ಬೆಂಗಳೂರು:ವರಮಹಾಲಕ್ಷ್ಮೀ ಹಬ್ಬದಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಂಡ-ಹೆಂಡತಿ ಇಬ್ಬರನ್ನೂ ಕೊಲೆ ಮಾಡಿದ್ದವ ಈ ಹಿಂದೆ ಅವರ ಮನೆಯಲ್ಲಿ ಬಾಡಿಗೆಗೆ ಇದ್ದಿದ್ದವನೇ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್​ನ ಕಾಶಿನಗರದ ಶಾಂತರಾಜು (65), ಇವರ ಪತ್ನಿ ಪ್ರೇಮಲತಾ (61) ದಂಪತಿ ಕೊಲೆಯಾದವರು. ಹಾಡಹಗಲೇ ದಾಳಿ ಇಟ್ಟ ದುಷ್ಕರ್ಮಿಗಳು ಈ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಹಿಂದೂಪುರದ ನಿವಾಸಿಗಳಾದ ನಾರಾಯಣಸ್ವಾಮಿ (42), ಶೇಖ್ ಆಸಿಫ್​ (46), ರಾಮು ಅಲಿಯಾಸ್ ರಾಮಸ್ವಾಮಿ (38), ಗಂಗಾಧರ್ (36) ಬಂಧಿತರು. ಆರೋಪಿಗಳಿಂದ 193 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ:ಇವರಿಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಕರೊನಾ ಬಂತು!; ಈ ಪೈಕಿ ಕೇರಳದಲ್ಲೇ ಗರಿಷ್ಠ ಪ್ರಕರಣ…
ಕೊಲೆ ನಡೆದ ದಿನ ಕೊಲೆಗೀಡಾದವರ ಮನೆಗೆ ಬಂದಿದ್ದ/ಬರುತ್ತಿದ್ದವರ ಕುರಿತು ಮಾಹಿತಿ ಕಲೆಹಾಕಿದ ಕುಮಾರಸ್ವಾಮಿ ಬಡಾವಣೆ ಪೊಲೀಸರು, ಆ ಮೂಲಕ ಸಿಕ್ಕ ಸುಳಿವಿನ ಮೇರೆಗೆ ತನಿಖೆ ನಡೆಸಿ ವಿಚಾರಣೆ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಆರಂಭಿಕವಾಗಿ ಸಿಕ್ಕ ಸುಳಿವಿನ ಮೇರೆಗೆ ನಾರಾಯಣಸ್ವಾಮಿಯವನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಕೊಲೆ ಮಾಡಿರುವುದು ಹಾಗೂ ಚಿನ್ನಾಭರಣ ದೋಚಿರುವುದರ ಕುರಿತು ಬಾಯ್ಬಿಟ್ಟಿದ್ದ. ಕೊಲೆಗೀಡಾಗಿದ್ದ ದಂಪತಿಯ ಮನೆಯಲ್ಲಿ ನಾರಾಯಣಸ್ವಾಮಿ 2011ರಿಂದ 2013ರ ವರೆಗೂ ಮನೆಯಲ್ಲಿ ಬಾಡಿಗೆಗಿದ್ದ. ಬಳಿಕ ಬೇರೆಡೆಗೆ ಸ್ಥಳಾಂತರಗೊಂಡಿದ್ದ.
ಇದನ್ನೂ ಓದಿ:‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..
ನಂತರ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ ಆರೋಪಿ, ಅದನ್ನು ತೀರಿಸುವ ಸಲುವಾಗಿ ಶಾಂತಕುಮಾರ್​-ಪ್ರೇಮಲತಾ ದಂಪತಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಅದಕ್ಕಾಗಿ ಮೂವರ ನೆರವು ಕೇಳಿ ಸಂಚು ರೂಪಿಸಿದ್ದ. ಕೊಲೆ ಮಾಡುವುದಕ್ಕೂ ಮೊದಲು ಆರು ತಿಂಗಳಿನಿಂದ ಶಾಂತಕುಮಾರ್ ಮನೆಗೆ ಬಂದುಹೋಗುತ್ತಿದ್ದ ನಾರಾಯಣಸ್ವಾಮಿ, ವರಮಹಾಲಕ್ಷ್ಮೀ ಹಬ್ಬದಂದು ದಂಪತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ನಾಲ್ವರು ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
