ಭಾರತ ಭಯೋತ್ಪಾದನೆಯಿಂದಇನ್ನಿಲ್ಲದ ಕಷ್ಟನಷ್ಟ ಅನುಭವಿಸಿದೆ. ಇದರ ವಿರುದ್ಧದ ಹೋರಾಟ ಹಲವು ಪ್ರಮುಖ ಹಂತಗಳನ್ನು ದಾಟಿ, ನಿರ್ಣಾಯಕ ಸ್ಥಿತಿಗೆ ತಲುಪಿದೆ. ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ಒಂದಿಷ್ಟು ಕಡಿವಾಣ ಬಿದ್ದಿದ್ದರೂ, ಉಗ್ರ ಸಂಘಟನೆಗಳು ಇತರ ರಾಜ್ಯಗಳಲ್ಲಿ, ಆಯಕಟ್ಟಿನ ಪ್ರದೇಶಗಳಲ್ಲಿ ತಮ್ಮ ಜಾಲ ವಿಸ್ತರಿಸಲು ಹವಣಿಸುತ್ತಿರುವುದು ಗಂಭೀರವಾದ ಸಂಗತಿ. ಅಲ್ಲದೆ, ಉಗ್ರರಿಗೆ ಸ್ಥಳೀಯರೇ ಆಶ್ರಯ ಮತ್ತು ಆರ್ಥಿಕ ನೆರವು ನೀಡುತ್ತಿರುವುದು ಇನ್ನೂ ಕಳವಳದ ವಿಚಾರ. ಇಂಥ ಉಗ್ರಜಾಲಗಳ ಹೆಡೆಮುರಿ ಕಟ್ಟದಿದ್ದರೆ ಆಂತರಿಕ ಭದ್ರತೆಗೆ ಅಪಾಯ ತಪ್ಪಿದ್ದಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಕಳೆದ ಕೆಲ ತಿಂಗಳುಗಳಿಂದ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮಹತ್ವದ ಕಾರ್ಯಾಚರಣೆಗಳನ್ನು ನಡೆಸಿರುವುದು ಗಮನಾರ್ಹ. ಈ ದಾಳಿಗಳ ವೇಳೆ ಹಲವು ಶಂಕಿತ ಭಯೋತ್ಪಾದಕರು ಬಲೆಗೆ ಬಿದ್ದಿದ್ದು, ಅವರ ಸಂಚಿನ ಯೋಜನೆಗಳು ಕೂಡ ಬಹಿರಂಗಗೊಂಡಿವೆ. ಶಾಂತಿಯನ್ನು ಕದಡಲು ಇನ್ನಿಲ್ಲದಂತೆ ಯತ್ನಿಸುತ್ತಿರುವ ವಿಧ್ವಂಸಕ ಶಕ್ತಿಗಳ ವಿರುದ್ಧ ಪರಿಣಾಮಕಾರಿ ಹಾಗೂ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯ.
ಎನ್​ಐಎ ದಾಳಿಯ ವೇಳೆ ಬಳ್ಳಾರಿಯಲ್ಲಿ ಐಸಿಸ್ ಬಾಂಬ್ ಫ್ಯಾಕ್ಟರಿ ಪತ್ತೆಯಾಗಿರುವ ವಿಷಯ ಗಂಭೀರವಾದುದು. ಇದರಲ್ಲಿ ಸುಶಿಕ್ಷಿತ ಯುವಕರೇ ಭಾಗಿಯಾಗಿರುವುದು ಇನ್ನಷ್ಟು ಚಿಂತೆಯ ಸಂಗತಿ. ವಿಧ್ವಂಸಕ ಕೃತ್ಯ ಸಂಭವಿಸುವ ಮೊದಲೇ ಸಂಚು ಬಯಲಾಗಿರುವುದು ಸಮಾಧಾನ ತಂದಿದೆಯಾದರೂ ಇಂತಹ ಸಂಚುಗಳು ನಮ್ಮ ಸುತ್ತಮುತ್ತ ನಡೆಯದಂತೆ ಎಚ್ಚರ ವಹಿಸುವುದು ಪೊಲೀಸ್ ಇಲಾಖೆ, ಗುಪ್ತಚರ ದಳ ಮತ್ತು ಸಾರ್ವಜನಿಕರ ಆದ್ಯ ಕರ್ತವ್ಯವಾಗಿದೆ. ಎಷ್ಟೋ ಸಲ ನಮ್ಮ ಪಕ್ಕದ ಮನೆಯಲ್ಲಿ ಯಾರು ವಾಸಿಸುತ್ತಿದ್ದಾರೆ, ಏನು ಕೆಲಸ ಮಾಡುತ್ತಾರೆ ಎಂಬುದೇ ನಮಗೆ ಗೊತ್ತಿರುವುದಿಲ್ಲ. ಇಂತಹ ಸ್ಥಿತಿ ಈಗ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಹೆಚ್ಚು.
