|ಡಾ. ಸತ್ಯನಾರಾಯಣ ಎ.
ಹಿಂದಿನ ಕಾಲದಲ್ಲಿ ಅಂಥ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಬೆಳಗ್ಗೆವರೆಗೆ ಆಟ ಆಡುತ್ತಿದ್ದುದು ವಿನಃ ಬೇರೇನೂ ಅಲ್ಲ. ಯಕ್ಷಗಾನ ನೋಡುವವರಿಗೂ ರಾತ್ರಿ ಹೋಗಲೂ ಯಾವುದೇ ವ್ಯವಸ್ಥೆ ಇರಲಿಲ್ಲ. ಕೆಲವೊಂದು ಕಡೆ ಬೆಳಕಿನ ವ್ಯವಸ್ಥೆ ಕೂಡ ಇದ್ದಿರಲಿಲ್ಲ.
ಇನ್ನು ಹೇಗೋ ಯಕ್ಷಗಾನಕ್ಕೆ ಬಂದವರು ಬೆಳಗಿನ ತನಕ ಆಟ ನೋಡುತ್ತಲೂ ಇರಲಿಲ್ಲ. ಬರುವಾಗಲೆ ಚಾಪೆ ತಂದು ಅದನ್ನು ಹಾಸಿ ಮಲಗುತ್ತಿದ್ದರು. ಬಹಳಷ್ಟು ಮಂದಿ ಪ್ರಸಂಗ ಮುಗಿಯುವ ತನಕ ನಿಲ್ಲುತ್ತಲೂ ಇರಲಿಲ್ಲ. ಸ್ವಲ್ಪ ಬೆಳಕು ಹರಿಯುತ್ತಿದ್ದಂತೆ ಆ ನಸುಕಿನಲ್ಲೇ ಹೊರಡುತ್ತಿದ್ದರು.
ಮತ್ತೊಂದೆಡೆ ಯಕ್ಷಗಾನ ಪ್ರಸಂಗ ರಚನೆಯೂ ಇದಕ್ಕೆ ಸರಿಯಾಗಿಯೇ ಇರುತ್ತಿತ್ತು. ರಾತ್ರಿಯಿಂದ ಬೆಳಗ್ಗೆ ತನಕ ಇರುವಂತೆ ಪ್ರಸಂಗ ರಚಿಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಹಾಸ್ಯ, ಕುಣಿತ ಇತ್ಯಾದಿಗಳಿಂದ ಬೆಳಗಿನ ತನಕ ಆಟ ಮುಂದುವರಿಯುವಂತೆ ಮಾಡುತ್ತಿದ್ದರು.
ಆದರೆ ಈಗಿನ ಕಾಲದಲ್ಲಿ ಯಾವುದೇ ಸಮಯದಲ್ಲಿ ಮನೆಗೆ ಹೋಗಲು ಅಡ್ಡಿ ಇಲ್ಲ. ಯಾಕೆಂದರೆ ಸಾಮಾನ್ಯವಾಗಿ ಬಹುತೇಕ ಎಲ್ಲರ ಬಳಿಯೂ ಸ್ವಂತ ವಾಹನವಿದೆ. ಹಾಗೆಯೇ ಎಲ್ಲರಿಗೂ ಅವರವರ ತಾಪತ್ರಯಗಳೂ ಇವೆ. ಬೆಳಗ್ಗೆವರೆಗೆ ಇದ್ದು ಯಕ್ಷಗಾನ ವೀಕ್ಷಿಸುವ ತಾಳ್ಮೆ ಬಹಳಷ್ಟು ಮಂದಿಗೆ ಇರುವುದಿಲ್ಲ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಬೆಳಗ್ಗೆ ತನಕ ಆಟ ನೋಡುತ್ತಾರೆ. ಅಲ್ಲದೆ ಯಕ್ಷಗಾನ ಕಲಾವಿದರಿಗೂ ನಿದ್ದೆಗೆಟ್ಟರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಯಕ್ಷಗಾನದ ವಿಷಯದಲ್ಲಿ ಎಲ್ಲ ಮೇಳದವರೂ ಕಾಲಮಿತಿ ಹಾಕಿಕೊಳ್ಳುವುದು ಒಳ್ಳೆಯದು.

ರಾತ್ರಿ ಇಡೀ ಆಟ ಬೇಕೇ?; ಕಾಲಮಿತಿ ಯಕ್ಷಗಾನ ಸಾಕೇ?

‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − three =
Remember me
