ನವದೆಹಲಿ:ತೆರಿಗೆದಾರರು ಹಾಗೂ ದುಡಿಯುವ ವರ್ಗದ ಕಳವಳಕ್ಕೆ ಕಾರಣವಾಗಿರುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಸಂಪತ್ತಿನ ಮರು ಹಂಚಿಕೆ ಪ್ರಸ್ತಾಪ ಕುರಿತಂತೆ ಕಾಂಗ್ರೆಸ್​ನ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ನೀಡಿರುವ ಹೊಸ ವ್ಯಾಖ್ಯಾನ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಅಮೆರಿಕದಲ್ಲಿ ವ್ಯಕ್ತಿಯ ಮರಣಾನಂತರ ಆತನ ಸಂಪತ್ತಿನ ಮೇಲೆ ಶೇ.55 ತೆರಿಗೆ ಹಾಕುವ ಮೂಲಕ ಮಕ್ಕಳು, ಕುಟುಂಬಕ್ಕೆ ಶೇ.45ರಷ್ಟು ಪಿತ್ರಾರ್ಜಿತ ಪಾಲನ್ನು ಮಾತ್ರ ವರ್ಗಾಯಿಸಲಾಗುತ್ತದೆ. ಹೀಗೆ ವಶಕ್ಕೆ ಪಡೆದ ಆಸ್ತಿಯನ್ನು ಬಡವರಿಗಾಗಿ ವಿನಿಯೋಗ ಮಾಡಲಾಗುತ್ತದೆ. ಇದೇ ಸಂಪತ್ತಿನ ನಿಜವಾದ ಮರು ಹಂಚಿಕೆ ವಿಧಾನ ಎಂದು ಪಿತ್ರೋಡಾ ನೀಡಿರುವ ಹೇಳಿಕೆ ಬಿಜೆಪಿಗೆ ಹೊಸ ಅಸ್ತ್ರವಾಗಿದೆ. ಸಂಪತ್ತಿನ ಸಮಾನ ಹಂಚಿಕೆ ಮೂಲಕ ಕಾಂಗ್ರೆಸ್ ಹಿಂದುಗಳ ಮಂಗಳಸೂತ್ರವನ್ನೂ ಕಿತ್ತುಕೊಳ್ಳಲು ಹೊರಟಿದೆ ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೆ ಕಿಡಿಕಾರಿದ್ದಾರೆ. ಕಾಂಗ್ರೆಸ್ ಬದುಕಿದ್ದಾಗಲಷ್ಟೇ ಅಲ್ಲ, ಸತ್ತ ಮೇಲೂ ನಿಮ್ಮನ್ನು ಲೂಟಿ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್​ಗೆ ಬಿಸಿತುಪ್ಪ:ಕಾಂಗ್ರೆಸ್​ನ ಹಿರಿಯ ನಾಯಕ, ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ ಲೋಕಸಭೆ ಚುನಾವಣೆ ಹೊತ್ತಲ್ಲೇ ಎಎನ್​ಐಗೆ ನೀಡಿರುವ ಸಂದರ್ಶನದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ನೂರಕ್ಕೆ ನೂರು ಹಕ್ಕು ಲಭಿಸದಂತೆ ತೆರಿಗೆ ವಿಧಿಸುವ ಕುರಿತು ನೀಡಿರುವ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ತಿರುಗುಬಾಣವಾಗುವ ಆತಂಕ ತಂದೊಡ್ಡಿದೆ. ಅಮೆರಿಕದಲ್ಲಿರುವ ಪಿತ್ರಾರ್ಜಿತ ತೆರಿಗೆ ಪದ್ಧತಿ ನ್ಯಾಯಯುತ ಕಾನೂನಾಗಿದೆ. ನಿಮ್ಮ ಪೀಳಿಗೆಯಲ್ಲಿ ನೀವು ಸಂಪತ್ತನ್ನು ಸೃಷ್ಟಿಸಿದರೆ, ನೀವು ಸಾಯುವಾಗ ಅರ್ಧದಷ್ಟು ಅಸ್ತಿಯನ್ನು ಸಾರ್ವಜನಿಕರಿಗೆ ಬಿಟ್ಟು ಕೊಡಬೇಕು. ಆದರೆ ಭಾರತದಲ್ಲಿ ಈ ಕಾನೂನು ಇಲ್ಲ. ಇಲ್ಲಿ 10 ಬಿಲಿಯನ್ ಹೊಂದಿರುವ ವ್ಯಕ್ತಿ ಮೃತಪಟ್ಟರೆ ಆತನ ಮಕ್ಕಳಿಗೇ ಎಲ್ಲ 10 ಬಿಲಿಯನ್ ಹಣ ಹೋಗುತ್ತದೆ. ಸಾರ್ವಜನಿಕರಿಗೆ ಏನೂ ಸಿಗುವುದಿಲ್ಲ. ಸಂಪತ್ತಿನ ಸಮಾನ ಹಂಚಿಕೆಗೆ ಅಮೆರಿಕ ಪಿತ್ರಾರ್ಜಿತ ತೆರಿಗೆ ಪದ್ಧತಿ ಸರಿಯಾದ ನಿದರ್ಶನ ಎಂದು ಪಿತ್ರೋಡಾ ವ್ಯಾಖ್ಯಾನಿಸಿದ್ದರು. ಆ ಮೂಲಕ ಭಾರತದಲ್ಲೂ ಇದೇ ಮಾದರಿಯ ಪಿತ್ರಾರ್ಜಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಾಗಬೇಕೆಂದು ಪರೋಕ್ಷ ಸಲಹೆ ನೀಡಿದ್ದರು.
