ಬೆಂಗಳೂರು:ರಾಜ್ಯದಲ್ಲಿ ಈ ಬಾರಿ ತೀವ್ರ ಗಮನ ಸೆಳೆದಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್‌. ಮಂಜುನಾಥ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸೋದರ ಡಿಕೆ ಸುರೇಶ್‌ ವಿರುದ್ಧ ಬರೋಬ್ಬರಿ 2,29,947 ಮತಗಳಿಗೂ ಹೆಚ್ಚು ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಇದನ್ನೂ ಓದಿ:ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಗೀತಾ ಶಿವರಾಜ್​ಕುಮಾರ್ ಮೊದಲ ಪ್ರತಿಕ್ರಿಯೆ!
ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಗೆಲುವು ಪ್ರಜ್ಞಾವಂತ ಹಾಗೂ ಮತದಾರರ ಗೆಲುವು. ಈ ಗೆಲುವು ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತೇನೆ. ಎಲ್ಲಾ ಶಕ್ತಿಗಿಂತ ಜನಶಕ್ತಿ ದೊಡ್ಡದು. ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳ ಬಗ್ಗೆ ಕೆಲಸ ಮಾಡುತ್ತೇವೆ ಎಂದರು.
ಪ್ರತಿಷ್ಟಿತ ಹಾಗೂ ಹೈವೋಲ್ಟೆಜ್ ಕ್ಷೇತ್ರವಾಗಿತ್ತು. ಜನ ಪ್ರೀತಿಯಿಂದ ಅಭಿಮಾನದಿಂದ ಮತ ಕೊಟ್ಟಿದ್ದಾರೆ. ಜನ ಕೊಟ್ಟ ಪ್ರೀತಿಗೆ ಧನ್ಯವಾದಗಳು. ಐವತ್ತು ಸಾವಿರ ಅಥವಾ 2 ಲಕ್ಷ ರೇಂಜ್​​ನಲ್ಲಿ ಗೆಲ್ಲುತ್ತೇವೆ ಅಂತಾ ಇತ್ತು. 2 ಲಕ್ಷ ರೇಂಜ್​ನಲ್ಲಿ ಗೆದ್ದಿದ್ದೇವೆ. ಇದಕ್ಕಾಗಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಮಾವ ಹಾಗೂ ಅತ್ತೆಯ ಆರ್ಶೀವಾದ ಪಡೆದವು. ನನ್ನ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಎಚ್​.ಡಿ ದೇವೇಗೌಡ ಅವರು, ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಮತ್ತು ಎಲ್ಲಾ ಸದಸ್ಯರ ಪಾತ್ರವಿದೆ. ದೆಹಲಿಗೆ ಬರುವ ಬಗ್ಗೆ ಹೈಕಮಾಂಡ್​ನಿಂದ 24 ಗಂಟೆಯಲ್ಲಿ ಕರೆ ಬರಬಹುದು ಎಂದು ತಿಳಿಸಿದ್ದಾರೆ.
ಸುಳ್ಳಾಯ್ತು ಭವಿಷ್ಯ, ಕ್ಷಮೆ ಕೇಳಿ ಇನ್ನೆಂದೂ ಭವಿಷ್ಯ ನುಡಿಯಲಾರೆ ಎಂದ ಖ್ಯಾತ ಜ್ಯೋತಿಷಿ ವೇಣುಸ್ವಾಮಿ!

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:eleven − 8 =
Remember me
