ಬೆಂಗಳೂರು:ಕಮಲಪಡೆಯ ತಳಮಟ್ಟದ ಕಾರ್ಯಪಡೆ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಜಯಭೇರಿ ಬಾರಿಸುವುದಕ್ಕೆ ಪೂರಕ ವಾತಾವರಣ ಸೃಷ್ಟಿಗೆ ಬೆವರಿಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ಪ್ರತಿ ಬಾರಿ ‘ಡಬಲ್ ಇಂಜಿನ್ ಸರ್ಕಾರ’ದ ಪ್ರಯೋಜನದ ಮೇಲೆ ಹೆಚ್ಚೆಚ್ಚು ಬೆಳಕು ಚೆಲ್ಲಿ, ಪಕ್ಷದ ರಾಜ್ಯ ನಾಯಕರ ಮಾರ್ಗಪಥ ಏನೆಂಬುದು ಸೂಚ್ಯವಾಗಿ ತಿಳಿಸಿದ್ದಾರೆ. ಮೋದಿ ಸೂಚನೆಯಂತೆ ಪಕ್ಷದ ಸಂಘಟನಾ ಕಾರ್ಯಯೋಜನೆಯಲ್ಲಿ ‘ಮನೆ ಮನೆಗೆ ಅಭಿಯಾನ’ ಸೇರಿಸಿ, ಜನರ ಮನೆ ಬಾಗಿಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಮಾಹಿತಿ ನೀಡುವ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ.
ಪ್ರತಿಯೊಂದು ಬೂತ್​ಗೆ 12 ಜನ ಸಕ್ರಿಯ ಸದಸ್ಯರ ತಂಡವನ್ನು ನೇಮಿಸಿ ಅಭಿಯಾನದ ಹೊಣೆ ಒಪ್ಪಿಸಿದ್ದು, ವಿವಿಧ ಹಂತದ ಪದಾಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ನಗರ-ಗ್ರಾಮೀಣ ಪ್ರದೇಶದ ಪ್ರತಿಯೊಂದು ಅರ್ಹ ಕುಟುಂಬ ಡಬಲ್ ಇಂಜಿನ್ ಸರ್ಕಾರದ ಒಂದಲ್ಲ, ಒಂದು ಯೋಜನೆ ಫಲಾನುಭವಿ ಆಗಿರುವ ಮಾಹಿತಿಯನ್ನೂ ನಿಯೋಜಿತ ತಂಡಗಳು ಹಂಚಿಕೊಳ್ಳುತ್ತಿವೆ. ಕೇಂದ್ರ-ರಾಜ್ಯ ಸರ್ಕಾರದ ಬಗ್ಗೆ ವ್ಯಾಪಕ ಪ್ರಚಾರವೆಂದು ಮೇಲ್ನೋಟಕ್ಕೆ ಕಂಡು ಬಂದರೂ ಜನಪರ ಯೋಜನೆ, ಕಾರ್ಯಕ್ರಮಗಳ ಗರಿಷ್ಠ ಲಾಭ ಪಡೆಯಲಿ ಎಂಬುದು ಅಭಿಯಾನದ ಆಶಯವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಭಾವನೆ ಅರಿಯುವ ಪ್ರಯತ್ನ:ಉಭಯ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೇಲೆ ನಿಗಾ, ಜನರ ಭಾವನೆ ಅರಿತುಕೊಳ್ಳುವುದು ಅಭಿಯಾನದ ಮತ್ತೊಂದು ಭಾಗವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಾರಥ್ಯದಲ್ಲಿ ನಡೆಯುತ್ತಿರುವ ‘ಜನಸಂಕಲ್ಪ ಯಾತ್ರೆ’ ಸಮಾವೇಶದಲ್ಲಿ ಜನ ಮೆಚ್ಚುಗೆ ಪ್ರತಿಬಿಂಬಿತವಾಗುತ್ತಿದೆ. ಪಕ್ಷದ ಎರಡು ಮೋರ್ಚಾಗಳಿಂದ ಸಂಘಟಿಸಿದ್ದ ಫಲಾನುಭವಿಗಳ ಸಮಾವೇಶಕ್ಕೆ ಜನರ ಭರ್ಜರಿ ಸ್ಪಂದನೆಯು ಅಭಿಯಾನದಲ್ಲಿ ಪಾಲ್ಗೊಂಡ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ತುಂಬಿದೆ. ರಾಜ್ಯ ಸರ್ಕಾರದ ಸಾಧನೆ ತಿಳಿಸಿ ಜನರ ವಿಶ್ವಾಸ ಗಳಿಸಲು ಸಿಎಂ, ಮಾಜಿ ಸಿಎಂ ಸಾರಥ್ಯದ ‘ಜನಸಂಕಲ್ಪ’ಯಾತ್ರೆ ಎರಡನೇ ಘಟ್ಟದಲ್ಲಿದ್ದು, ಅಭಿಯಾನ ಒತ್ತಾಸೆ ನೀಡಿದೆ ಎಂದು ಮೂಲಗಳು ವಿವರಿಸಿವೆ.
