ಬೆಂಗಳೂರು: ಆಯುರ್ವೇದ ಔಷಧ ಕ್ಲಿನಿಕಲ್ ಟ್ರಯಲ್ ವಿಚಾರ ದಿನೇದಿನೆ ಕಗ್ಗಂಟಾಗುತ್ತ ಸಾಗಿದೆ. ಕರೊನಾ ವೈರಸ್ ಸೋಂಕಿಗೆ ಆಯುರ್ವೇದದಲ್ಲಿ ಔಷಧ ಇದೆ ಎಂದು ಡಾ.ಗಿರಿಧರ ಕಜೆ ಮತ್ತು ಇತರ ಕೆಲವು ಆಯುರ್ವೇದ ಪರಿಣತರು ಪ್ರತಿಪಾದಿಸಿದ್ದರು. ಡಾ. ಗಿರಿಧರ ಕಜೆಯವರ ಔಷಧವನ್ನು ಪ್ರಾಯೋಗಿಕವಾಗಿ ಕರೊನಾ ಸೋಂಕು ಪೀಡಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರಿಗೆ ನೀಡಲಾಗಿದ್ದು ಧನಾತ್ಮಕ ಫಲಿತಾಂಶ ಬಂದಿದೆ ಎಂದು ಸರ್ಕಾರವೇ ಘೋಷಿಸಿತ್ತು.
ಇದನ್ನೂ ಓದಿ:ಕರೊನಾ ಸೋಂಕಿಗೆ ಆಯುರ್ವೇದದಲ್ಲಿ ರಾಮಬಾಣ
ಡಾ.ಗಿರಿಧರ ಕಜೆಯವರೂ ಕೋಟಿ ರೂಪಾಯಿ ಮೌಲ್ಯದ ಔಷಧವನ್ನೂ ಮತ್ತು ಔಷಧದ ಫಾರ್ಮುಲಾವನ್ನು ಸರ್ಕಾರಕ್ಕೆ ಹಸ್ತಾಂತರಿಸುವುದಾಗಿಯೂ ಹೇಳಿದ್ದರು. ಆದರೆ, ಸರ್ಕಾರದ ಕಡೆಯಿಂದ ಇನ್ನೂ ಅದಕ್ಕೆ ಸರಿಯಾದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಮೂಲಗಳ ಪ್ರಕಾರ, ಸರ್ಕಾರದ ಆಯಕಟ್ಟಿನ ಜಾಗದಲ್ಲಿರುವವರೆಲ್ಲ ಡಾ.ಕಜೆಯವರ ಔಷಧವನ್ನು ಬಳಸಿಕೊಂಡಿದ್ದಾರೆ!
ಇದನ್ನೂ ಓದಿ:ಆಯುರ್ವೇದ ತೇರ್ಗಡೆ, ಇನ್ನೇಕೆ ತಡೆ? ಸರ್ಕಾರದಿಂದ ದೊರಕಿಲ್ಲ ಅನುಮತಿ, ವಿಳಂಬ ಧೋರಣೆ ಹಿಂದಿದೆ ಫಾರ್ಮಾ ಲಾಬಿ
ಈ ನಡುವೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್​ಐ)ಯ ಎಥಿಕಲ್ ಕಮಿಟಿ ಡಾ.ಗಿರಿಧರ ಕಜೆಯವರಿಗೆ ನೋಟಿಸ್ ಜಾರಿಗೊಳಿಸಿದೆ. ಆ ಮೂಲಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದ ಲಾಬಿ ವಿಚಾರದ ವದಂತಿಗೆ ಇನ್ನಷ್ಟು ಪುಷ್ಟಿಯನ್ನು ತುಂಬಿದೆ. ಇವೆಲ್ಲದರ ನಡುವೆ, ಇಂದು ಸಂಜೆ ಡಾ.ಗಿರಿಧರ ಕಜೆಯವರು ನಾಳೆ ಸಂಜೆ ಫೇಸ್​ಬುಕ್​ ಲೈವ್​ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿ ಕುತೂಹಲವನ್ನು ಮೂಡಿಸಿದ್ದಾರೆ.

ಕರೊನಾ ಔಷಧ: ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆಗೆ ನೋಟಿಸ್​ ಕಳಿಸಿದ ಬಿಎಂಸಿಆರ್​ಐ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + seventeen =
Remember me
