ಹಾವೇರಿ:ಇಲ್ಲಿ ದೇವರಿಗೆಂದೇ ದೋಸೆ ಹಬ್ಬ ನಡೆಯುತ್ತದೆ. ಮಾತ್ರವಲ್ಲ, ಬರೋಬ್ಬರಿ 800 ಕುಟುಂಬಗಳು ಇದರಲ್ಲಿ ಪಾಲ್ಗೊಳ್ಳುತ್ತವೆ. ಅರ್ಧ ಶತಮಾನಕ್ಕಿಂತಲೂ ಹಿಂದಿನಿಂದ ನಡೆದುಕೊಂಡು ಬಂದಿರುವ ಈ ಪದ್ಧತಿ ಹಾವೇರಿ ಜಿಲ್ಲೆಯ ಒಂದು ವಿಶೇಷ ಆಚರಣೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಈ ದೋಸೆ ಹಬ್ಬ ನಡೆಯುತ್ತದೆ. ಇಲ್ಲಿನ ಜನರು ದೋಸೆ ಬರಮಪ್ಪ ದೇವರಿಗೆ ದೋಸೆ ಮಾಡಿ ನೈವೇದ್ಯ ಅರ್ಪಿಸುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಇಂದೂ ಈ ಆಚರಣೆ ನಡೆದಿದ್ದು, ಸಂಜೆಯಿಂದ ನೂರಾರು ಗ್ರಾಮಸ್ಥರು ಇದರಲ್ಲಿ ಪಾಲ್ಗೊಂಡಿದ್ದಾರೆ.
ಸಂಜೆ ಐದು ಗಂಟೆಯ ಮೇಲೆ ನಡೆಯುವ ಈ ದೋಸೆ ಹಬ್ಬದಲ್ಲಿ ಗ್ರಾಮದ 800 ಕುಟುಂಬಗಳಿಂದ ಒಟ್ಟಿಗೆ ದೋಸೆಯನ್ನು ನೈವೇದ್ಯವಾಗಿ ಒಪ್ಪಿಸಲಾಗುತ್ತದೆ. ಇಲ್ಲಿನ ಗ್ರಾಮಸ್ಥರು ಸುಮಾರು 70-80 ವರ್ಷಗಳಿಂದ ಈ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ದನಕರುಗಳಿಗೆ ಆರೋಗ್ಯ ಸಮಸ್ಯೆ ಆಗಬಾರದು ಎಂದು ಇದನ್ನು ಆಚರಿಸಲಾಗುತ್ತಿದೆ. ವಿಶೇಷ ಎಂದರೆ ಈ ಊರಿನಲ್ಲಿ ಇದುವರೆಗೂ ದನಕರುಗಳಿಗೆ ರೋಗರುಜಿನ ಬಂದಿಲ್ಲವಂತೆ. ಹೀಗಾಗಿ ಈ ದೇವರ ಮೇಲೆ ಅಪಾರ ನಂಬಿಕೆ ಭಕ್ತಿ ಹೊಂದಿರುವ ಭಕ್ತರು, ಇದನ್ನು ಆಚರಿಸಿಕೊಂಡು ಬಂದಿದ್ದಾರೆ.
ಕೊಡಗಲ್ಲಿ 2018ರಲ್ಲಿ ಭೂಕುಸಿತವಾಗಿದ್ದ ಪ್ರದೇಶದಲ್ಲೇ ಮತ್ತೆ ಭೂಕುಸಿತ-ಜಲಸ್ಫೋಟ; 18 ಮನೆಯವರ ತೆರವು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + nineteen =
Remember me
