ಲೋಕಸಭಾ ಚುನಾವಣೆ ಘೊಷಣೆಯಾದಂದಿನಿಂದ, ಅಂದರೆ ಸುಮಾರು ಎರಡು ತಿಂಗಳುಗಳಿಂದ, ಕರ್ನಾಟಕದಲ್ಲಿ ಆಡಳಿತ ಯಂತ್ರ ಬಹುತೇಕ ಸ್ಥಗಿತಗೊಂಡಿದೆ. ಇದು ಪ್ರತಿ ಬಾರಿ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ನಡೆಯುವಂಥದ್ದೇ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಈವರೆಗೆ ತಮ್ಮ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ, ಬಹುತೇಕ ಎಲ್ಲ ಅಧಿಕಾರಿಗಳು ಮತ್ತು ಸರ್ಕಾರಿ ಸಿಬ್ಬಂದಿ ಚುನಾವಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ನಿರತರಾಗಿದ್ದರು.
ಸಾರ್ವಜನಿಕರು ತಮ್ಮ ಅಗತ್ಯ ಕಾರ್ಯಗಳಿಗಾಗಿ ಯಾವ ಸರ್ಕಾರಿ ಕಚೇರಿಗೆ ಹೋದರೂ ಕೆಲಸ ಆಗುತ್ತಿರಲಿಲ್ಲ. ಒಂದೋ, ಅಲ್ಲಿನ ಸಿಬ್ಬಂದಿ ಚುನಾವಣೆ ಕಾರ್ಯಕ್ಕೆ ನಿಯುಕ್ತಿಗೊಂಡಿರುತ್ತಿದ್ದರು. ಅಥವಾ ಹಾಗೆಂದು ನೆಪ ಹೇಳುತ್ತಿದ್ದರು. ಇಲ್ಲವೇ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಕೆಲಸಗಳು ಆಗುತ್ತಿರಲಿಲ್ಲ. ನೀತಿ ಸಂಹಿತೆಯ ಪಾಲನೆ ಕಡ್ಡಾಯವಾದ್ದರಿಂದ ಅದನ್ನು ಯಾರೂ ಪ್ರಶ್ನಿಸಲೂ ಸಾಧ್ಯವಿಲ್ಲ. ಆದರೆ ಇದೀಗ, ಕರ್ನಾಟಕದಲ್ಲಿ ನಿಗದಿಯಾಗಿದ್ದ ಲೋಕಸಭಾ ಚುನಾವಣೆಯ ಎರಡೂ ಹಂತಗಳು ಮುಗಿದಿವೆ. ದೇಶಾದ್ಯಂತ ಲೋಕಸಭಾ ಚುನಾವಣೆಯ ಇನ್ನೂ ನಾಲ್ಕು ಹಂತಗಳು ಬಾಕಿ ಇರುವುದರಿಂದ, ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜೂನ್ 6ರವರೆಗೆ, ಅಂದರೆ ಇನ್ನೂ ಸುಮಾರು ಒಂದು ತಿಂಗಳು ಜಾರಿಯಲ್ಲಿ ಇರಲಿದೆ. ಈ ಸಮಯದಲ್ಲಿ ರಾಜ್ಯ ಸರ್ಕಾರ ಯಾವುದೇ ನೀತಿ-ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ.
ರಾಜ್ಯದಲ್ಲಿ ಮುಂಗಾರು ಆರಂಭವಾಗುವುದಕ್ಕೆ ಒಂದು ತಿಂಗಳು ಮುಂಚೆಯೇ ಕೆಲವು ಜಿಲ್ಲೆಗಳಲ್ಲಿ ಈ ಬಾರಿ ಮಳೆ ಪ್ರಾರಂಭವಾಗಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ, ಬಿಸಿಲಿನ ಅಬ್ಬರ ಮುಂದುವರಿದಿದೆ. ಮಳೆಯಾಗಿರುವಂಥ ಪ್ರದೇಶಗಳಲ್ಲಿ ರೈತರು ಬಿತ್ತನೆಬೀಜ, ರಸಗೊಬ್ಬರ ಮುಂತಾದವುಗಳಿಗೆ ಈಗಿನಿಂದಲೇ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಬಿಸಿಲು ಇನ್ನೂ ಕಡಿಮೆಯಾಗದ ಸ್ಥಳಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸಲು ಮುಂದಾಗಬೇಕಾಗುತ್ತದೆ. ಅದಕ್ಕೆಲ್ಲ ಹಣ ವಿನಿಯೋಗ ಅನಿವಾರ್ಯವಿರುತ್ತದೆ.
ಇಂತಹ ಸಂದರ್ಭದಲ್ಲಿ ಪ್ರತಿಯೊಂದು ವಿಷಯಕ್ಕೂ ಚುನಾವಣಾ ಆಯೋಗದ ಮೊರೆ ಹೋಗಿ, ಅನುಮತಿ ಪಡೆದುಕೊಂಡು ಬಂದು ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಅಧಿಕಾರಿಗಳು ಸಿಲುಕುತ್ತಾರೆ. ನೀತಿ-ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರಿಗಳಿಗಾಗಲಿ, ಚುನಾಯಿತ ಜನಪ್ರತಿನಿಧಿಗಳಿಗಾಗಲಿ ಮುಕ್ತ ಅವಕಾಶ ಇರುವುದಿಲ್ಲ. ಮಳೆಗಾಲ ಸಮೀಪಿಸಿರುವುದರಿಂದ ನಗರ-ಪಟ್ಟಣ ಪ್ರದೇಶಗಳಲ್ಲಿ ರಸ್ತೆಗಳು, ಸೇತುವೆಗಳು, ಮಳೆನೀರ ಕಾಲುವೆಗಳ ದುರಸ್ತಿ, ಮೋರಿಗಳ ಹೂಳೆತ್ತುವುದು, ನೀರು ಸರಾಗವಾಗಿ ಹರಿಯುವಂತೆ ಮಾಡುವುದು, ಪ್ರವಾಹ ಪರಿಸ್ಥಿತಿ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಮುಂತಾದ ಕಾರ್ಯಗಳು ಈಗ ಸಮರೋಪಾದಿಯಲ್ಲಿ ನಡೆಯುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುವಂತಾಗುವ ಸದುದ್ದೇಶದಿಂದ ಚುನಾವಣಾ ನೀತಿಸಂಹಿತೆಯನ್ನು ಆಯೋಗ ಸೂಕ್ತ ರೀತಿಯಲ್ಲಿ ಸಡಿಲಿಕೆ ಮಾಡುವುದು ಒಳಿತು.
ಕೊಡಗಿನಲ್ಲಿ SSLC ವಿದ್ಯಾರ್ಥಿನಿ ಮೀನಾ ರುಂಡ-ಮುಂಡ ಬೇರ್ಪಡಿಸಿದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 5 =
Remember me
