ಬೆಂಗಳೂರು:ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನುಕೂಲದ ರಿಪೋರ್ಟ್ ಕಾರ್ಡನ್ನು ಜನರ ಮುಂದಿಟ್ಟ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಅಭಿವೃದ್ಧಿ ಪರ್ವಕ್ಕೆ ಖಾತ್ರಿಯನ್ನೂ ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ, ನಗರ- ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನ ಪ್ರಧಾನಿ ಭೇಟಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಜನರಲ್ಲಿ ಮತ್ತಷ್ಟು ಭರವಸೆ ತುಂಬುವ, ಯುವ ಸಮುದಾಯದಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಹಾಗೂ ಅಭಿವೃದ್ಧಿ ಬಗೆಗಿನ ಇಚ್ಛಾಶಕ್ತಿಯನ್ನು ಪ್ರತಿಪಾದಿಸಲು ಅವರು ವಿವಿಧ ವೇದಿಕೆಗಳನ್ನು ಬಳಸಿಕೊಂಡರು.
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆದ ಅನುಕೂಲಗಳ ಬಗೆಗೆ ವಿವರ ನೀಡುವ ಜತೆಗೆ, ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಲಾಭವಾಗಿದೆ ಎಂದು ಒತ್ತಿ ಹೇಳುವ ಮೂಲಕ ಪ್ರತಿಪಕ್ಷದ ಟಿಪ್ಪಣಿಗಳಿಗೆ ಯೋಜನೆಗಳ ವರದಿಯ ಮೂಲಕವೇ ಉತ್ತರ ನೀಡಿದ್ದು ವಿಶೇಷವಾಗಿತ್ತು. ಅವರ ಭಾಷಣ ಬೆಂಗಳೂರನ್ನು ಕೇಂದ್ರೀ ಕರಿಸಿದಂತಿದ್ದರೂ, ಕರ್ನಾಟಕದ ವಿಕಾಸ ಯಾತ್ರೆಯ ವೇಗವನ್ನು ವೃದ್ಧಿಸುವ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎನ್ನುವ ಮುಖಾಂತರ ‘ನಮ್ಮ ಮೇಲೆ ವಿಶ್ವಾಸವಿಡಿ’ ಎಂದು ನಾಡಿನ ಜನರಲ್ಲಿ ಕೋರಿದಂತಿತ್ತು.
33 ಸಾವಿರ ಕೋಟಿ ರೂ. ಯೋಜನೆ:ಕೆಂಗೇರಿಯ ಕೊಮ್ಮಘಟ್ಟದಲ್ಲಿ ಕಿಕ್ಕಿರಿದು ತುಂಬಿದ್ದ ಸಾರ್ವಜನಿಕ ಸಮಾರಂಭದಲ್ಲಿ 33 ಸಾವಿರ ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ಸರ್ಕಾರದ ಹಲವು ಯೋಜನೆಗಳು ಯುವ ಜನತೆಯ ಕನಸುಗಳನ್ನು ಅರಳಿಸುತ್ತಿದೆ. ಕೊಂಕಣ ರೈಲ್ವೇ ಮಾರ್ಗದ ಶೇ.100ರಷ್ಟು ವಿದ್ಯುದ್ದೀಕರಣ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಕರ್ನಾಟಕದಲ್ಲಿ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಮತ್ತು ಏಳು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಇದರಿಂದ ಮತ್ತಷ್ಟು ಸೌಲಭ್ಯ ಹಾಗೂ ಅವಕಾಶಗಳು ಸೃಷ್ಟಿಯಾಗಲಿವೆ. ಜತೆಗೆ ಅಭಿವೃದ್ಧಿ ಯೋಜನೆಗಳು ದೇಶವನ್ನು 21ನೇ ಶತಮಾನಕ್ಕೆ ಅಣಿಗೊಳಿಸಿ ಜನರಿಗೆ ಸ್ವಾಭಿಮಾನ, ಗೌರವದ ಬದುಕು ಕಟ್ಟಿಕೊಡಲಿದೆ ಎಂದರು.
