊಂಡರು.
ಹಾಸ್ಟೆಲ್‌ಗಳಿಗೆ ಸಂಜೆ ವೇಳೆಗೆ ಭೇಟಿ ನೀಡಿ, ಶುಚಿ ಕಿಟ್‌ಗಳು, ಆಹಾರ ಪದಾರ್ಥ ಸಮರ್ಪಕ ವಿತರಣೆ ಬಗ್ಗೆ ಪರಿಶೀಲಿಸಬೇಕು. ಆದಿವಾಸಿ, ಬುಡಕಟ್ಟು ವಸತಿ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಬೇಕಾದ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಬೇಕು ಎಂದರು.
ವಸತಿ ಶಾಲೆಯ ಮಕ್ಕಳು ಇತರ ವಿದ್ಯಾರ್ಥಿಗಳೊಂದಿಗೆ ಸಮರ್ಥವಾಗಿ ಸ್ಪರ್ಧಿಸುವಂತಾಗಬೇಕು. ಸ್ಮಾರ್ಟ್ ಕ್ಲಾಸ್‌ಗಳ ವ್ಯವಸ್ಥೆ ಸದ್ಬಳಕೆ ಮಾಡಿಕೊಳ್ಳಬೇಕು. ಕೇವಲ ಬುದ್ಧಿವಂತರನ್ನು ಇನ್ನಷ್ಟು ಬುದ್ಧಿವಂತರಾಗಿಸುವುದು ಮಾತ್ರವಲ್ಲ, ಕಲಿಕೆಯಲ್ಲಿ ಹಿಂದುಳಿದವರನ್ನೂ ಬುದ್ಧಿವಂತರಾಗಿಸಬೇಕು ಕಿವಿಮಾತು ಹೇಳಿದರು.
ಇಲಾಖೆಗೆ 2023-24ರ ಆಯವ್ಯಯದಲ್ಲಿ ಒಟ್ಟಾರೆ 1884.01 ಕೋಟಿ ರೂ. ಬಿಡುಗಡೆಯಾಗಿದೆ. 1879.35 ಕೋಟಿ ರೂ. ವೆಚ್ಚವಾಗಿ ಶೇ.99.75ರಷ್ಟು ಸಾಧನೆಯಾಗಿದೆ. ಮೆಟ್ರಿಕ್ ಪೂರ್ವ 2,90,545 ವಿದ್ಯಾರ್ಥಿಗಳಿಗೆ 50.47 ಕೋ.ರೂ., ಮೆಟ್ರಿಕ್ ನಂತರದ 2,48,887 ವಿದ್ಯಾರ್ಥಿಗಳಿಗೆ 302.64 ಕೋಟಿ ರೂ. ವಿದ್ಯಾರ್ಥಿ ವೇತನ ಪಾವತಿಸಲಾಗಿದೆ.
ಇಲಾಖೆ 389 ಹಾಸ್ಟೆಲ್‌ಗಳು, ಆದಿವಾಸಿ ಬುಡಕಟ್ಟು ವಸತಿ ಶಾಲೆಗಳಲ್ಲಿ 39,541 ಮಕ್ಕಳಿಗೆ ಪ್ರವೇಶಾವಕಾಶ ಒದಗಿಸಿ, 194.71 ಕೋಟಿ ರೂ., ನೀಡಲಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.77ರಷ್ಟು ಲಿತಾಂಶ ಬಂದಿದೆ ಎಂದು ಸಭೆಗೆ ಅಧಿಕಾರಿಗಳು ವಿವರಿಸಿದರು.
ಪರಿಶಿಷ್ಟ ಪಂಗಡದ ಶಾಲೆಗಳ ಪೈಕಿ 108 ಸ್ವಂತ ಕಟ್ಟಡ, 30 ಬಾಡಿಗೆ ಆರು ಬಾಡಿಗೆರಹಿತ ಕಟ್ಟಡಗಳಲ್ಲಿವೆ ಎಂದು ಅಧಿಕಾರಿಗಳು ಹೇಳಿದಾಗ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಜತೆ ಖುದ್ದಾಗಿ ಅನುಸರಣೆ ಮಾಡಲು ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದರು.
