ಬೆಂಗಳೂರು:ತೀವ್ರ ಉಸಿರಾಟದ ತೊಂದರೆ (ಸಾರಿ) ಹಾಗೂ ಶೀತಜ್ವರ (ಐಎಲ್​ಐ) ಕರೊನಾ ಸೋಂಕು ಲಕ್ಷಣವೇ ಆದರೂ, ಈ ಲಕ್ಷಣಗಳನ್ನು ಹೊಂದಿ ರುವ ಎಲ್ಲರಿಗೂ ಕರೊನಾ ಬರುವುದಿಲ್ಲ. ಹಾಗಾಗಿ ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೆ, ಈ ರೀತಿಯ ಸಮಸ್ಯೆ ಹೊಂದಿರುವ ರೋಗಿಗಳು ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವಂತಿಲ್ಲ. ಬದಲಿಗೆ ಈ ಲಕ್ಷಣಗಳು ಕಂಡು ಬಂದ ಕೂಡಲೇ ಆರ್​ಟಿಪಿಸಿಆರ್ ಪರೀಕ್ಷೆ ಮಾಡಿಸಿ ಕೊಳ್ಳುವುದರ ಜತೆಗೆ ವೈದ್ಯರನ್ನು ಸಂರ್ಪಸಬೇಕು ಎನ್ನುತ್ತಾರೆ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್.
ಶೇ. 25 ಮಂದಿಗೆ ಸೋಂಕು:ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯ ಹಾಸಿಗೆಗಳನ್ನು ತೀವ್ರ ಉಸಿರಾಟದ ಸಮಸ್ಯೆ(ಸಾರಿ) ಇರುವ ರೋಗಿಗಳಿಗೆ ಮೀಸಲಿಡಲಾಗಿದೆ. ಕೋವಿಡ್ ಮೊದಲ ಅಲೆ ತೀವ್ರಗೊಂಡ (ಆಗಸ್ಟ್ – ಸೆಪ್ಟೆಂಬರ್) ಸಂದರ್ಭದಲ್ಲಿ ಒಟ್ಟು ಸಾರಿ ಪ್ರಕರಣಗಳಲ್ಲಿ ಶೇ.11 ಮಂದಿಯಲ್ಲಿ ಸೋಂಕು ದೃಢಪಡುತ್ತಿತ್ತು. ಆದರೆ 2ನೇ ಅಲೆಯಲ್ಲಿ ವೈರಾಣು ರೂಪಾಂತರಗೊಂಡಿರುವ ಪರಿಣಾಮ ಸಾರಿ ಪ್ರಕರಣಗಳಲ್ಲಿ ಶೇ.25 ಮಂದಿಗೆ ಕೋವಿಡ್ ಸೋಂಕು ವರದಿಯಾಗುತ್ತಿದೆ. ಹಾಗಾಗಿ ಈ ರೋಗ ಲಕ್ಷಣಗಳಿರುವವರು ಆರಂಭದಲ್ಲೇ ವೈದ್ಯರಲ್ಲಿ ಚಿಕಿತ್ಸೆ ಪಡೆದರೆ ಬೇಗನೆ ಗುಣ ಹೊಂದುತ್ತಾರೆ.
ಔಷಧ ಮುಂದುವರಿಸಬೇಕು:ಮೊದಲೇ ಸಾರಿ, ಐಎಲ್​ಐ, ಅಸ್ತಮಾ, ಎದೆ ರೋಗ, ಕ್ಷಯ(ಟಿಬಿ), ಮಧುಮೇಹ, ಕ್ರಾನಿಕ್ ಲಂಗ್ ಡಿಸೀಸ್ (ಸಿಒಪಿಡಿ) ನಂತಹ ಸಮಸ್ಯೆ ಹೊಂದಿರುವವರು ನಿಯಮವಾಗಿ ಸೇವಿಸುತ್ತಿರುವ ಔಷಧಗಳನ್ನು ಮುಂದುವರಿಸಬೇಕು. ಅದರಲ್ಲೂ ಅಸ್ತಮಾ ರೋಗಿಗಳು ಬಳಸುವ ಇನ್​ಹೇಲರ್ ಕೋವಿಡ್ ಸೋಂಕಿನಿಂದ ಗುಣ ಹೊಂದಲು ಅವರಿಗೆ ಮತ್ತಷ್ಟು ಸಹಕಾರಿಯಾಗಿದೆ. ಆದರೆ, ಎಚ್ಚರವಿರಲಿ ಐಎಲ್​ಐ, ಸಾರಿ, ಅಸ್ತಮಾ, ಟಿಬಿಯಿಂದ ಗುಣ ಹೊಂದಿರುವ ರೋಗಿಗಳಿಗೆ ಸ್ವಯಂ ಚಿಕಿತ್ಸೆ ಅಪಾಯವಿದೆ.