ಏನಿದು ಇನ್​ಹೆರಿಟೆನ್ಸ್ ಟ್ಯಾಕ್ಸ್?:ಅನುವಂಶೀಯ ತೆರಿಗೆ (ಇನ್​ಹೆರಿಟೆನ್ಸ್ ಟ್ಯಾಕ್ಸ್) ಅಮೆರಿಕದ ರಾಜ್ಯ ತೆರಿಗೆ ಆಗಿದೆ. ಅದು ವ್ಯಕ್ತಿಯ ಸಾವಿನ ಬಳಿಕ ಹಣ-ಆಸ್ತಿ ಯಾರಿಗೆ ಅನುವಂಶೀಯವಾಗಿ ಸೇರುತ್ತದೋ ಅದರ ಮೇಲೆ ಹಾಕುವ ತೆರಿಗೆ. ಸದ್ಯ ಈ ತೆರಿಗೆ ಬದಲು ಎಸ್ಟೇಟ್ ಬ್ಯಾಂಕ್ ತೆರಿಗೆ ಜಾರಿಯಲ್ಲಿದೆ. ಶೇ.1ಕ್ಕಿಂತಲೂ ಕಡಿಮೆಯಿಂದ ಶೇ. 20ರವರೆಗೂ ವಿವಿಧ ಶ್ರೇಣಿಯಲ್ಲಿ ಅನುವಂಶೀಯ ತೆರಿಗೆ ವಿಧಿಸಲಾಗುತ್ತದೆ. ಯುಎಸ್​ನ ಲೋವಾ, ಕೆಂಟಕಿ, ಮೇರಿಲ್ಯಾಂಡ್, ನೆಬ್ರಾಸ್ಕ, ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಷ್ಟೇ ಈ ತೆರಿಗೆ ಹಾಕಲಾಗುತ್ತಿದೆ.
ಕಾಂಗ್ರೆಸ್ ಯೋಜನೆ ಯಶಸ್ವಿಯಾಗಲ್ಲ:ಸ್ಯಾಮ್ ಪಿತ್ರೋಡಾ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿ ಟೀಕೆ ನಡೆಸಿದ್ದಾರೆ. ನೀವು ಬದುಕಿದ್ದಾಗ ಮಾತ್ರವಲ್ಲ, ನಿಮ್ಮ ಜೀವನ ಮುಗಿದ ಬಳಿಕವೂ ಕಾಂಗ್ರೆಸ್ ನಿಮ್ಮನ್ನು ಲೂಟಿ ಮಾಡುತ್ತದೆ. ನಿಮ್ಮ ಆಸ್ತಿ ಕಸಿದುಕೊಂಡು ಯಾರಿಗೆ ಕೊಡುತ್ತಾರೆ ಗೊತ್ತಾ? ನಾನು ಹೇಳುವ ಅಗತ್ಯವಿಲ್ಲ. ಆದರೆ ಈ ಪಾಪ ಮಾಡಲು ಅವಕಾಶ ಮಾಡಿಕೊಡಬೇಡಿ. ಅವರ ಈ ಯೋಜನೆ ಯಶಸ್ವಿಯಾಗಲ್ಲ ಎಂದಿದ್ದಾರೆ.
