ದಾವಣಗೆರೆ:ದಾವಣಗೆರೆಯಲ್ಲಿ ನಡೆದಿದ್ದ ಡಬಲ್​ ಮರ್ಡರ್ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕೊಲೆ ಆರೋಪಿಯನ್ನು ಪ್ರಕರಣ ಬೆಳಕಿಗೆ ಬಂದ ಮೂರೇ ದಿನಗಳಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ದುರಂತವೆಂದರೆ ಕೊಲೆಗೀಡಾಗಿದ್ದ ಸೋದರಿಯರ ಪೈಕಿ ಒಬ್ಬಳ ಪತಿಯೇ ಆರೋಪಿ.
ಡಬಲ್ ಮರ್ಡರ್ ಪ್ರಕರಣದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ದಾವಣಗೆರೆ ವಿದ್ಯಾನಗರದ ಪೊಲೀಸರು ಆರೋಪಿ ಮಂಜುನಾಥ (46) ಎಂಬಾತನನ್ನು ಬಂಧಿಸಿದ್ದಾರೆ. ಈತ ತನ್ನ ಪತ್ನಿ ಗೌರಮ್ಮ (34) ಹಾಗೂ ಆಕೆಯ ತಂಗಿ ರಾಧಮ್ಮ (32) ಅವರನ್ನು ಕೊಲೆ ಮಾಡಿದ್ದ. ನಗರದ ಆಂಜನೇಯ ಮಿಲ್ ಬಡಾವಣೆಯ ಮನೆಯೊಂದರಲ್ಲಿ ಹತ್ತು ದಿನಗಳ ಹಿಂದೆ ಈ ಕೊಲೆ ನಡೆದಿತ್ತು.
ಇದನ್ನೂ ಓದಿ:ಒಂದೇ ಕೊಠಡಿಯೊಳಗೆ ಜೊತೆಯಾಗಿ ವಿಷ ಕುಡಿದ ಸಹೋದರರು; ಅಣ್ಣ-ತಮ್ಮಂದಿರ ಮಕ್ಕಳ ಸಾವು..
ಕೊಲೆ ನಡೆದ ಏಳು ದಿನಗಳ ಬಳಿಕ ಅಂದರೆ ಜುಲೈ 30ರಂದು ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಸಹೋದರಿಯರಿಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಪತ್ನಿಯ ಶೀಲ ಶಂಕಿಸಿದ್ದ ಪತಿ, ಹೆಂಡತಿಯ ಜತೆಗೆ ಆಕೆಯ ತಂಗಿಯನ್ನೂ ಕೊಲೆ ಮಾಡಿದ್ದ. ಬಳಿಕ ತಲೆಮರೆಸಿಕೊಂಡಿದ್ದ ಆತನನ್ನು ಬೆಂಗಳೂರಿನ ಚನ್ನಾಪುರದಲ್ಲಿ ಪತ್ತೆ ಮಾಡಿದ ಪೊಲೀಸರು ಬಂಧಿಸಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

ಪೊಲೀಸರಿನ್ನು ಕ್ರಿಮಿನಲ್‌ಗಳ ಜತೆ ಪಾರ್ಟಿಗೆ ಹಾಜರಾಗುವಂತಿಲ್ಲ; ರೌಡಿ-ಗೂಂಡಾಗಳ ಸಮಾರಂಭಗಳಲ್ಲಿ ಭಾಗಿ ಆಗುವಂತಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 5 =
Remember me
