ಆನೇಕಲ್​:ಬೆಂಗಳೂರು ಸುತ್ತಮುತ್ತ ಭೂಮಿಗೆ ಚಿನ್ನದ ಬೆಲೆ ಬಂದಿದ್ದು, ಕೃಷಿಯಿಂದ ಜನ ದೂರವಾಗುತ್ತಿದ್ದಾರೆ. ಆದರೆ ಪ್ರತಿಯೊಬ್ಬರೂ ಉತ್ತಮ ಬದುಕು ನಡೆಸಲು ಗಾಳಿ, ನೀರು, ಅಗ್ನಿಯಂತೆ ಕೃಷಿಯೂ ಮುಖ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಆನೇಕಲ್​ ತಾಲೂಕಿನ ಬ್ಯಾಗಡದೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂನಮಡಿವಾಳದಲ್ಲಿ ಗುರುವಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಅಭಿವೃದ್ಧಿ ಮಾಡಲಾದ 244ನೇ ಕೆರೆ ಹಸ್ತಾಂತರ ಹಾಗೂ ಬಾಗಿನ ಅರ್ಪಣೆ ಮತ್ತು ಫಲಾನುಭವಿಗಳಿಗೆ ಯೋಜನೆಯ ವಿವಿಧ ಸೌಲಭ್ಯ ವಿತರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ವೀರೇಂದ್ರ ಹೆಗ್ಗಡೆ ಅವರು, ಜಲ ಇಲ್ಲದೆ ಯಾರೊಬ್ಬರೂ ಬದುಕಲು ಸಾಧ್ಯವಿಲ್ಲ. ಅಗ್ನಿ, ವಾಯು ಕೂಡ ಮುಖ್ಯ. ಆದರೆ ನಾವು ಈ ಮುಖ್ಯವಾದವುಗಳನ್ನೇ ಮರೆಯುತ್ತಿದ್ದೇವೆ ಎಂದು ಬೇಸರಿಸಿದರು.
2022ರಲ್ಲಿ ಉಂಟಾದ ಅತಿವೃಷ್ಟಿಯನ್ನು ನಾವೆಲ್ಲರೂ ನಮ್ಮ ಕಣ್ಣೆದುರೇ ನೋಡಿದ್ದೇವೆ. ಕೆರೆ-ಕುಂಟೆಗಳು ಕಾಲುವೆಗಳು ಸರಿಯಾಗಿದ್ದರೆ ನೀರು ಸರಿಯಾಗಿ ಹರಿಯುತ್ತದೆ. ಆದ್ದರಿಂದ ಕೆರೆ-ಕುಂಟೆಗಳ ಉಳಿವಿಗೆ ಸಂಸ್ಥೆಯ ಯೋಜನೆಯ ಮೂಲಕ ಕಾರ್ಯಕ್ರಮ ರೂಪಿಸಿದ್ದು, ಇದಕ್ಕೆ ಗ್ರಾಮಸ್ಥರ ಸಹಕಾರವೂ ಮುಖ್ಯ ಎಂದರು.
ಒಂದು ಮನೆಯಲ್ಲಿ ಒಬ್ಬ ವ್ಯಕ್ತಿಗೆ ದುಶ್ಚಟವಿದ್ದರೆ ಮನೆ ಹಾಳಾಗುತ್ತದೆ. ಹಾಗಾಗಿ ಸಂಸ್ಥೆಯಿಂದ ಮದ್ಯವರ್ಜನ ಶಿಬಿರ ಹಮ್ಮಿಕೊಂಡಿದ್ದೇವೆ ಎಂದ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸಂಸ್ಥೆಯಿಂದ ಶೌರ್ಯ ಶೀರ್ಷಿಕೆಯಲ್ಲಿ ವಿಶೇಷ ತಂಡ ಸಿದ್ಧವಾಗುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ಆ ತಂಡ ಸಹಾಯ ಮಾಡಲಿದೆ. ಆನೇಕಲ್​ ತಾಲೂಕಿನಲ್ಲಿಯೂ ಈ ತಂಡ ಕಾರ್ಯನಿರ್ವಹಿಸಲಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 18 ಸಾವಿರ ಕೋಟಿ ರೂ. ಸಾಲ ನೀಡಿದ್ದು, ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯ ಜೀವನ ಸಾಗಿಸಬೇಕು ಎನ್ನುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಗ್ರಾಮದ ಕೆರೆಯ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಹಲವೆಡೆ ಕೆರೆ ಅಭಿವೃದ್ಧಿ ಮಾಡಿದ ಬಳಿಕ ಕೆರೆ ಏರಿ ಮೇಲಿನ ಗಿಡಕ್ಕೆ ಹಸು ಹೋರಿ ಕಟ್ಟಿ ಹಾಕುವುದನ್ನು ನಾನು ನೋಡಿದ್ದೇನೆ. ಇದರಿಂದಾಗಿ ಮಾಡಿದ ಕೆಲಸ ಸಾರ್ಥಕ ಆಗುವುದಿಲ್ಲ. ನಿಮ್ಮೂರಿನ ಕೆರೆಯನ್ನು ನೀವೇ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದರು.