.ಕೈ ಪಡೆಗೆ ಸಂಪತ್ತಿನ ಮರು ಹಂಚಿಕೆ ಉರುಳು
.ಚುನಾವಣೆ ಪ್ರಣಾಳಿಕೆಯಲ್ಲಿ ವಿವಾದಾತ್ಮಕ ಘೋಷಣೆ
.ಜಾತಿ ಗಣತಿ ಮೂಲಕ ಸಂಪತ್ತಿನ ಮೇಲೆ ಕಣ್ಣು
.ವರದಿ ಆಧರಿಸಿ ಆಸ್ತಿ ಮರು ಹಂಚಿಕೆ ಪ್ರಸ್ತಾಪ
.ಬಿಜೆಪಿಗೆ ಅಸ್ತ್ರವಾದ ಕಾಂಗ್ರೆಸ್​ನ ಭರವಸೆ
.ಹಿಂದುಗಳ ತಾಳಿ ಕಸಿಯುತ್ತಾರೆಂದಿದ್ದ ಮೋದಿ
.ಮಾಂಗಲ್ಯ ಸೂತ್ರ ಮುಸ್ಲಿಮರ ಪಾಲೆಂದು ಎಚ್ಚರಿಕೆ
.ಮೋದಿ ಮಾಂಗಲ್ಯ ಅಸ್ತ್ರದಿಂದ ಕೈಪಡೆ ಕಂಗಾಲು
.ದೇಶಾದ್ಯಂತ ಕಾಂಗ್ರೆಸ್​ಗೆ ಭಾರೀ ಮುಜುಗರ
.ಇದೀಗ ಪಿತ್ರಾರ್ಜಿತ ಆಸ್ತಿ ಕಸಿಯುವ ಇಂಗಿತ!
.ಕಾಂಗ್ರೆಸ್​ಗೆ ಇಕ್ಕಟ್ಟು ತಂದ ಸ್ಯಾಮ್ ಪಿತ್ರೋಡಾ
.ವೈಯಕ್ತಿಕ ಹೇಳಿಕೆ ಎಂದು ಕೈಪಡೆ ಸಮಜಾಯಿಷಿ
.ಅಮೆರಿಕದ ಪಿತ್ರಾರ್ಜಿತ ತೆರಿಗೆ ಸರಿಯಾದುದು
.ಮಾಲೀಕ ಸತ್ತಾಗ ಶೇ.55 ಆಸ್ತಿ ಸರ್ಕಾರದ ಪಾಲು
.ಉಳಿದ ಶೇ.45 ಆಸ್ತಿ ಕುಟುಂಬಸ್ಥರಿಗೆ ಹಸ್ತಾಂತರ
.ಇದೊಂದು ಆಸಕ್ತಿದಾಯಕವಾದ ಕಾನೂನಾಗಿದೆ
.ನಿಮ್ಮ ಸ್ವಯಾರ್ಜಿತ ಸಂಪತ್ತಿನಲ್ಲಿ ಅರ್ಧ ಜನರಿಗೆ ಬಿಡಿ
.ಈ ನ್ಯಾಯಯುತ ಕಾನೂನನ್ನು ಇಷ್ಟಪಡುತ್ತೇನೆ
.ಆಸ್ತಿ ಹಂಚಿಕೆಗೆ ಕಾಂಗ್ರೆಸ್ ನೀತಿ ರೂಪಿಸಬಹುದು
.ಭಾರತದಲ್ಲಿ ಕನಿಷ್ಠ ವೇತನ ಎಂಬುದೇ ಇಲ್ಲ
.ಶ್ರೀಮಂತರು ಕೆಲಸದವರಿಗೆ ಸರಿ ವೇತನ ನೀಡುತ್ತಿಲ್ಲ
.ಆ ಹಣದಲ್ಲಿ ದುಬೈಗೆ ತೆರಳಿ ರಜೆ ಕಳೆಯುತ್ತಿದ್ದಾರೆ
ಮಾತಿಗೇಕೆ ಮಹತ್ವ?
ಸ್ಯಾಮ್ ಪಿತ್ರೋಡಾ ಕಾಂಗ್ರೆಸ್​ನ ಪ್ರಮುಖ ನೀತಿಗಳ ಹಿಂದಿದ್ದಾರೆ. ಸಂಪತ್ತು ಮರು ಹಂಚಿಕೆಗೆ ಯಾವೆಲ್ಲ ನೀತಿ ಅನುಸರಿಸಬೇಕೆಂದು ಅವರು ಸಲಹೆ ನೀಡಿದ್ದಾರೆಂಬ ಚರ್ಚೆ ನಡೆದಿದೆ.
ಇಂತಹ ಉದ್ದೇಶ ನಮಗಿಲ್ಲ. ನಮ್ಮಲ್ಲಿ ಸಂವಿಧಾನವಿದೆ. ಕೇವಲ ಮತಕ್ಕಾಗಿ ಅವರು ಈ ಎಲ್ಲ ಆಟ ಆಡುತ್ತಿದ್ದಾರೆ.
| ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
