ಮಂಡ್ಯ:ಕಳೆದ ಲೋಕಸಭಾ ಚುನಾವಣೆಯಿಂದ ಪಾಠ ಕಲಿತಿರುವ ಜೆಡಿಎಸ್​ ಈ ಬಾರಿ ಎಚ್ಚರಿಕೆಯ ಹೆಜ್ಜೆಯನ್ನಿಡಲು ನಿರ್ಧರಿಸಿದೆ. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬ ಮಾತನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ಎದುರಿಸಲು ಜೆಡಿಎಸ್​ ಸಜ್ಜಾಗಿದೆ.
ಹೌದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ ಸುಮಲತಾ ಅಂಬರೀಷ್, ನಿಖಿಲ್​ ಕುಮಾರಸ್ವಾಮಿ ವಿರುದ್ಧ​ ಅದ್ಧೂರಿ ಗೆಲುವು ದಾಖಲಿಸಿದ್ದರು. ಸುಮಲತಾ ಗೆಲುವಿಗೆ ಪ್ರಮುಖ ಕಾರಣವಾಗಿದ್ದೇ ಜೆಡಿಎಸ್​ ನಾಯಕರ ಆಡಿದ ನಿಂದನಾತ್ಮಕ ಮಾತುಗಳು. ಇದನ್ನೇ ಬಂಡವಾಳ ಮಾಡಿಕೊಂಡ ಸುಮಲತಾಗೆ ಸುಲಭವಾಗಿ ಗೆಲುವು ದಕ್ಕಿತು.
ಇದನ್ನೂ ಓದಿ:ಮಹಿಳೆಯ ಒಳಉಡುಪಿನಲ್ಲಿತ್ತು ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಚಿನ್ನ!
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್ಚೆತ್ತಿರುವ ಜೆಡಿಎಸ್​, ಸುಮಲತಾ ಬಗ್ಗೆ ಎಚ್ಚರದಿಂದ ಇರಲು ಮಂಡ್ಯ ಮುಖಂಡರಿಗೆ ಸೂಚನೆ ನೀಡಿದೆ. ಸುಮಲತಾ ಬಗ್ಗೆ ಯಾರು ಮಾತಾಡಬೇಡಿ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರು ಖಡಕ್​ ಸೂಚನೆಯನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಎಚ್​ಡಿಡಿ ಸಭೆ ನಡೆಸಿದರು. ಸಭೆಯಲ್ಲಿ ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ಜೆಡಿಎಸ್ ಅಭ್ಯರ್ಥಿಗಳು ಭಾಗಿಯಾಗಿದ್ದರು. ಈ ವೇಳೆ ಮಂಡ್ಯ ಜಿಲ್ಲೆಯ ಮುಂದಿನ ರಾಜಕೀಯದ ಬಗ್ಗೆ ದೊಡ್ಡಗೌಡರು ಚರ್ಚಿಸಿದ್ದಾರೆ. ಈ ಬಾರಿಯೂ ಮಂಡ್ಯದಲ್ಲಿ 7ಕ್ಕೆ 7 ಸ್ಥಾನವನ್ನು ಗೆಲ್ಲಬೇಕು‌. ನಾನು ಎಲ್ಲಾ ಕ್ಷೇತ್ರಗಳಿಗೂ ಬರ್ತೀನಿ. ಗಂಭೀರವಾಗಿ ಚುನಾವಣೆ ಎದುರಿಸಬೇಕು ಎಂದು ಹೇಳಿದ್ದಾರೆ.
ಸುಮಲತಾ ಬಗ್ಗೆ ಯಾರು ಮಾತಾಡಬೇಡಿ. ನಮ್ಮ ವಿರುದ್ಧ ಅವರು ಆರೋಪ ಮಾಡಲಿ, ವಾಗ್ದಾಳಿ ಮಾಡಲಿ, ಆದರೆ, ಯಾರು ಕೂಡ ಮಾಧ್ಯಮಗಳಲ್ಲಿ ಹೆಚ್ಚು ಅವರ ಬಗ್ಗೆ ಮಾತಾಡಬೇಡಿ. ನಮ್ಮ ಮಾತನ್ನು ಅವರು ಬಂಡವಾಳ ಮಾಡಿಕೊಳ್ಳುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಹಾಗೆ ಮಾಡಿಕೊಂಡರು ಎಂದರು.
ಇದನ್ನೂ ಓದಿ:ಗೋವಾದಲ್ಲಿ ಹೋಟೆಲ್​ ಸಿಬ್ಬಂದಿ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಕುಟುಂಬಕ್ಕೆ ಕಾದಿತ್ತು ಭಾರೀ ಆಘಾತ!
ಸುಮಲತಾ ಅವರು ಯಾವ ಪಕ್ಷಕ್ಕೆ ಬೇಕಾದ್ರೂ ಹೋಗಲಿ, ಏನು ಬೇಕಾದ್ರು ಮಾತನಾಡಿಕೊಳ್ಳಲ್ಲಿ. ನೀವು ಮಾತ್ರ ನಿಮ್ಮ ಅಭಿವೃದ್ಧಿ, ನಿಮ್ಮ ಜನಸೇವೆ, ಪಕ್ಷದ ಸಾಧನೆ ಬಗ್ಗೆ ಅಷ್ಟೇ ಮಾತಾಡಿ. ಮಾತನಾಡಿ ಸುಮ್ಮನೆ ಆಹಾರ ಆಗೋದು ಬೇಡ ಎಂದು ಕಿವಿಮಾತನ್ನು ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)
ನಟಿ ಮೀನಾಗೆ ಈ ನಟನ ಮೇಲೆ ನಿಜವಾಗಿ ಲವ್​ ಆಗಿತ್ತಂತೆ! ಮದ್ವೆ ದಿನ ಕಣ್ಣೀರು ಸಹ ಹಾಕಿದ್ದರಂತೆ

ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ಶ್ರೀಲೀಲಾ … ನಾಯಕಿಯೋ? ತಂಗಿಯೋ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