ಸಂಸದ ಡಿ.ಕೆ. ಸುರೇಶ್​ ಮಾತನಾಡಿ, ಸರ್ಕಾರ ಮಾಡಬೇಕಾದ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದೇವರ ರೀತಿಯಲ್ಲಿ ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿದ್ದಾರೆ. ಕೆರೆ ಅಭಿವೃದ್ಧಿ ಆದರೆ ಸಾಲದು, ಅದನ್ನು ಅಚ್ಚುಕಟ್ಟಾಗಿ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ನಮ್ಮೂರಿನ ಕೆರೆ, ನಮ್ಮ ಕೆರೆ ಎನ್ನುವ ಭಾವನೆ ಇರಬೇಕು. ಇತ್ತೀಚಿನ ದಿನಗಳಲ್ಲಿ ಕೆರೆಕುಂಟೆ ಬಾವಿಗಳು ಮಾಯ ಆಗುತ್ತಿದ್ದು, ಊರಿಗೊಂದು ಕೆರೆ, ರುದ್ರ ಭೂಮಿ, ದೇವಸ್ಥಾನ ಅತ್ಯವಶ್ಯಕ ಎಂದರು.
ಧರ್ಮಸ್ಥಳ ಧರ್ಮಾಧಿಕಾರಿಗಳು ಒತ್ತಡದ ಕೆಲಸದ ನಡುವೆಯೂ ಆನೇಕಲ್​ ತಾಲೂಕಿನ ಕೂನ ಮಡಿವಾಳ ಗ್ರಾಮದಲ್ಲಿನ ಕೆರೆ ಅಭಿವೃದ್ಧಿ ಸೇರಿ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಲು ಇಲ್ಲಿಗೆ ಆಗಮಿಸಿರುವುದು ಆನೇಕಲ್​ ತಾಲೂಕಿನ ಹಾಗೂ ಎಲ್ಲ ಜನರ ಪುಣ್ಯ.| ಬಿ.ಶಿವಣ್ಣಶಾಸಕ

ಭವ್ಯ ಸ್ವಾಗತ ಮೆರವಣಿಗೆ:ದೊಡ್ಡ ಹಾಗಡೆ ಗ್ರಾಮಕ್ಕೆ ವೀರೇಂದ್ರ ಹೆಗ್ಗಡೆ ಅವರು ಆಗಮಿಸುತ್ತಿದ್ದಂತೆ 2000ಕ್ಕೂ ಹೆಚ್ಚು ಜನ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತ ಕೋರಿದರು. ಜೋಡೆತ್ತುಗಳು, ವೀರಗಾಸೆ ಕುಣಿತದ ಮೆರವಣಿಗೆಯ ಮೂಲಕ ಭವ್ಯ ಸ್ವಾಗತ ಕೋರಲಾಯಿತು.

ಮುದ್ರಾಜಾಪುರ ವೀರ ಧರ್ಮಸಿಂಹಾಸನ ಸಂಸ್ಥಾನ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಂಗಳೂರು ನಗರ ಜಿಲ್ಲೆ ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ, ವಿಧಾನ ಪರಿಷತ್​ ಸದಸ್ಯ ಗೋಪಿನಾಥ ರೆಡ್ಡಿ, ನಮ್ಮೂರು ಕೆರೆ ಸಮಿತಿ ಅಧ್ಯ ವೈ ಸೋಮಣ್ಣ, ಗ್ರಾಪಂ ಅಧ್ಯಕ್ಷೆ ವೀಣಾ ಮುನಿರೆಡ್ಡಿ, ಆನೇಕಲ್​ ಯೋಜನಾಧಿಕಾರಿ ಪಾತ ಆಧ್ಯಾತ್ಮಿಕ ಚಿಂತಕ ಕೆ.ವಿ.ಲಕ್ಷ್ಮೀನಾರಾಯಣ ಆಚಾರ್ಯ, ಮುಖಂಡರಾದ ಹರೀಶ್​ ಗೌಡ, ಮುನಿರಾಜು ಗೌಡ, ರಾಧಾಕೃಷ್ಣ, ನೊಸೇನೂರು ರವಿ ಇದ್ದರು.
ಪ್ರವೀಣ್​ ನೆಟ್ಟಾರು ಹತ್ಯೆ: ಮತ್ತಿಬ್ಬರು ಆರೋಪಿಗಳ ಸುಳಿವು ಕೊಟ್ಟವರಿಗೆ 10 ಲಕ್ಷ ನಗದು ಬಹುಮಾನ ಘೋಷಿಸಿದ NIA

ಬಾಳಿ ಬದುಕಬೇಕಿದ್ದ ತುಮಕೂರಿನ ಮೂವರು ಸಹೋದರಿಯರು ಒಂಟಿ ಮನೆಯಲ್ಲಿ ದುರಂತ ಅಂತ್ಯ! ಇವರ ಕಣ್ಣೀರ ಕಥೆ ಹೇಳತೀರದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 5 =
Remember me
