ಬೆಂಗಳೂರು:ಎಲ್ಲ ಹುಡುಗಿಯರು ಬಾಯ್​ಫ್ರೆಂಡ್​ ಹೊಂದಿರಬೇಕು. ಒಬ್ಬಂಟಿ ಇರುವ ಹುಡುಗಿಯರಿಗೆ ಕಾಲೇಜಿಗೆ ಪ್ರವೇಶ ಕಲ್ಪಿಸುವುದಿಲ್ಲ. ಕಾಲೇಜಿನಲ್ಲಿ ಓದಲು ಬರಬೇಕು ಅಂದ್ರೆ ನಿಮ್ಮ ಬಾಯ್​ಫ್ರೆಂಡ್​ ಜತೆಗೆ ನೀವಿರುವ ಫೋಟೋವನ್ನ ತೋರಿಸಬೇಕು..! ಈ ಅಂಶವುಳ್ಳ ಸುತ್ತೋಲೆಯನ್ನ ತಮಿಳುನಾಡಿನ ಎಸ್​ಆರ್​ಎಂ ವಿಶ್ವವಿದ್ಯಾಲಯದ ಹೆಸರಲ್ಲಿ ಹೊರಡಿಸಲಾಗಿದೆ.
ಈ ಸುದ್ದಿ ಕೇಳಿ ಕೇಳಿದಾಕ್ಷಣ ಅರೆ, ಇದೇನಿದು? ಓದೋ ವಯಸ್ಸಲ್ಲಿ ಪ್ರೀತಿ-ಗೀತಿ ಅಂತ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಬೇಕಿದ್ದ ವಿದ್ಯಾದೇಗುಲವೇ ಯುವತಿಯರಿಗೆ ಬಾಯ್​ಫ್ರೆಂಡ್​ ಕಡ್ಡಾಯ ಅನ್ನೋದಾ? ಇದೆಂತಹ ರೂಲ್ಸ್​, ಅವರಿಗೇನೂ ತಲೆಕೆಟ್ಟಿರಬೇಕು… ಎಂದು ಪಾಲಕರಾದಿಯಾಗಿ, ಸಾರ್ವಜನಿಕರೂ ಹೌಹಾರಿದ್ದಾರೆ. ಈ ಸುತ್ತೋಲೆ ಕಂಡ ಎಸ್​ಆರ್​ಎಂ ವಿಶ್ವವಿದ್ಯಾಲಯದ ಸಿಬ್ಬಂದಿಯೂ ಸಿಟ್ಟಾಗಿದ್ದಾರೆ. ಅಂದಹಾಗೆ ಈ ಸುತ್ತೋಲೆಯನ್ನ ವಾಸ್ತವದಲ್ಲಿ ವಿವಿ ಹೊರಡಿಸಿಯೇ ಇಲ್ಲ.ಇದನ್ನೂ ಓದಿರಿಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ
ಯಾರೋ ಕಿಡಿಗೇಡಿಗಳು ವಿವಿಯ ಲೆಟರ್​ ಹೆಡ್​ ದುರ್ಬಳಕೆ ಮಾಡಿಕೊಂಡು ‘ಎಲ್ಲ ವಿದ್ಯಾರ್ಥಿನಿಯರೂ ಬಾಯ್​ಫ್ರೆಂಡ್​ ಹೊಂದಿರಬೇಕು. ವಿದ್ಯಾರ್ಥಿನಿಯರ ಸುರಕ್ಷತೆ ಹಿತದೃಷ್ಟಿಯಿಂದ ಬಾಯ್​ಫ್ರೆಂಡ್​ನ ಅವಶ್ಯಕತೆ ಇದೆ. ಒಬ್ಬಂಟಿ ಇದ್ದರೆ ಅವರಿಗೆ ಪ್ರವೇಶ ಕಲ್ಪಿಸುವುದಿಲ್ಲ. ಕಾಲೇಜು ಪ್ರವೇಶಿಸಬೇಕಾದಲ್ಲಿ ಇತ್ತೀಚಿಗೆ ಬಾಯ್​ಫ್ರೆಂಡ್​ ಜತೆಗೆ ತೆಗೆದುಕೊಂಡ ಫೋಟೋ ತೋರಿಸಬೇಕು’ ಎಂದು ಪತ್ರದಲ್ಲಿ ಹೇಳಲಾಗಿದೆ. ಇದಕ್ಕೆ ವಿವಿಯ ಕುಲಸಚಿವರ ಸಹಿ ಕೂಡ ಇದೆ.
ಕಾಲೇಜು ಮರು ಪ್ರಾರಂಭ ಮತ್ತಿತರ ವಿಚಾರಗಳನ್ನು ತಿಳಿಸಲು ಇ-ಮೇಲ್​ ಕಳುಹಿಸುತ್ತೇವೆ. ಅದನ್ನೇ ಕೆಲವು ಕಿಡಿಗೇಡಿಗಳು ದುರುಪಯೋಗ ಮಾಡಿಕೊಂಡು ವಿವಿಯ ಮರ್ಯಾದೆ ಕಳೆಯಲು ಕೆಲ ಕಿಡಿಗೇಡಿಗಳು ಈ ರೀತಿಯ ನಕಲು ಸುತ್ತೋಲೆ ಸೃಷ್ಟಿಸಿದ್ದಾರೆ. ಯಾರೂ ಇದರ ಬಗ್ಗೆ ತಲೆಕೊಡಿಸಿಕೊಳ್ಳಬೇಡಿ ಎಂದು ವಿವಿಯ ಕುಲಸಚಿವರು ಮನವಿ ಮಾಡಿದ್ದಾರೆ.
ನಕಲಿ ಸುತ್ತೋಲೆ ಹೊರಡಿಸಿ ಎಲ್ಲ ಕಡೆ ವೈರಲ್​ ಮಾಡಿರುವವರನ್ನು ಪತ್ತೆ ಹಚ್ಚಿ ಶಿಸ್ತುಕ್ರಮ ಜರುಗಿಸಬೇಕೆಂದು ವಿವಿಯು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದೆ.
ಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ

ವಿಧಾನಪರಿಷತ್ ಸಭಾಪತಿ ಆಯ್ಕೆಗೆ ಇಂದು ಸಭೆ: ಯಾರಾಗಲಿದ್ದಾರೆ ಹೊಸ ಚೇರ್ಮನ್?

ಬೇಡ ಸರ್​… ಅಂದ್ರೂ ಹೋಗು ಎಂದ ಇಂಜಿನಿಯರ್​ ಮೇಲೆ ಮಚ್ಚುಬೀಸಿದ ಲೈನ್​ಮೆನ್​!

ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 20 =
Remember me
