ಬೆಂಗಳೂರು:ರಾಜಧಾನಿಯ ಮನೆಯೊಂದರಲ್ಲಿ ನಿನ್ನೆ ನಡೆದಿದ್ದ ಕೊಲೆ ಪ್ರಕರಣದ ಬೆನ್ನಿಗೇ ಇಂದು ಮತ್ತೊಂದು ಶವ ಪತ್ತೆಯಾಗಿದೆ. ಅಷ್ಟಕ್ಕೂ ಯಾರ ಮೇಲೆ ಅನುಮಾನವಿತ್ತೋ ಆತನೇ ಶವವಾಗಿ ಮನೆಯ ಸಂಪ್​ನಲ್ಲಿ ಸಿಕ್ಕಿರುವುದರಿಂದ ಪ್ರಕರಣಕ್ಕೆ ತಿರುವು ಸಿಕ್ಕಂತಾಗಿದೆ.
ಕೋರಮಂಗಲ ಆರನೇ ಬ್ಲಾಕ್​ನಲ್ಲಿ ಬಿಲ್ಡರ್ ರಾಜಗೋಪಾಲರೆಡ್ಡಿ ಎಂಬವರಿಗೆ ಸೇರಿದ ಮನೆಯಲ್ಲಿ ನಿನ್ನೆ ಈ ಕೊಲೆ ನಡೆದಿದ್ದು, ಕಳ್ಳತನ ಕೂಡ ನಡೆದಿತ್ತು. ಮನೆಯಲ್ಲಿ ಕೆಲಸಕ್ಕಿದ್ದ, ದಾವಣಗೆರೆ ಮೂಲದ ಕರಿಯಪ್ಪ ಎಂಬಾತನ ಕೊಲೆಯಾಗಿತ್ತು. ಸಂಬಂಧಿಕರ ಮದುವೆ ಸಮಾರಂಭವೊಂದಕ್ಕೆ ಮನೆಯರೆಲ್ಲ ನಿನ್ನೆ ಅನಂತಪುರಕ್ಕೆ ಹೋಗಿದ್ದಾಗ ಈ ಪ್ರಕರಣ ನಡೆದಿತ್ತು. ದುಷ್ಕರ್ಮಿಗಳು ಮನೆಯಲ್ಲಿದ್ದ 100 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ನಗದು ದೋಚಿಕೊಂಡು ಹೋಗಿದ್ದರು. ಮಾತ್ರವಲ್ಲ ಸಿಸಿಟಿವಿಯ ಡಿವಿಆರ್​ ಕೂಡ ಕಾಣೆಯಾಗಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮನೆಯಲ್ಲಿ ಕೆಲಸಗಾರ ಕರಿಯಪ್ಪನ ಜತೆಗೆ ಅಸ್ಸಾಂ ಮೂಲದ ದಿಲ್ ಬಹದ್ದೂರ್ ಎಂಬಾತ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕರಿಯಪ್ಪ ಮೂವತ್ತು ವರ್ಷಗಳಿಂದ ರಾಜಗೋಪಾಲರೆಡ್ಡಿ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದು, ದಿಲ್ ಬಹದ್ದೂರ್ ಕಳೆದ ಎರಡು ವರ್ಷಗಳಿಂದ ಕೆಲಸಕ್ಕಿದ್ದ. ಬಹದ್ದೂರೇ ಕರಿಯಪ್ಪನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಆರಂಭದಲ್ಲಿ ಅನುಮಾನ ಉಂಟಾಗಿತ್ತು.
ಆದರೆ ಪೊಲೀಸರು ಮಹಜರು ನಡೆಸುವ ವೇಳೆ ಮನೆಯ ಸಂಪ್​ನಲ್ಲಿ ಇನ್ನೊಂದು ಶವ ಪತ್ತೆಯಾಗಿದೆ. ವಿಚಿತ್ರವೆಂದರೆ ದಿಲ್ ಬಹದ್ದೂರ್ ಕೂಡ ಕೊಲೆಯಾಗಿದ್ದು, ಆತನ ಶವ ಸಂಪ್​ನಲ್ಲಿ ಕಂಡುಬಂದಿತ್ತು.ಬೆಳಗ್ಗೆ ಕೋರಮಂಗಲ ಪೊಲೀಸರಿಂದ ಕರಿಯಪ್ಪ ಕೊಲೆಯಾಗಿರುವ ಕುರಿತು ಮಾಹಿತಿ ಬಂದಿತ್ತು. ಹೀಗಾಗಿ ಪ್ರಕರಣ ಇದೀಗ ಕ್ಲಿಷ್ಟ ಎಂಬಂತಾಗಿದ್ದು, ಕೊಲೆಗಾರರು ಯಾರು, ಇವರಿಬ್ಬರನ್ನು ಬಿಟ್ಟು ಇನ್ಯಾರು ಮನೆಗೆ ಬಂದಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಡಬಲ್ ಖುಷಿ: ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ-ಸದಸ್ಯರ ಗೌರವಧನ ಹೆಚ್ಚಳ; ಯಾರಿಗೆ ಎಷ್ಟು? ಇಲ್ಲಿದೆ ಮಾಹಿತಿ..

ಯುವತಿಯ ಬ್ಯಾಕ್​ ಮೇಲೆ ಸ್ಕೇಲ್​ನಲ್ಲಿ ಹೊಡೆದಿದ್ದಕ್ಕೆ 90 ಲಕ್ಷ ರೂ. ಕಳೆದುಕೊಂಡ ಬಾಸ್!

ಎರಡನೇ ಹೆಂಡ್ತಿಯನ್ನು ಕೊಂದು ಪೀಸ್​ ಪೀಸ್​ ಮಾಡಿ ಎಸೆದ; ಆಕೆಯ ದೇಹದ ತುಂಡು ನಾಯಿ ತಿನ್ನುತ್ತಿದ್ದುದರಿಂದ ಪ್ರಕರಣ ಬಹಿರಂಗ!

ಸಂಬಂಧಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದು ಪೀಸ್​ಪೀಸ್ ಮಾಡಿದ; ಒಂದೊಂದು ತುಂಡನ್ನು ಒಂದೊಂದು ಕಡೆ ಎಸೆದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
