ಬೆಂಗಳೂರು: ಆ ಯುವತಿ ಗುರು ಹಿರಿಯರು ನಿಶ್ಚಯಿಸಿದ ವರನೊಂದಿಗೆ ನೂರಾರು ಕನಸಿನ ಬುತ್ತಿಯೊತ್ತು ಬರೋಬ್ಬರಿ 3 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ಮದುವೆಯಾದಳು. ಮೊದಲ ರಾತ್ರಿಗೂ ಕೋಣೆ ಸಿಂಗಾರಗೊಂಡಿತ್ತು. ವೈವಾಹಿಕ ಬದುಕಿನ ಮೊದಲ ರಾತ್ರಿ ಕೋಣೆಗೆ ಎಂಟ್ರಿಕೊಟ್ಟ ಪತಿಮಹಾಶಯ ಬಂದದ್ದು ಮಾತ್ರ ಫುಲ್​ ಟೈಟಾಗಿ..!
ಆಗಲೇ ಆ ವಧುಗೆ ಗೊತ್ತಾಗಿದ್ದು ತಾನು ಮದ್ವೆ ಆಗಿರುವ ಭರತ್ ಎಲ್​.ರೆಡ್ಡಿ ದುರಭ್ಯಾಸ ಚಟ ಅಂಟಿಸಿಕೊಂಡಿದ್ದಾನೆ ಎಂದು. ಅಷ್ಟೇ ಅಲ್ಲ ಎಸ್ಎಸ್ಎಲ್​ಸಿ ಫೇಲಾಗಿದ್ರೂ ಇಂಜಿನಿಯರ್ ಅಂತ ಭರತ್ ಸುಳ್ಳು ಹೇಳಿದ್ದಾನೆ ಎನ್ನಲಾಗಿದೆ. ​ ಕುಡಿತ ಚಟ ಹತ್ತಿಸಿಕೊಂಡಿದ್ದ ಆತ ಮೊದಲ ರಾತ್ರಿಯೇ ಹೆಂಡ್ತಿಗೆ ಚಿತ್ರಹಿಂಸೆ ನೀಡಿದ್ದರ ಮತ್ತು ಮಗನ ಮೊದಲ ರಾತ್ರಿ ನಡೆಯಲೆಂದು ಅತ್ತೆ-ಮಾವ ವಾಮಾಚಾರ ಮಾಡಿಸಿ ಹಿಂಸೆ ನೀಡಿದ್ದರ ಬಗ್ಗೆ ಎಚ್ಎಎಲ್ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.
ಭರತ್​ ಜತೆ 2020ರ ಅಕ್ಟೋಬರ್​ 29ರಂದು ಶ್ರಾವಣಿಯ ಮದುವೆ ಆಗಿತ್ತು. ಮದುವೆ ವೇಳೆ ಭರತ್​ಗೆ ವಧುವಿನ ಕುಟುಂಬಸ್ಥರು 1 ಕೋಟಿ ಮೌಲ್ಯದ ಬೆಂಝ್​ ಕಾರನ್ನು ನೀಡಿದ್ದರು. 5 ಲಕ್ಷ ರೂ. ಬೆಳೆಬಾಳುವ ಡೈಮಂಡ್ ರಿಂಗ್ ನೀಡಲಾಗಿತ್ತು. ಬೆಂಝ್ ಕಾರು ಸೇರಿ ಐದು ಕೆಜಿ ಚಿನ್ನಾಭರಣ ನೀಡಿ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.
ಫಸ್ಟ್ ನೈಟ್ ದಿನವೇ ವಧು ಇದ್ದ ಕೋಣೆಗೆ ಭರತ್​ ಕುಡಿದು ಬಂದಿದ್ದ. ಇದನ್ನ ನೋಡಿ ಗಾಬರಿಯಾದ ಪತ್ನಿ ಈ ಬಗ್ಗೆ ಪ್ರಶ್ನಿಸುತ್ತಿದ್ದರೂ ಭರತ್​ ಬಲವಂತವಾಗಿ ಆಕೆಯ ಮೈ ಮುಟ್ಟಲು ಯತ್ನಿಸಿದ್ದ. ಇರಿಸುಮುರಿಸುಗೊಂಡ ಪತ್ನಿ, ಭರತ್​ನನ್ನು ಹತ್ತಿರ ಬರದಂತೆ ವಿರೋಧಿಸುತ್ತಿದ್ದಾಗ ಕುಪಿತಗೊಂಡ ಆತ ಮುಖ, ಕತ್ತನ್ನು ಪರಚಿ ಹಲ್ಲೆ ಮಾಡಿದ್ದಾನೆ. ಮರುದಿನ ರಾತ್ರಿ ಅತ್ತೆ-ಮಾವ ಇಬ್ಬರೂ ಸೇರಿಕೊಂಡು ವಾಮಾಚಾರ ಮಾಡಿಸಿ ಮೊದಲ ರಾತ್ರಿ ಕಾರ್ಯಕ್ರಮ ನಡೆಸುವಂತೆ ಹಿಂಸೆ ಕೊಟ್ಟಿದ್ದಾಗಿಯೂ ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.
ಮಗಳ ಚೀರಾಟ ಕೇಳಿ ಪಾಲಕರು ಓಡಿ ಬರುವಷ್ಟರಲ್ಲಿ ಹೆಣವಾಗಿದ್ದಳು! ಅಲ್ಲೇ ಕುಳಿತಿದ್ದ ಬಾಲಕ ಬಾಯ್ಬಿಟ್ಟ ಸ್ಫೋಟಕ ರಹಸ್ಯ

ಸರ್ಕಾರದ 2 ಲಕ್ಷ ರೂ. ಪರಿಹಾರ ಪಡೆಯಲು ಯಾರೂ ಇಲ್ಲ..! ಇದ್ದರೆ ದಯವಿಟ್ಟು ಸಂಪರ್ಕಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