ಅನುದಾನ ಲಭ್ಯವಿದೆ ಎಂಬ ಕಾರಣಕ್ಕೆ ಬೇಡಿಕೆ ಇಲ್ಲದಿದ್ದರೂ ಹಾಸಿಗೆ, ಹೊದಿಕೆ ಮತ್ತಿತರ ವಸ್ತುಗಳ ಅನಗತ್ಯವಾಗಿ ಖರೀದಿಸಿ ಗುಡ್ಡೆ ಹಾಕುವುದು ಬೇಡ. ಅನಗತ್ಯವಾಗಿ 4ಜಿ ವಿನಾಯಿತಿ ಪಡೆಯುವ ಬದಲು ನೇರವಾಗಿ ಟೆಂಡರ್ ಕರೆದು, ಸೇವೆಗಳನ್ನು ಪಡೆಯಬೇಕು ಎಂದು ಸೂಚಿಸಿದರು.
ಸಿಂಧುತ್ವ ಪ್ರಮಾಣಪತ್ರಕ್ಕೆ ಸಂಬಂಧಿಸಿದ 22 ಪ್ರಕರಣಗಳು ಹಲವು ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿಯಿದೆ. ಇವುಗಳಲ್ಲಿ ಎಲ್ಲ ಪ್ರಕರಣಗಳನ್ನು ಸಿ.ಆರ್.ಇ.ಸೆಲ್‌ಗೆ ಕಳುಹಿಸಬಾರದು. ಗೊಂದಲ ಇದ್ದಲ್ಲಿ ಮಾತ್ರ ಕಳುಹಿಸಲು ಸುತ್ತೋಲೆ ಹೊರಡಿಸಬೇಕು ಎಂದೂ ಸಿಎಂ ಹೇಳಿದರು.
ಇಲಾಖೆ ವಿವಿಧ ಯೋಜನೆಗಳಡಿ ಲಾನುಭವಿಗಳ ಆಯ್ಕೆ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಶಾಸಕರು ನಿರಾಸಕ್ತಿ ತೋರಿದರು. ಇದರಿಂದಾಗಿ 2023-24ರ 263 ಕೋಟಿ ರೂ. ಖರ್ಚು ಮಾಡಲಾಗದೆ ಖಜಾನೆ ಜಮಾ ಮಾಡಿರುವುದು ಸಭೆಯಲ್ಲಿ ಬಹಿರಂಗವಾಯಿತು.
ವಿವಿಧ ಯೋಜನೆಗಳಡಿ ಪ್ರತಿ ವರ್ಷವೂ ಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದೇನಿಲ್ಲ. ಆದರೆ ಕಡಿಮೆ ಸಂಖ್ಯೆ ಲಾನುಭವಿಗಳ ಆಯ್ಕೆ ಸಮಸ್ಯೆಯಾಗುತ್ತದೆ ಎಂದು ಶಾಸಕರು ಪಟ್ಟಿ ಸಲ್ಲಿಸಿಲ್ಲ. ಈ ಕಾರಣಕ್ಕೆ ಸಂದಿಗ್ಧತೆ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೆಲ್ಲ ಆಲಿಸಿದ ಸಿಎಂ ಸಿದ್ದರಾಮಯ್ಯ, ಯೋಜನೆಗಳು, ಅನುದಾನ ಸದ್ಬಳಕೆ ಹಾಗೂ ಲಾನುಭವಿಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು. ಈ ಸಭೆಯಲ್ಲಿ ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಎಸ್‌ಟಿ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ನಿರ್ದೇಶಕ ಕಲ್ಲೇಶ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜ್, ನಸೀರ್ ಅಹಮದ್ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
