-ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ಅರ್ಜಿ ಹಾಕುವ ಪದ್ಧತಿ ನಮ್ಮಲ್ಲಿಲ್ಲ
ಬೆಂಗಳೂರು:ಕಾಂಗ್ರೆಸ್​​ ಗ್ಯಾರಂಟಿ ಯೋಜನೆಗಳಿಗೆ ಹಾಕಿದ ಷರತ್ತುಗಳನ್ನು ವಾಪಸ್ ಪಡೆಯುವಂತೆ ಸದನದ ಒಳಗೆ ಹಾಗೂ ಆಚೆಗೆ ಪ್ರತಿಭಟನೆ ಮಾಡಲು ಬಿಜೆಪಿ ತೀರ್ಮಾನಿಸಿ. ಮೋಸ ನಿಲ್ಲಿಸಿ ಗ್ಯಾರಂಟಿ ಜಾರಿಗೊಳಿಸಿ ಶೀರ್ಷಿಕೆಯಡಿ ಹೋರಾಟ ಮಾಡುತ್ತೇವೆಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿರೋಧ ಪಕ್ಷ‌ದ ನಾಯಕನ ಸ್ಥಾನಕ್ಕೆ ಅರ್ಜಿ ಹಾಕುವ ಪರಿಸ್ಥಿತಿ ನಮ್ಮಲ್ಲಿ ಇಲ್ಲ. ಶೀಘ್ರದಲ್ಲೇ ನಾಯಕನ‌ ಆಯ್ಕೆ ನಡೆಯಲಿದೆ. ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧವಾಗಿದ್ದೇನೆ. ಮುಖ್ಯಮಂತ್ರಿ ಆಯ್ಕೆಗೆ ಎಷ್ಟು ದಿನ ತೆಗೆದುಕೊಂಡಿದ್ರು? ನಾನು ಸಿಎಂ ಎಂದು ಅವರು ಕಿತ್ತಾಡುತ್ತಾರೆ. ಮೊದಲು ಅವರ ಪಕ್ಷದಲ್ಲಿರುವ ಗುಂಪುಗಳ ಬಗ್ಗೆ ನೋಡಲಿ. ನಮ್ಮ ಬಗ್ಗೆ ಮಾತನಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಗ್ರಾಹಕರ ಕೈಸುಡುತ್ತಿದೆ ಟೊಮ್ಯಾಟೊ ದರ; ಆಂಧ್ರ ಸರ್ಕಾರದಿಂದ ಕಡಿಮೆ ಬೆಲೆಗೆ ಮಾರಾಟ
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕಾರ್ಯಗತವಾಗಿಲ್ಲ. ಜನರ ಮತ‌ ಪಡೆದು‌ ಕಾಂಗ್ರೆಸ್​​ನವರು ಮಾತು ತಪ್ಪಿದ್ದಾರೆ. ಹೀಗಾಗಿ ಬಿಜೆಪಿ‌ ಸದನದ ಒಳಗೆ ಮತ್ತು ಹೊರಗಡೆ ಹೋರಾಟ ಮಾಡಲಿದೆ. ಸದನದ ಹೊರಗಡೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಜುಲೈ.4ರಂದು ಫ್ರೀಡಂಪಾರ್ಕ್​ನಲ್ಲಿ ಹೋರಾಟ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:VIDEO| ಮೊಸಳೆಯನ್ನು ಮದುವೆಯಾದ ಮೇಯರ್​​; ಈ ವಿವಾಹದ ಹಿಂದೆ ಇದೆ ಆ ಕಾರಣ….
