ಕುಷ್ಟಗಿ (ಕೊಪ್ಪಳ): ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿಯೂ ಈಗ ಎಲ್ಲಿ ನೋಡಿದರೂ ಕರೊನಾದ್ದೇ ಮಾತು. ಆದರೆ ಇಲ್ಲೊಂದು ಮನೆಯಲ್ಲಿ ಮಾತ್ರ ಅದರ ಬಗೆಗಿನ ಚಿಂತೆಗಿಂತ ತಮ್ಮ ಸೊಸೆ ವರದಕ್ಷಿಣೆ ತರಲಿಲ್ಲ ಎಂಬುದರದ್ದೇ ಚಿಂತೆ.
ಇಲ್ಲಿನ ನಿವಾಸಿ ನಿಂಗಮ್ಮ(20) ಸುಟ್ಟಗಾಯಗಳಿಂದ ಮೃತಪಟ್ಟಿದ್ದಾಳೆ. ಆಕೆಯ ತಂದೆ ಪರಸಾಪುರ ಗ್ರಾಮದ ಸಂಗನಗೌಡ ಬುಧವಾರ ಪೊಲೀಸರಿಗೆ ದೂರು ನೀಡಿದ್ದು, ‘‘ವರದಕ್ಷಿಣೆ ತರುವಂತೆ ಪೀಡಿಸಿ, ಕೊಲೆ ಮಾಡಲಾಗಿದೆ’’ ಎಂದು ತಿಳಿಸಿದ್ದಾರೆ. ಒಟ್ಟು ಆರು ಜನರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಳ ಪತಿ ಹಿರೇನಂದಿಹಾಳ ಗ್ರಾಮದ ಚಂದಪ್ಪ, ಮಾವ ಬಸವರಾಜ ಹಾಗೂ ಅತ್ತೆ ಹನುಮವ್ವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಮೂವರಿಗಾಗಿ ಹುಡುಕುತ್ತಿದ್ದಾರೆ.
ನಡೆದದ್ದೇನು?:ಮೂರು ತಿಂಗಳ ಹಿಂದೆಯಷ್ಟೆ ಹಿರೇನಂದಿಹಾಳ ಗ್ರಾಮದ ಹುಚ್ಚೀರೇಶ್ವರ ದೇವಸ್ಥಾನದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹಿರೇನಂದಿಹಾಳ ಗ್ರಾಮದ ಚಂದಪ್ಪ ಮತ್ತು ಪರಸಾಪುರ ಗ್ರಾಮದ ನಿಂಗಮ್ಮ ಅವರ ವಿವಾಹವಾಗಿತ್ತು. ಮದುವೆಯಾದ ನಂತರ ಗಂಡನ ಮನೆಯವರು ವರದಕ್ಷ್ಷಿಣೆಗಾಗಿ ನಿಂಗಮ್ಮಳನ್ನು ಪೀಡಿಸುತ್ತಿದ್ದರು ಎನ್ನಲಾಗಿದೆ. ವಿಷಯ ತಿಳಿದ ಆಕೆಯ ತವರು ಮನೆಯವರು ಗ್ರಾಮದ ಹಿರಿಯರಿಂದ ಬುದ್ಧಿ ಹೇಳಿಸಿದ್ದರು. ಇದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ‘‘ಕೊನೆಗೂ ನನ್ನ ಮಗಳನ್ನು ಕೊಲೆ ಮಾಡಿಯೇ ಬಿಟ್ಟರು’’ ಎಂದು ಮೃತಳ ತಂದೆ ಸಂಗನಗೌಡ ದೂರಿನಲ್ಲಿ ಆರೋಪಿಸಿದ್ದಾರೆ.
ಮನೇಲಿ ಕೂತಿದ್ದು ಸಾಕು, ಇನ್ನು ಕೆಲಸಕ್ಕೆ ಬನ್ನಿ: ಎಲ್ಲ ಹಿರಿಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರದ ತಾಕೀತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
