ಬೆಂಗಳೂರು; ರೊನಾ 2ನೇ ಅಲೆಯು ಹಳ್ಳಿಗಳಿಗೂ ಅಪ್ಪಳಿಸಿ, ಸೋಂಕು ಶರವೇಗದಲ್ಲಿ ಹರಡುತ್ತಿದೆ. ಹೀಗಾಗಿ ಪರಿಸ್ಥಿತಿ ಕೈಮೀರುವ ಮುನ್ನ ಪಿಡುಗು ಮಟ್ಟ ಹಾಕುವ ನಿಟ್ಟಿನಲ್ಲಿ ಸರ್ಕಾರ, ಗ್ರಾಮಗಳಲ್ಲಿ ಮನೆಮನೆಗೂ ತೆರಳಿ ಸಮೀಕ್ಷೆ ನಡೆಸುವುದೂ ಸೇರಿದಂತೆ ವಿವಿಧ ಹಂತದ ಕ್ರಮಗಳನ್ನು ರೂಪಿಸಿದೆ. ವಿಧಾನ ಸೌಧ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗ್ರಾಮೀಣ ಭಾಗದಲ್ಲಿ ಕರೊನಾ ಕಟ್ಟಿಹಾಕಲು ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸಿ ದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಿ, ಹಳ್ಳಿಗಳ ಮಟ್ಟದ ಕ್ರಿಯಾ ಸಮಿತಿಗಳನ್ನು ಸಕ್ರಿಯಗೊಳಿಸ ಲಾಗುವುದು. ಜನಪ್ರತಿನಿಧಿಗಳು, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು, ಸ್ವಯಂ-ಸೇವಾ ಸಂಘ ಸಂಸ್ಥೆಗಳ ನೆರವಿನೊಂದಿಗೆ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಲಾಗುವುದು. ತಪಾಸಣೆ ಕಾಲಕ್ಕೆ ಸೋಂಕಿನ ಸೌಮ್ಯ ಲಕ್ಷಣ ಕಂಡು ಬಂದರೂ ಸಮೀಪದ ಕರೊನಾ ಆರೈಕೆ ಕೇಂದ್ರಕ್ಕೆ ದಾಖಲಿಸುವುದು ಕಡ್ಡಾಯ. ಹಳ್ಳಿ-ಪಟ್ಟಣಗಳಲ್ಲಿ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುವುದಕ್ಕೆ ಅವಕಾಶವಿಲ್ಲ ಎಂದರು.
ಕ್ಷಿಪ್ರ ಕಾರ್ಯಾಚರಣೆ: ಹಳ್ಳಿಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಸೋಂಕಿತರು ಹಿಂಜರಿಯುತ್ತಿರುವ ಮಾಹಿತಿಯಿದೆ. ಹೀಗಾಗಿ ಕಾರ್ಯಪಡೆಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸೋಂಕಿತರು, ಸೌಮ್ಯ ಲಕ್ಷಣವುಳ್ಳವರು, ಪ್ರಥಮ ಮತ್ತು ದ್ವಿತೀಯ ಸಂರ್ಪತರನ್ನು ಪತ್ತೆ ಹಚ್ಚಲಿದ್ದಾರೆ. ಪ್ರಥಮ ಮತ್ತು ದ್ವಿತೀಯ ಸಂರ್ಪತರ ಮೇಲೆ ಗ್ರಾಮ ಸಮಿತಿಗಳು ನಿಗಾವಹಿಸಲಿವೆ.
