ಮಂಡ್ಯ:ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ನೀಡಿದೆ. ಮೇ 15ರಿಂದ ನಮ್ಮ ಸರ್ಕಾರ ಬರಲಿದ್ದು, ಜೂನ್ 1 ರಿಂದ ನೀವು ಕರೆಂಟ್ ಬಿಲ್​ ಕಟ್ಟಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಹೇಳಿದರು.
ಮಳವಳ್ಳಿಯಲ್ಲಿ ಇಂದು ಭಾಷಣ ಮಾಡಿದ ಡಿಕೆಶಿ, ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿಯಾಗಲಿದೆ. ಮಂಡ್ಯದಲ್ಲಿ ಕಳೆದ ಬಾರಿ ಒಂದು ಸೀಟು ಗೆಲ್ಲೋಕೆ ಆಗಲಿಲ್ಲ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿ ಎಂದರು.
ಇದನ್ನೂ ಓದಿ:ಈ ಫೋಟೋದಲ್ಲಿರೋ ಜಿಂಕೆ ಪತ್ತೆಹಚ್ಚುವಲ್ಲಿ ಶೇ. 98 ಮಂದಿ ಫೇಲ್​: ಸಾಧ್ಯವಾದ್ರೆ ನೀವು ಪತ್ತೆ ಹಚ್ಚಿ
ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಮಳವಳ್ಳಿ ಜನ ಬೆಂಬಲಿಸಬೇಕು. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಬಿಜೆಪಿಯನ್ನು ದೂರ ಇಟ್ಟು ಕುಮಾರಸ್ವಾಮಿಗೆ ದರ್ಬಾರ್ ಮಾಡು ಅಂತ ಕಳೆದ ಬಾರಿ ಅಧಿಕಾರ ಕೊಟ್ಟೆವು. ಆದರೆ, ಕುಮಾರಸ್ವಾಮಿ ಉಳಿಸಿಕೊಳ್ಳಲಿಲ್ಲ ಎಂದು ಎಚ್​ಡಿಕೆ ಮೇಲೆ ಗೂಬೆ ಕೂರಿಸಿದರು.
ನಿಮ್ಮ ಬದುಕಿನಲ್ಲಿ ಏನಾದ್ರೂ ಬದಲಾವಣೆ ಹಾಗಿದೆಯಾ? ಮೇ. 10ರ ಮತದಾನದ ದಿನ ನಿಮ್ಮ ಭವಿಷ್ಯನ ನೀವೇ ನಿರ್ಮಾಣ ಮಾಡುವಂತಹ ದಿನ. ನಿಮಗೆ ಅಚ್ಚೆ ದಿನ ತರುತ್ತೇವೆ ಅಂತ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ದುಷ್ಟ ಆಡಳಿತ ನೀಡುತ್ತಿದೆ. ಮೂರೂವರೆ ವರ್ಷ ಒಂದು ಸರ್ಕಾರವನ್ನು ನೋಡಿದ್ದೇವೆ. ಇಷ್ಟು ವರ್ಷದಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂಬುವುದನ್ನು ಅರಿತುಕೊಳ್ಳಿ ಎಂದರು.
ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ನೀಡಿದೆ. ಮೇ 15ರಿಂದ ಹೊಸ ಸರ್ಕಾರ ಬರುತ್ತದೆ. ಜೂನ್ 1ರಿಂದ ಕರೆಂಟ್ ಬಿಲ್​ ಕಟ್ಟಬೇಡಿ. ವರ್ಷಕ್ಕೆ ಪ್ರತಿ ಕುಟುಂಬಕ್ಕೆ 24 ಸಾವಿರ ರೂಪಾಯಿ ಬರುತ್ತದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಕೆಜಿ ಕೊಡುತ್ತೇವೆ. ಬಡವರು ಹಸಿವಿನಿಂದ ಬಳಲಬಾರದು ಎಂದು 10 ಕೆಜಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಕರ್ನಾಟಕವನ್ನು ನಂ.​ 1 ಮಾಡುವ ಚುನಾವಣೆ ಇದಾಗಿದೆ: ಬೀದರ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ
ಯುವಕರಿಗೆ ಕೆಲಸ ಕೊಡುತ್ತೇವೆ ಅಂತ ಬಿಜೆಪಿ ಹೇಳಿತ್ತು. ಆದರೆ ಆಮೇಲೆ ಪಕೋಡ ಮಾರಿ ಅಂತ ಹೇಳಿದ್ರು. ಹೀಗಾಗಿ ಪದವಿ ಮಾಡಿರುವವರಿಗೆ ಪ್ರೋತ್ಸಾಹ ಧನ ನೀಡುತ್ತೇವೆ. ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ. ಇವೆಲ್ಲ ಘೋಷಣೆ ಮಾಡಿಲ್ಲ ಅಂದ್ರೆ‌ ಮತ್ತೆ ಮತ ಕೇಳುವುದಕ್ಕೆ ಬರುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಶಪಥ ಎಂದು ಡಿಕೆಶಿ ಹೇಳಿದರು.(ದಿಗ್ವಿಜಯ ನ್ಯೂಸ್​)
ರಾಹುಲ್ ಗಾಂಧಿಗೆ ಬುದ್ದಿ ಭ್ರಮಣೆಯಾಗಿದ್ದು ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಲಿ: ಬಿಎಸ್​ವೈ

ಗಲಭೆ, ದೊಂಬಿಗಳೇ ಬಿಜೆಪಿ ಚಾಣಕ್ಯನ ರಣತಂತ್ರಗಳು: ಹರಿಪ್ರಸಾದ್​ ಬಿ.ಕೆ ಗಂಭೀರ ಆರೋಪ

ಪ್ರಧಾನಿ ಮೋದಿ ಸಮಾಜದ ವಿಷ ಕುಡಿಯುವ ನೀಲಕಂಠ: ಹುಮ್ನಾಬಾದ್​ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 10 =
Remember me
