ಬೆಂಗಳೂರು:‘ನಮಸ್ಕಾರ ದೇವರು’ ಎನ್ನುತ್ತಲೇ ಕನ್ನಡಿಗರಿಗೆ ಜಗತ್ತಿನ ವಿವಿಧ ಪ್ರದೇಶಗಳನ್ನು ತೋರಿಸುತ್ತ ಅಲ್ಲಿನ ವಿಶೇಷತೆಗಳನ್ನು ಕನ್ನಡದಲ್ಲೇ ವಿವರಿಸುತ್ತ ಎಲ್ಲರ ಮನಗೆದ್ದಿರುವ ಯೂಟ್ಯೂಬರ್ ಡಾ.ಬ್ರೋ (ಗಗನ್ ಶ್ರೀನಿವಾಸ್) ಗೋ ಪ್ರವಾಸ ಎಂಬ ಕಚೇರಿ ಆರಂಭಿಸಿ ಹೊಸದೊಂದು ಸಾಹಸಕ್ಕೆ ಕೈಹಾಕಿರುವುದು ಎಲ್ಲರಿಗೂ ತಿಳಿದೇ ಇದೆ.
ಗೋಪ್ರವಾಸ ಮೂಲಕ ಜನಸಾಮಾನ್ಯರು ಯಾವುದೇ ಆತಂಕವಿಲ್ಲದೆ ಆರಾಮಾಗಿ ವಿದೇಶ ಪ್ರವಾಸ ಮಾಡಿಸುವುದೇ ಡಾ. ಬ್ರೋ ಅವರ ಗುರಿಯಾಗಿದೆ. ತಾಜಾ ಸಂಗತಿ ಏನೆಂದರೆ, ಕನ್ನಡಿಗರಿಗೆ ಡಾ. ಬ್ರೋ ಬಂಪರ್​ ಆಫರ್ ಒಂದನ್ನು ನೀಡಿದ್ದಾರೆ. ಅವರೊಂದಿಗೆ ಕೆಲಸ ಮಾಡುವ ಸುವರ್ಣಾವಕಾಶ ಒದಗಿಬಂದಿದೆ. ಅವರು ಹೇಳಿರುವ ಅರ್ಹತೆಗಳು ನಿಮ್ಮಲ್ಲಿದ್ದರೆ ನೀವು ಕೂಡ ಡಾ. ಬ್ರೋ ಅವರೊಂದಿಗೆ ಕೆಲಸ ಮಾಡಬಹುದು.
78ನೇ ಸ್ವಾತಂತ್ರ್ಯ ದಿನದಂದು ಬೆಂಗಳೂರಿನ ವಿಜಯನಗರದಲ್ಲಿ ಡಾ. ಬ್ರೋ ಅವರು ಗೋಪ್ರವಾಸ ಕಚೇರಿಯನ್ನು ತೆರೆದಿದ್ದಾರೆ. ಇದೀಗ ಅವರ ಕಚೇರಿಯಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ ಎಂದು ಪೋಸ್ಟ್​ ಮಾಡಿ, ಆಸಕ್ತರು ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ. ಆದರೆ, ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ಸಹ ಉಲ್ಲೇಖಿಸಿದ್ದಾರೆ. ಯಾವ್ಯಾವ ಪೋಸ್ಟ್? ಎಷ್ಟು ಹುದ್ದೆಗಳು ಖಾಲಿ ಇವೆ? ಮತ್ತು ಅರ್ಹತೆಗಳೇನು? ಎಂಬುದನ್ನು ನಾವೀಗ ತಿಳಿಯೋಣ.
ಸದ್ಯ ಡಾ. ಬ್ರೋ ಅವರ ಗೋಪ್ರವಾಸ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳೆಂದರೆ, ಇಂಟರ್​​ನ್ಯಾಷನಲ್​ ಆಪರೇಟಿವ್​ ಎಕ್ಸಿಕ್ಯೂಟಿವ್ ಹುದ್ದೆ ಖಾಲಿಯಿದ್ದು, ಹಾಲಿ ಡೇ ಪ್ಯಾಕೇಜ್​ನಲ್ಲಿ ಕೆಲಸ ಮಾಡಿ ಅನುಭವ ಇರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಅಲ್ಲದೆ, ದೇಶಿಯ ಆಪರೇಟಿವ್​ ಎಕ್ಸಿಕ್ಯೂಟಿವ್ ಹುದ್ದೆಗೂ ಸಹ ಹಾಲಿಡೇ ಪ್ಯಾಕೇಜ್​ನಲ್ಲಿ ಕೆಲಸ ಮಾಡಿದವರು ಬೇಕಾಗಿದ್ದಾರೆ. ಏಷ್ಯಾ ಖಂಡದ ದೇಶಗಳಿಗೆ ವೀಸಾ ನೀಡುವ ಪರಿಣಿತರು ಹಾಗೂ ಆನ್​ಲೈನ್​ ಮತ್ತು ಆಫ್​ಲೈನ್​ ಟಿಕೆಟ್ ಬುಕ್ಕಿಂಗ್ ಕೊಡುವ ಅನುಭವಸ್ಥ ಆಸಕ್ತರು ಡಾ. ಬ್ರೋ ಅವರನ್ನು ಸಂಪರ್ಕ ಮಾಡಬಹುದು.
ಒಟ್ಟು ನಾಲ್ಕು ಹುದ್ದೆಗಳು ಖಾಲಿ ಇವೆ. ಕನ್ನಡ, ಇಂಗ್ಲಿಷ್​ ಮತ್ತು ಹಿಂದಿ ಮಾತನಾಡಲು ಬರಬೇಕು. ಸಂಬಳ ಎಷ್ಟು ಎಂಬುದರ ಬಗ್ಗೆ ಡ್ರಾ. ಬ್ರೋ ಅವರು ಯಾವುದೇ ಮಾಹಿತಿ ನೀಡಿಲ್ಲ. ವಿದ್ಯಾರ್ಹತೆಯಾಗಿ ಪಿಯುಸಿ ಮತ್ತು ಪದವಿ ಪಾಸಾದವರನ್ನು ಪರಿಗಣಿಸಲಾಗುತ್ತದೆ. ಆದರೆ, ವಿಶೇಷವಾಗಿ ಪ್ರವಾಸೋದ್ಯಮ ಕೋರ್ಸ್​ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಾವು ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಡ್ರಾ. ಬ್ರೋ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ[email protected]ಗೆಮೇಲ್ ಮಾಡಿ.

ಮಾಂಸಕ್ಕಾಗಿ ಕೊಲ್ಲಬೇಡಿ ನಾವು ಸಹಾಯ ಮಾಡ್ತೀವಿ: ನಮೀಬಿಯಾ ಪ್ರಾಣಿಗಳ ರಕ್ಷಣೆಗೆ ಮಿಡಿದ ಅನಂತ್​ ಅಂಬಾನಿಯ ವಂತಾರಾ

ಮನುಷ್ಯರ ವಿರುದ್ಧ ಸೇಡಿನ ಸಮರ: ತೋಳಗಳ ಅಟ್ಟಹಾಸ ಹಿಂದಿದೆ ಮರಿಗಳನ್ನು ಕಳೆದುಕೊಂಡ ಆಕ್ರಂದನ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:nineteen − five =
Remember me