ಈ ಬಗೆಯ ನಿರ್ಲಕ್ಷ್ಯವೇ ಕೆಲವೊಮ್ಮೆ ದುಷ್ಕರ್ವಿುಗಳಿಗೆ ವರದಾನ ಆಗಿಬಿಡುತ್ತದೆ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಇದರ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುವುದು ಒಳಿತು. ಜತೆಗೆ, ಮನೆಯನ್ನು ಬಾಡಿಗೆಗೆ ಕೊಡುವಾಗ ಮೊತ್ತಕ್ಕೆ ಕೊಡುವಷ್ಟೇ ಪ್ರಾಮುಖ್ಯವನ್ನು ಬಾಡಿಗೆದಾರರ ಹಿನ್ನೆಲೆ ತಿಳಿದುಕೊಳ್ಳುವುದರ ಬಗ್ಗೆಯೂ ನೀಡಬೇಕು. ಪೊಲೀಸರು ಕೂಡ ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ತಮ್ಮದೇ ಆದ ಮೂಲಗಳಿಂದ ನಿರಂತರವಾಗಿ ಗಮನ ಹರಿಸುವುದು ಸೂಕ್ತ.
ಘಟಿಸಬಾರದ್ದು ಘಟಿಸಿದ ನಂತರ ಪಶ್ಚಾತ್ತಾಪ ಪಡುವುದರ ಬದಲು ಮೊದಲೇ ಎಚ್ಚರದಿಂದ ಇರುವುದು ಎಲ್ಲರ ಕರ್ತವ್ಯ. ಶಾಂತಿಪ್ರಿಯ ರಾಜ್ಯವಾಗಿರುವ ಕರ್ನಾಟಕ ಯಾವುದೇ ಕಾರಣಕ್ಕೂ ಉಗ್ರರ ನೆಲೆಯಾಗಲು ಬಿಡಬಾರದು. ಬಳ್ಳಾರಿಯ ಐಸಿಸ್ ಫ್ಯಾಕ್ಟರಿಯ ಘಟನೆಯಿಂದ ಎಚ್ಚೆತ್ತುಕೊಂಡು ಇನ್ನಷ್ಟು ಕಟ್ಟೆಚ್ಚರ ವಹಿಸಬೇಕು ಮತ್ತು ಉಗ್ರಜಾಲಗಳು ಇತರೆಡೆ ಹರಡದಂತೆ ನಿಗಾ ವಹಿಸಬೇಕು. ಈ ಕೆಲಸದಲ್ಲಿ ಪೊಲೀಸರಷ್ಟೇ ಸಾರ್ವಜನಿಕರ ಪಾತ್ರವು ಪ್ರಮುಖವಾಗಿದೆ.
ಅಮೆರಿಕ, ಬ್ರಿಟನ್​, ಪಾಕ್​, ಶ್ರೀಲಂಕಾ ಸೇರಿ ಎಲ್ಲೆಡೆ ತೈಲ ಬೆಲೆ ಅಪಾರ ಏರಿಕೆ: ಭಾರತದಲ್ಲಿ ಮಾತ್ರ ಅಗ್ಗವಾಗಲು ಮೋದಿ ಸರ್ಕಾರ ಕೈಗೊಂಡ ಕ್ರಮಗಳೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 8 =
Remember me