ಯಾವುದೇ ಕಂಡೀಷನ್ ಇಲ್ಲದೇ ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿದ್ದರು. ಇವತ್ತು ಅದನ್ನ‌ ಕೊಡದೇ ಮುಂದಕ್ಕೆ ಹಾಕ್ತಿದಾರೆ. 10 ಕೆಜಿ ಅಕ್ಕಿ‌ಕೊಡುತ್ತೇನೆ ಅಂದಿದ್ದರು. ಈಗ 5 kgಗೆ ಬಂದಿದ್ದಾರೆ. ಈಗ ಹಣ ಕೊಡೋಕೆ ಮುಂದಾಗಿದ್ದಾರೆ. ಒಂದು ತಲೆಗೆ 10 kg ಅಕ್ಕಿ‌ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಮೋಸ ನಿಲ್ಲಿಸಿ ಗ್ಯಾರಂಟಿ ಜಾರಿಗೊಳಿಸಿ ಶೀರ್ಷಿಕೆಯಡಿ ಹೋರಾಟ:ಯುವನಿಧಿ ಯೋಜನೆ ಬಗ್ಗೆ ಬಹುತೇಕ ಗೊಂದಲ ಇದೆ. ಎಲ್ಲಾ ನಿರುದ್ಯೋಗಿಗಳಿಗೆ 3000 ರೂ. ಹಣ ನೀಡಬೇಕು. ಶಕ್ತಿ ಯೊಜನೆಯಿಂದ ಬಸ್ ಗಳ ಕೊರತೆ ಉಂಟಾಗಿದೆ. ನಡು ರಸ್ತೆಯಲ್ಲಿಯೇ ಬಸ್ ಗಳು ಕೆಟ್ಟು ನಿಲ್ಲುತ್ತಿವೆ. ಅಲ್ಲದೇ ಶಕ್ತಿ ಯೊಜನೆಯಿಂದ ಆಟೋ ಚಾಲಕರ ಪರಿಸ್ಥಿತಿ ಹದಗೆಟ್ಟಿದೆ. ಪ್ರತಿ ಮನೆಗೂ 209 ಯುನಿಟ್‌ವಿದ್ಯುತ್ ಕೊಡಬೇಕು.ಎಲ್ಲರೂ ಕರೆಂಟ್ ಸ್ಟೌವ್ ಕೊಂಡುಕೊಂಡಿದ್ದಾರೆ. ಪ್ರತಿಯೊಬ್ಬ ಮಹಿಳೆಗೂ 2 ಸಾವಿರ ಅಂತಾ ಪ್ರಿಯಾಂಕ ಗಾಂಧಿ ಘೋಷಿಸಿದ್ರು..ಅದರಂತೆ ಪ್ರತಿಯೊಬ್ಬ ಮಹಿಳೆಗೂ ಕೊಡಬೇಕು.

ನಿರುದ್ಯೋಗಿಗಳು ಕೇವಲ 2022-23ರ‌ಸಾಲಿನವರು ಮಾತ್ರನಾ? ಎಲ್ಲಾ ಡಿಗ್ರಿ, ‌ಡಿಪ್ಲೊಮಾ ಮುಗಿಸಿದವಿರಿಗೆ ಕೊಡಲೇಬೇಕು. ಇವತ್ತು‌ ಬಸ್ ಗಳು ಸರಿಯಾದ ವ್ಯವಸ್ಥೆ ಆಗ್ತಿಲ್ಲ.. ನಾಗರೀಕರಿಗೆ ಅನಾನುಕೂಲ‌ ನಿರ್ಮಾಣ ಆಗಿದೆ. ಮೋಸ ನಿಲ್ಲಿಸಿ ಗ್ಯಾರಂಟಿ ಜಾರಿಗೊಳಿಸಿ ಶೀರ್ಷಿಕೆಯಡಿ ಹೋರಾಟ ಮಾಡುತ್ತೇವೆಂದು ಕಾಂಗ್ರೆಸ್​​ ವಿರುದ್ಧವಾಗಿ ಗುಡುಗಿದ್ದಾರೆ.
VIDEO| ಮೊಸಳೆಯನ್ನು ಮದುವೆಯಾದ ಮೇಯರ್​​; ಈ ವಿವಾಹದ ಹಿಂದೆ ಇದೆ ಆ ಕಾರಣ….


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 19 =
Remember me