ಯೋಜನೆಗಳ ವಿವರ:ಬೆಂಗಳೂರು ಉಪನಗರ ರೈಲ್ವೆ ಯೋಜನೆ, 125 ಕಿ.ಮೀ ಮಾರ್ಗದ ಯಲಹಂಕ ಪೆನುಕೊಂಡ ರೈಲ್ವೆ ಜೋಡಿ ಮಾರ್ಗ, 96 ಕಿಮೀ ಅರಸೀಕರೆ-ತುಮಕೂರು ರೈಲ್ವೆ ಜೋಡಿ ಮಾರ್ಗ, 740 ಕಿ.ಮೀ ಕೊಂಕಣ ರೈಲ್ವೆ ಮಾರ್ಗದ ಶೇ. 100 ವಿದ್ಯುದ್ದೀಕರಣ, ಬೆಂಗಳೂರು ಕಂಟೋನ್ಮೆಂಟ್ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಎರಡು ಪ್ಯಾಕೇಜ್​ಗಳಲ್ಲಿ ಬೆಂಗಳೂರು ವರ್ತಲ ರಸ್ತೆ ನೆಲಮಂಗಲ- ತುಮಕೂರು ರಾಷ್ಟ್ರೀಯ ಹೆದ್ದಾರಿ ಷಟ್ಪಥಗೊಳಿಸುವ ಯೋಜನೆ, ರಾಷ್ಟ್ರೀಯ ಹೆದ್ದಾರಿ 73 ರ ಪೂಂಜಾಲಕಟ್ಟೆಯಿಂದ ಚಾರ್ವಡಿ ಭಾಗದವರೆಗೂ ರಸ್ತೆ ಅಗಲೀಕರಣ, ರಾಷ್ಟ್ರೀಯ ಹೆದ್ದಾರಿ 69 ರ ಮಧುಗಿರಿ-ಗೌರಿಬಿದನೂರು-ಚಿಕ್ಕಬಳ್ಳಾಪುರ ರಸ್ತೆಯ ಅಗಲೀಕರಣ ಹಾಗೂ ಉನ್ನತೀಕರಣ. 1800 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಗೆ ಪ್ರಧಾನಿ ಚಾಲನೆ ನೀಡಿದರು.
ಕನ್ನಡದಲ್ಲಿ ಮಾತು:‘ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು, ಬೆಂಗಳೂರಿನ ಜನತೆಗೆ ವಿಶೇಷವಾದ ನಮಸ್ಕಾರಗಳು’ ಎಂದು ಭಾಷಣ ಆರಂಭಿಸಿದ ಮೋದಿ, ಕರ್ನಾಟಕ ರಾಜ್ಯದ ಜನತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಮರ್ಪಿಸುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದಾಗ ಸಭೆಯಲ್ಲಿ ಹಷೋದ್ಗಾರ, ಕರತಾಡನದ ಸದ್ದು ಮುಗಿಲು ಮುಟ್ಟಿತ್ತು.
ಉಪನಗರ ರೈಲು ಯೋಜನೆ 40 ವರ್ಷ ಚರ್ಚೆಯಲ್ಲೇ ಕಳೆದಿದೆ. ನಾವು 40 ತಿಂಗಳಲ್ಲಿ ಮುಗಿಸುತ್ತೇವೆ. ಇದನ್ನು ಮಾಡುವುದು ನನ್ನ ಹಣೆಯಲ್ಲಿ ಬರೆದಿದೆ. ಡಬಲ್ ಇಂಜಿನ್ ಸರ್ಕಾರ ಈ ಕನಸು ನನಸಾಗಿಸಲು ಕಟಿಬದ್ಧವಾಗಿದೆ.
|ನರೇಂದ್ರ ಮೋದಿಪ್ರಧಾನಿ
ಬೊಮ್ಮಾಯಿಗೆ ಮೋದಿ ಬಲ:ಕೆಲ ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ‘ನಾಯಕತ್ವ ಬದಲಾವಣೆ’ ಚರ್ಚೆಗೆ ಸ್ವತಃ ಪ್ರಧಾನಿ ಮೋದಿ ಪೂರ್ಣ ವಿರಾಮ ಹಾಕಿದ್ದಾರೆ. ಕೊಮ್ಮಘಟ್ಟದಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾಡನಾಡಿದ ಅವರು, ಸಿಎಂ ಬೊಮ್ಮಾಯಿ ನೇತೃತ್ವ ಅಬಾಧಿತ ಎಂದು ಪರೋಕ್ಷವಾಗಿ ಸಾರಿದರು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಜತೆಯಾಗಿ ಮುನ್ನಡೆಯೋಣ ಎಂದು ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರಧಾನಿ ಹೇಳಿದ್ದಾರೆ.
ನನಗೆ ಕುರ್ತಾ ಹೊಲಿದು ಕೊಡ್ಬೋದಾ? ಈಗ ಫುಲ್​ ಖುಷಿನಾ?: ಮೋದಿ ಹೀಗೆ ಕೇಳಿದ್ದಕ್ಕೂ ಕಾರಣವಿದೆ..

ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ; ಒಂದು ಮನೆಯಲ್ಲಿ 6, ಇನ್ನೊಂದು ಮನೆಯಲ್ಲಿ 3 ಶವ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