ಶಿವಮೊಗ್ಗ:ಅಡಕೆಗೆ ತಗುಲಿರುವ ಎಲೆಚುಕ್ಕೆ ರೋಗ ತಡೆಗಟ್ಟಲು ಸಮಗ್ರ ನಿರ್ವಹಣೆ ಅವಶ್ಯವೆಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಹೀಗಾಗಿ ಸಮಗ್ರ ನಿರ್ವಹಣೆಗೆ ಏನು ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಶಿಲೀಂಧ್ರನಾಶಕ ಸಿಂಪರಣೆಗೆಂದು ಈಗಾಗಲೆ ಸರ್ಕಾರ 10 ಕೋಟಿ ರೂ. ಅನುದಾನ ನೀಡಿದೆ. ಮುಂದೆ ಅಧಿಕಾರಿಗಳು ನೀಡುವ ವರದಿ ಆಧಾರದಲ್ಲಿ ಅಡಕೆ ಬೆಳೆಗಾರರಿಗೆ ಪರಿಹಾರ ನೀಡಬಹುದೇ? ಬಗರ್​ಹುಕುಂ ಜಮೀನಿನಲ್ಲಿ ಅಡಕೆ ಬೆಳೆದು ಎಲೆಚುಕ್ಕೆ ರೋಗದಿಂದ ನಷ್ಟ ಹೊಂದಿರುವವರಿಗೆ ಸ್ಪಂದಿಸುವುದು ಹೇಗೆ ಎಂಬ ತೀರ್ಮಾನ ಮಾಡಲಾಗುವುದು ಎಂದರು.
ಡಿ. 15ರ ಡೆಡ್​ಲೈನ್:ಕ್ಷೇತ್ರದ ಕಾರ್ಯದಲ್ಲಿ ಬೂತ್​ವುಟ್ಟದ ತಂಡಗಳು ವಿವಿಧ ಆಯಾಮಗಳಲ್ಲಿ ಸಂಗ್ರಹಿಸಿದ ಮಾಹಿತಿ, ದತ್ತಾಂಶಗಳನ್ನು ಪಕ್ಷದ ‘ಸರಳ್’ ಪೋರ್ಟಲ್​ಗೆ ಅಪ್​ಡೇಟ್ ಮಾಡಲು ಸೂಚಿಸಲಾಗಿದೆ. ಡಬಲ್ ಇಂಜಿನ್ ಸರ್ಕಾರದ ಪ್ರಯೋಜನ ಅಭಿಯಾನ, ಜನರ ನಾಡಿಮಿಡಿತದ ಮಾಹಿತಿ ಮತ್ತು ಅಭಿಪ್ರಾಯ ಸಂಗ್ರಹ ಪೋರ್ಟಲ್​ಗೆ ಭರ್ತಿ ಪ್ರಕ್ರಿಯೆಗೆ ಡಿಸೆಂಬರ್ 15ರ ಗಡುವು ವಿಧಿಸಲಾಗಿದೆ. ರಾಜ್ಯದ ಎಲ್ಲ ಬೂತ್​ಗಳಲ್ಲಿ ಅಭಿಯಾನ ಏಕಕಾಲಕ್ಕೆ ಕೈಗೆತ್ತಿಕೊಂಡಿದ್ದು, ಕೆಲವು ಕಾರಣಗಳಿಂದಾಗಿ ವಿಧಿಸಿದ ಕಾಲಮಿತಿ ವಿಸ್ತರಣೆಯಾಗುವ ಸಾಧ್ಯತೆಗಳಿವೆ. ಕಾರ್ಯಕರ್ತರು ಜನರ ಮನೆ ಬಾಗಿಲಿಗೆ ತೆರಳಿದ ಸಂದರ್ಭದಲ್ಲಿ ಹೊಸ ಮತದಾರರಿಗೆ ಹೆಸರು ನೋಂದಣಿ ಜಾಗೃತಿ ಮೂಡಿಸಲಿದ್ದು, ನೋಂದಣಿಗೆ ಸಲ್ಲಿಸಬೇಕಾದ ಅರ್ಜಿಗಳ ಮಾಹಿತಿ ನೀಡಲಿದೆ. ಪ್ರತಿಯೊಂದು ಹಳ್ಳಿ, ವಾರ್ಡ್​ಗಳಲ್ಲಿ ಹೊಸ ಮತದಾರರನ್ನು ಗುರುತಿಸಿ, ಮತದಾರರ ಯಾದಿಯಲ್ಲಿ ಹೆಸರು ಸೇರ್ಪಡೆಗೆ ಸಕ್ರಿಯ ಕಾರ್ಯಕರ್ತರು ನೆರವಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.
ಕೊಪ್ಪ(ಚಿಕ್ಕಮಗಳೂರು):ರಾಜ್ಯದ ರೈತರ, ಕಾರ್ವಿುಕರ ಮಕ್ಕಳಿಗೆ ವಿದ್ಯಾನಿಧಿ ನೀಡುತ್ತಿದ್ದು, ಇನ್ಮುಂದೆ ಟೇಲರ್ ಮಕ್ಕಳಿಗೂ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಜನಸಂಕಲ್ಪ ಸಮಾವೇಶದಲ್ಲಿ ಟೇಲರ್​ಗಳ ಸಂಘದವರು ತಮ್ಮ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡುವಂತೆ ಮನವಿ ಮಾಡಿದರು. ಈ ಕುರಿತು ಪ್ರಸ್ತಾಪಿಸಿದ ಬೊಮ್ಮಾಯಿ, ಟೇಲರ್ ಮಕ್ಕಳಿಗೆ ಇನ್ನುಂದೆ ವಿದ್ಯಾರ್ಥಿ ವೇತನ ನೀಡುತ್ತೇನೆ ಎಂದು ಘೊಷಿಸಿದರು.
ಮೋದಿ ಅಕ್ಕಿಗೆ ಸಿದ್ರಾಮಣ್ಣನ ಚೀಲ:ಸಿದ್ದರಾಮಯ್ಯ ಅವರ ಅಧಿಕಾರದ ಐದು ವರ್ಷಗಳಲ್ಲಿ ಒಂದೇ ಒಂದು ಜನಪರ ಯೋಜನೆ ಜಾರಿಗೆ ತರಲಿಲ್ಲ. ಯಾವುದಾದರೂ ಜನಪರ ಯೋಜನೆ ಜಾರಿಗೊಳಿಸಿದ್ದನ್ನು ಸಿದ್ರಾಮಣ್ಣ ಹೇಳಲಿ. ಕೇಂದ್ರದಿಂದ ನರೇಂದ್ರ ಮೋದಿ ನೀಡಿದ ಅಕ್ಕಿಗೆ ಸಿದ್ರಾಮಣ್ಣ ಗೋಣಿ ಚೀಲ ಕೊಟ್ಟಿದ್ದು ಮಾತ್ರ. ಚೀಲ ಕೊಟ್ಟು ಅನ್ನಭಾಗ್ಯ ಎಂದು ಪ್ರಚಾರ ಪಡೆದುಕೊಂಡರು. ಕೊನೆಗೆ ಅನ್ನಭಾಗ್ಯ ಕನ್ನಭಾಗ್ಯ ಆಯಿತು ಎಂದು ಬೊಮ್ಮಾಯಿ ಲೇವಡಿ ಮಾಡಿದರು. ದತ್ತಪೀಠ ಹಾಗೂ ಮುಳ್ಳಯ್ಯನಗಿರಿಗೆ ರೋಪ್​ವೇ ಮಾಡಲಾಗುತ್ತದೆ. ಕಾಮಗಾರಿ ಶೀಘ್ರದಲ್ಲೇ ಆರಂಭವಾಗುತ್ತದೆ ಎಂದು ಸಿಎಂ ತಿಳಿಸಿದರು.
ಮಾಸಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್​ನವರು ಹಣ, ತೋಳು, ಮದ್ಯ ಬಲದಿಂದ ಚುನಾವಣೆಗಳನ್ನು ಗೆಲ್ಲಬಹುದು ಎಂಬ ಭಾವನೆಯಲ್ಲಿದ್ದರು. ಈಗ ಕಾಲ ಬದಲಾಗಿದೆ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕನಸು ಕಾಣುತ್ತಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಯುಪಿಎ ಸರ್ಕಾರ ಅಡಕೆ ವಿಷಕಾರಿ ಎಂದು ವರದಿ ನೀಡಿದ ಪರಿಣಾಮ ಅಡಕೆ ನಿಷೇಧ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದೆ. ಮಲೆನಾಡು ಭಾಗವನ್ನು ಕಾಡುತ್ತಿರುವ ಕಸ್ತೂರಿ ರಂಗನ್ ವರದಿ, ಮಾಧವ ಗಾಡ್ಗೀಳ್ ವರದಿ ಯುಪಿಎ ಸರ್ಕಾರದ ಪಾಪದ ಕೂಸು ಎಂದು ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಕಸ್ತೂರಿ ರಂಗನ್ ವರದಿಯನ್ನು ತಡೆಹಿಡಿದ್ದರು. ಸಿಎಂ ಬೊಮ್ಮಾಯಿ ದೆಹಲಿಗೆ ನಿಯೋಗ ಕರೆದುಕೊಂಡು ಹೋಗಿ ಅದಕ್ಕೆ ತಡೆ ನೀಡಿದ್ದಾರೆ ಎಂದರು.
ದತ್ತ ಜಯಂತಿಗೆ ಹಿಂದು ಅರ್ಚಕರು:ದತ್ತಪೀಠ ವಿಷಯದಲ್ಲಿ ಬಿಜೆಪಿ ಸರ್ಕಾರ ಎಂದೂ ಹಿಂದೆ ಬಿದ್ದಿಲ್ಲ. ಕಳೆದ ವಾರ ದತ್ತಪೀಠಕ್ಕೆ ಸಮಿತಿ ರಚನೆ ಮಾಡಲಾಗಿತ್ತು. ಇನ್ನೆರಡು ದಿನಗಳಲ್ಲಿ ಹಿಂದು ಅರ್ಚಕರ ನೇಮಿಸುವ ಕುರಿತು ಮಹತ್ವದ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಲಿದೆ. ಡಿ.6ರಿಂದ 8ರವರೆಗೆ ನಡೆಯುವ ದತ್ತಜಯಂತಿಗೆ ಹಿಂದು ಅರ್ಚಕರು ಪೂಜೆ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಘೊಷಿಸಿದರು.
ಎರಡೂವರೆ ವರ್ಷದ ಮಗಳಿಗೆ ತಿನ್ನಲೂ ಕೊಡಿಸಲಾಗದೆ ಕೊಂದ ಟೆಕ್ಕಿ!; ಕೆಲಸವೂ ಇರಲಿಲ್ಲ, ಆರ್ಥಿಕ ನಷ್ಟ ಜತೆಗೆ ರಾಬರಿ ಕೇಸ್​..

ಗಣಿತದ ಟೇಬಲ್​ ಹೇಳಿಲ್ಲ ಎಂದು ವಿದ್ಯಾರ್ಥಿ ಕೈಗೆ ಡ್ರಿಲ್ಲಿಂಗ್ ಮಷಿನ್ ಇಟ್ಟು ಗಾಯಗೊಳಿಸಿದ ಟೀಚರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + twenty =
Remember me
