ಉಡುಪಿ:ಪ್ರಸಿದ್ಧ ಪ್ರವಚನಕಾರರಾಗಿ, ಕೊನೆಗಾಲದವರೆಗೂ ಬರವಣಿಗೆಯಲ್ಲಿ ತೊಡಗಿಸಿಕೊಂಡು ಜೀವನವನ್ನು ಅಧ್ಯಯನ, ಪ್ರವಚನಕ್ಕೆ ಮುಡಿಪಾಗಿಟ್ಟಿದ್ದ ತತ್ತ್ವ ಪರಂಪರೆಯ ದೊಡ್ಡಕೊಂಡಿ ಕಳಚಿದೆ. ವಿದ್ಯಾವಾಚಸ್ಪತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಹುಶ್ರುತ ವಿದ್ವಾಂಸ ಡಾ.ಬನ್ನಂಜೆ ಗೋವಿಂದಾಚಾರ್ಯ (84) ವಯೋಸಹಜ ಅನಾರೋಗ್ಯ ದಿಂದ ಭಾನುವಾರ ಬೆಳಗ್ಗೆ 11 ಗಂಟೆಗೆ ಅಂಬಲಪಾಡಿ ನಿವಾಸದಲ್ಲಿ ವಿಧಿವಶರಾದರು. ಲೇಖಕಿ ವೀಣಾ ಬನ್ನಂಜೆ ಸಹಿತ ನಾಲ್ವರು ಪುತ್ರಿಯರು, ಪುತ್ರ ವಿನಯಭೂಷಣ ಅವರನ್ನು ಅಗಲಿದ್ದಾರೆ. ಅಂಬಲಪಾಡಿ ಮನೆಯಲ್ಲಿ ಗಣ್ಯರು, ಧಾರ್ವಿುಕ ಕ್ಷೇತ್ರದ ಮುಖಂಡರು, ವಿದ್ಯಾರ್ಥಿಗಳು, ಅಭಿಮಾನಿಗಳು ಬನ್ನಂಜೆ ಗೋವಿಂದಾಚಾರ್ಯರ ಅಂತಿಮ ದರ್ಶನ ಪಡೆದರು. ಸಂಜೆ ಅಂತ್ಯಕ್ರಿಯೆ ನೆರವೇರಿತು.
ಗೋವಿಂದಾಚಾರ್ಯರ ದ್ವಿತೀಯ ಪುತ್ರ ವಿಜಯ ಭೂಷಣ ಆಚಾರ್ಯ ಇತ್ತೀಚೆಗೆ ತೀರಿಕೊಂಡಿದ್ದು, 12ನೇ ದಿನದ ಕಾರ್ಯಕ್ಕೆ ಭಾನುವಾರ ಬೆಳಗ್ಗೆ ತಯಾರಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಗೋವಿಂದಾಚಾರ್ಯರ ಆರೋಗ್ಯದಲ್ಲಿ ಏರುಪೇರಾಗಿ ಕೊನೆಯುಸಿರೆಳೆದರು.
‘ನಾಲ್ಕು ದಿನಗಳ ಹಿಂದೆ ಸ್ವಲ್ಪ ಅನಾರೋಗ್ಯ ಕಾಣಿಸಿಕೊಂಡಿತ್ತು. ಪುತ್ರಶೋಕದಿಂದ ನಾಲ್ಕು ದಿನ ಕೊರಗುತ್ತಿದ್ದರು. ಕಳೆದ ಎರಡು ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಗ್ಗೆ ದುಃಖಿತರಾಗಿದ್ದರು. ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ತರಿಸುವಷ್ಟರಲ್ಲಿ ಕೊನೆಯುಸಿರೆಳೆದರು. ಪುತ್ರನ 12ನೇ ದಿನದ ಧಾರ್ವಿುಕ ಕಾರ್ಯಕ್ರಮ ಸಂಪೂರ್ಣ ಮುಗಿಯುವವರೆಗೆ ಇದ್ದರು. ಎಲೆ ಹೊರಗಿಡುವ ಕಾರ್ಯಕ್ರಮ ಮುಗಿದ 10 ನಿಮಿಷದಲ್ಲಿ ತಮ್ಮ ಬಾಳಪಯಣವನ್ನು ಮುಗಿಸಿದರು’ ಎಂದು ಪುತ್ರ ವಿನಯ ಭೂಷಣ ತಿಳಿಸಿದ್ದಾರೆ.
ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಸಾಹಿತ್ಯಕ್ಕೆ ನೀಡಿರುವ ಅಪಾರ ಕೊಡುಗೆಗಳಿಂದ ಸದಾ ನೆನಪಿನಲ್ಲಿ ಉಳಿಯುತ್ತಾರೆ. ಸಂಸ್ಕೃತ ಹಾಗೂ ಕನ್ನಡ ಭಾಷೆಗಳ ಬಗ್ಗೆ ಅವರ ತೋರಿಸಿದ್ದ ಉತ್ಸಾಹ ಶ್ಲಾಘನೀಯ. ಅವರ ಈ ಕಾರ್ಯ ಭವಿಷ್ಯದ ಪೀಳಿಗೆಗೂ ಪ್ರಭಾವ ಬೀರಲಿದೆ. ಅವರ ನಿಧನ ನೋವು ತಂದಿದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುವೆ. ಓಂ ಶಾಂತಿ.| ನರೇಂದ್ರ ಮೋದಿಪ್ರಧಾನಿ
ಬನ್ನಂಜೆ ಗೋವಿಂದಾಚಾರ್ಯರ ಅಗಲಿಕೆ ಆಧ್ಯಾತ್ಮಿಕ ಕ್ಷೇತ್ರಕ್ಕೆ ದೊಡ್ಡ ನಷ್ಟ. ಅವರು ಸರ್ಕಾರಕ್ಕೆ ಸಲಹೆ, ನಿರ್ದೇಶನಗಳನ್ನು ನೀಡುತ್ತಿದ್ದರು. ನನ್ನನ್ನು ವೈಯಕ್ತಿಕವಾಗಿ ಕರೆಸಿಕೊಂಡು ಕೆಲವು ಸಲಹೆಗಳನ್ನು ನೀಡಿದ್ದರು. ಅದನ್ನು ಸರ್ಕಾರ ಮುಂದಿನ ದಿನಗಳಲ್ಲಿ ಪಾಲಿಸಲಿದೆ.| ಕೋಟ ಶ್ರೀನಿವಾಸ ಪೂಜಾರಿಧಾರ್ವಿುಕ, ದತ್ತಿ ಇಲಾಖೆ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