ಸ್ವಯಂ ಚಿಕಿತ್ಸೆಯಿಂದ ಅವಾಂತರ:ಸಮಸ್ಯೆ ತೀವ್ರವಾದರೆ ಕೂಡಲೇ ವೈದ್ಯರನ್ನು ಸಂರ್ಪಸಬೇಕು. ಆದರೆ ಈ ರೀತಿ ಸಮಸ್ಯೆ ಹೊಂದಿರುವವರು ಆರಂಭದಲ್ಲಿ ಮನೆಯಲ್ಲಿ ವೈದ್ಯರ ಸಲಹೆ ಪಡೆಯದೇ ಔಷಧ ಸೇವಿಸಿ ಅವಾಂತರ ತಂದುಕೊಳ್ಳುತ್ತಿದ್ದಾರೆ. ಹೀಗೆ ಸ್ವಯಂ ಚಿಕಿತ್ಸೆ ಮಾಡಿಕೊಂಡು ಬರುತ್ತಿರುವ ಸಾರಿ ಪ್ರಕರಣಗಳಲ್ಲಿ ಶೇ.90 ಮಂದಿಗೆ ಕೋವಿಡ್ ಸೋಂಕು ಪತ್ತೆಯಾಗುತ್ತಿರುವುದಲ್ಲದೆ, ಅವರ ಆರೋಗ್ಯ ಸ್ಥಿತಿ ಗಂಭೀರ ಹಂತಕ್ಕೆ ತಲುಪಿರುತ್ತದೆ. ದೀರ್ಘಾಕಾಲ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಸಮಯ ಬಹಳ ಅಮೂಲ್ಯ. ಹಾಗಾಗಿ ಅಂಥವರು ಸೋಂಕು ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನು ಸಂರ್ಪಸಿ ಅವರ ಸಲಹೆಯಂತೆ ನಡೆದುಕೊಳ್ಳಬೇಕು.
ಲಸಿಕೆ ಪಡೆದು ಕರೊನಾ ನಿಯಂತ್ರಿಸಿ:ಕೋವಿಡ್ ಲಸಿಕೆ ಪಡೆದುಕೊಂಡವರಿಗೆ ಸೋಂಕು ತಗುಲಿರುವುದು ತೀರಾ ವಿರಳ. ಲಸಿಕೆ ಪಡೆದವರು ಸೋಂಕಿಗೆ ಒಳಗಾಗಿದ್ದರೂ ಅವರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿರು ವುದರಿಂದ ಸೋಂಕು ತೀವ್ರತೆ ತೀರಾ ಕಡಿಮೆ ಇರುತ್ತದೆ. ಇಸ್ರೇಲ್ ಮತ್ತು ಅಮೆರಿಕದಲ್ಲಿ ಜನರು ಸ್ವಯಂ ಪ್ರೇರತರಾಗಿ ಲಸಿಕೆ ಪಡೆದುಕೊಂಡಿದ್ದರಿಂದ ಅಲ್ಲಿ ಸೋಂಕು ಹತೋಟಿಗೆ ಬಂದಿದೆ. ಹಾಗಾಗಿ ನಿರ್ಲಕ್ಷ್ಯ ಮಾಡದೆ ಅದರಲ್ಲೂ ದೀರ್ಘಾಕಾಲ ಆರೋಗ್ಯ ಸಮಸ್ಯೆ ಹೊಂದಿ ರುವವರು ತಪ್ಪದೇ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಜತೆಗೆ ಮುಂದೆಯೂ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಲು ಸಹಕರಿಸ ಬೇಕು. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು.
ನಿಯಮಗಳನ್ನು ಅನುಸರಿಸಿ:ಜ್ವರ, ಕೆಮ್ಮು, ಸುಸ್ತು, ರುಚಿ ಮತ್ತು ವಾಸನೆ ಇಲ್ಲದಿರುವುದು, ತಲೆ ನೋವು, ಮೈಕೈ ನೋವು, ಭೇದಿ, ವಾಂತಿ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಹೋಗಿ ತಪ್ಪದೇ ಆರ್​ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಿ. ವರದಿ ಬರುವವರೆಗೂ ಈ ಲಕ್ಷಣ ಹೊಂದಿರುವವರು ಮನೆ ಕ್ವಾರಂಟೈನ್​ಗೆ ಒಳಗಾಗಿ ಮನೆಯವರ ಸಂಪರ್ಕದಿಂದ ದೂರವಿರಿ. ಕೊಠಡಿಯಲ್ಲೇ 6 ನಿಮಿಷ ವೇಗವಾಗಿ ನಡೆದು ಬಳಿಕ ಪಲ್ಸ್ ಆಕ್ಸಿಮೀಟರ್ ವರದಿ ಪರೀಕ್ಷೆ ಮಾಡಿಕೊಳ್ಳಿ. ಈ ವೇಳೆ ಆಮ್ಲಜನಕ ಮಟ್ಟ 94ಕ್ಕಿಂತ ಕಡಿಮೆ ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ. ಲಕ್ಷಣ ರಹಿತರು ಮಾಸ್ಕ್, ಸಾಮಾಜಿಕ ಅಂತರ ಸೇರಿ ಸುರಕ್ಷಿತ ಕ್ರಮಗಳನ್ನು ಮುಂದುವರಿಸಬೇಕು. ಯಾವುದೇ ಭಯ ಅಥವಾ ಆತಂಕಕ್ಕೆ ಒಳಗಾಗಬೇಡಿ. ಗುಂಪುಗಳಲ್ಲಿ ಸೇರಬೇಡಿ. ಸ್ವಚ್ಛತೆ ಕಾಪಾಡಿ. ತಾಜಾ ಹಾಗೂ ಆರೋಗ್ಯಕರ ಆಹಾರ ಸೇವಿಸಿ. ಹೊರಗಿನ ಆಹಾರ ಸೇವನೆಯಿಂದ ದೂರವಿರಿ.
ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್
ಮಂತ್ರಾಲಯ ಸ್ವಾಮೀಜಿಯವರ ಆಪ್ತ ಕಾರ್ಯದರ್ಶಿ ಇನ್ನಿಲ್ಲ; ಎಸ್‌.ಎನ್. ಸುಯಮೀಂದ್ರಾಚಾರ್‌ ಕೋವಿಡ್‌ಗೆ ಬಲಿ
d


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
