ಬೆಂಗಳೂರು:ವರದಕ್ಷಿಣೆ ಕಿರುಕುಳಕ್ಕೆ ಲೆಕ್ಕವಿಲ್ಲದಷ್ಟು ಸಾವು-ನೋವು ಉಂಟಾಗಿದೆ. ಇಂತಹದ್ದೇ ಮತ್ತೊಂದು ಪ್ರಕರಣ ಮರುಕಳಿಸಿದ್ದು, ಹೆಣ್ಣೆತ್ತ ಪೋಷಕರು ಮಾತ್ರವಲ್ಲ, ಇತರರನ್ನೂ ಬೆಚ್ಚಿಬೀಳಿಸಿದೆ ಈ ಭಯಾನಕ ಘಟನೆ.
ಇಲ್ಲೊಬ್ಬ ಕಿರಾತಕ ಸೈಟ್ ಕೊಡಿಸಲಿಲ್ಲವೆಂದು ಪತ್ನಿಯ ಗುಪ್ತಾಂಗಕ್ಕೆ ಬೆಂಕಿಯಿಟ್ಟು ವಿಕೃತಿ ಮೆರೆದಿದ್ದಾನೆ! ಈ ಅಮಾನವೀಯ ಕೃತ್ಯ ಬೆಂಗಳೂರಿನ ಟಿಸಿ ಪಾಳ್ಯ ಬಳಿ ಸಂಭವಿಸಿದ್ದು, ಸುಟ್ಟ ಗಾಯಗಳಿಂದ ನರಳುತ್ತಿರುವ ಸಂತ್ರಸ್ತೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.
ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದ ಆರೋಪಿ ಹೆಸರು ಸೂರಜ್ ಸಿಂಗ್. ಕಳೆದ ವರ್ಷ ಚಾಂದಿನಿ ಎಂಬಾಕೆಯನ್ನು ಮದುವೆಯಾಗಿದ್ದ ಈತ, ವರದಕ್ಷಿಣೆಗೆ ದುಂಬಾಲು ಬಿದ್ದಿದ್ದ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿರಿಮದುವೆಗೆ ಒಲ್ಲೆ ಎಂದವಳನ್ನು ಹೊತ್ತೊಯ್ದ ದುಷ್ಕರ್ಮಿಗೆ ಯುವತಿ ಚಳ್ಳೆಹಣ್ಣು ತಿನ್ನಿಸಿದ್ದೇ ರೋಚಕ!
ಚಾಂದಿನಿಯ ತಂದೆ ಮಹೇಂದ್ರ ಸಿಂಗ್ ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಮಗಳ ಮದುವೆಯನ್ನು ಸೂರಜ್​ ಸಿಂಗ್​ ಜತೆ ಮಾಡಿದ್ದರು. ಮದುವೆ ಬಳಿಕ ಪದೆಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಸೂರಜ್, ಸೈಟ್​ಗಾಗಿ ಡಿಮಾಂಡ್​ ಮಾಡಿದ್ದ. ಇದೇ ವಿಚಾರವಾಗಿ ಚಾಂದಿನಿ ಜತೆ ಬುಧವಾರ ಪತಿ ಹಾಗೂ ಅತ್ತೆ ಗಲಾಟೆ ಮಾಡಿದ್ದರು. ಈ ವೇಳೆ ಕುಪಿತಗೊಂಡ ಅವರು ಚಾಂದಿನಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ರಾಮೂರ್ತಿ ಪೊಲೀಸ್​ ಠಾಣೆಯಲ್ಲಿ ಸಂತ್ರಸ್ತೆ ತಂದೆ ಮಹೇಂದ್ರ ಸಿಂಗ್​ ಕೇಸ್​ ದಾಖಲಿಸಿದ್ದಾರೆ. ತೀವ್ರ ಗಾಯಗೊಂಡಿರುವ ಚಾಂದಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಮಾಚಾರ ನೆಪದಲ್ಲಿ ವಿಧವೆ ಬಳಿ 8.12 ಕೋಟಿ ಹಣ ಪೀಕಿದ, ಖಾಸಗಿ ವಿಡಿಯೋ ಇಟ್ಟುಕೊಂಡು ಹಿಂಸಿಸಿದ!

ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅರ್ಚಕನಿಗೆ 14 ವರ್ಷ ಜೈಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 3 =
Remember me