ಸೋಂಕಿತರಿಗೆ ಚಿಕಿತ್ಸಾ ಕೇಂದ್ರದಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ಸ್ವರೂಪ ನಿರ್ಧರಿಸಲಾಗುತ್ತದೆ. ಹೋಬಳಿಗೆ ಒಂದು ಕರೊನಾ ಆರೈಕೆ ಕೇಂದ್ರಗಳನ್ನು ತೆರೆದು, ಸೌಮ್ಯ ಲಕ್ಷಣವುಳ್ಳವರನ್ನು ಸೇರಿಸಿ ಆರೋಗ್ಯ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಿದ್ದು, ನಿಗದಿತ ಅವಧಿ ಬಳಿಕ ನಿಯಮಾನುಸಾರ ಕ್ರಮ ವಹಿಸಲಾಗುತ್ತದೆ ಎಂದು ಸಿಎಂ ಬಿಎಸ್​ವೈ ವಿವರಿಸಿದರು. ಸೂಕ್ತ ಸರ್ಕಾರಿ ಕಟ್ಟಡ, ಅಗತ್ಯ ಸೌಕರ್ಯ ಇನ್ನಿತರ ಅನುಕೂಲತೆ ಲಭ್ಯವಿರುತ್ತವೆ. ಹಾಗೆಯೇ ವೈದ್ಯರು, ಇನ್ನಿತರ ಸಿಬ್ಬಂದಿ ಕ್ರೋಡೀಕರಣ ಸಾಧ್ಯ. ಈ ಹಿನ್ನೆಲೆಯಲ್ಲಿ ಹೋಬಳಿ ಮಟ್ಟದಲ್ಲಿ ಆರೈಕೆ ಕೇಂದ್ರ ತೆರೆಯಲು ತೀರ್ವನಿಸಲಾಗಿದೆ ಎಂದು ಹೇಳಿದರು.
– ಮೂರು ದಿನದಲ್ಲಿ 2,150 ವೈದ್ಯರ ನೇಮಕ
2-3 ದಿನಗಳಲ್ಲಿ 2,150 ತಜ್ಞ ಹಾಗೂ ಸಾಮಾನ್ಯ ವೈದ್ಯರ ನೇಮಕ ನಡೆಯಲಿದೆ. ಇದರಿಂದ ಪ್ರಾಥಮಿಕ, ತಾಲೂಕು ಆಸ್ಪತ್ರೆಗಳಲ್ಲಿ ತಜ್ಞರು ಹಾಗೂ ವೈದ್ಯರ ಕೊರತೆ ನಿವಾರಣೆಯಾಗಲಿದೆ ಎಂದು ಬಿಎಸ್​ವೈ ಆಶಾಭಾವನೆ ವ್ಯಕ್ತಪಡಿಸಿದರು. ತಕ್ಷಣದ ನೇಮಕಾತಿಯಿಂದ ಹಳ್ಳಿಗಳಲ್ಲಿ ಸೋಂಕು ನಿಯಂತ್ರಣ, ಸೋಂಕಿತರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಲು ನೆರವಾಗುತ್ತದೆ. ಅಲ್ಲದೆ, ಜಿಲ್ಲಾ ಆಸ್ಪತ್ರೆಗಳಲ್ಲಿನ ಸಂದರ್ಶನ ಮಂಡಳಿ ಬಲವರ್ಧಿಸಲಾಗುವುದು ಎಂದರು.
– ತಲಾ 50,000 ರೂ. ನೆರವು
ಕರೊನಾ ನಿರ್ವಹಣೆಗಾಗಿ ಇದೇ ಮೊದಲ ಬಾರಿಗೆ ಪ್ರತಿ ಗ್ರಾ.ಪಂ.ಗೆ ತಲಾ 50,000 ರೂ. ವಿಶೇಷ ನೆರವು ನೀಡಲಾಗುತ್ತಿದೆ. ರಾಜ್ಯ ವಿಪತ್ತು ಸ್ಪಂದನಾ ನಿಧಿಯಡಿ ಈ ಅನುದಾನ ನೀಡಲಿದ್ದು, ತುರ್ತು ಅಗತ್ಯ ವೆಚ್ಚಗಳನ್ನು ಸರಿದೂಗಿಸಬಹುದಾಗಿದೆ ಎಂದರು. ಹಳ್ಳಿಗಳನ್ನು ಸೋಂಕು ಮುಕ್ತವಾಗಿಸಿ ಸುಸೂತ್ರ ಜೀವನಕ್ಕೆ ಅವಕಾಶ ಮಾಡಿಕೊಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾ.ಪಂ.ಮಟ್ಟದ ಕಾರ್ಯಪಡೆಗಳು, ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕೆಂಬ ಸೂಚನೆ ನೀಡಲಾಗಿದೆ ಎಂದು ಸಿಎಂ ಬಿಎಸ್​ವೈ ತಿಳಿಸಿದರು.
((ಫೋಟೋ ಕ್ಯಾಪ್ಷನ್))ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಡಿಸಿಎಂ ಕಾರಜೋಳ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 10 =
Remember me
