ಬೆಂಗಳೂರು:ಕರೊನಾ ರೋಗಿಗಳ ಮೇಲೆ ಆಯುರ್ವೇದ ಔಷಧ ಪ್ರಯೋಗ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನೋಟಿಸೊಂದು ಹರಿದಾಡುತ್ತಿದೆ. ಇದು ಹಲವು ಗೊಂದಲಗಳಿಗೂ ಕಾರಣವಾಗಿತ್ತು.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್​ಐ) ಎಥಿಕಲ್ ಕಮಿಟಿ ಹೆಸರಲ್ಲಿರುವ ಲೆಟರ್​ ಹೆಡ್​ನಲ್ಲಿ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆಯವರಿಗೆ ನೋಟಿಸ್ ಎಂದು ಬರೆಯಲಾಗಿದೆ. ಇದರಲ್ಲಿ ಆಯುರ್ವೇದ ಔಷಧದ ಕ್ಲಿನಿಕಲ್​ ಟ್ರಯಲ್​ ಇನ್ನೂ ಜಾರಿಯಲ್ಲಿರುವಾಗಲೇ ಯಶಸ್ವಿಯಾಗಿದೆ ಎಂದು ಸಾರ್ವಜನಿಕವಾಗಿ ಘೋಷಿಸಿದ್ದೀರಿ ಎಂದು ಆಕ್ಷೇಪಿಸಲಾಗಿದೆ. ಇದು ಕ್ಲಿನಿಕಲ್​ ಟ್ರಯಲ್​ನ ನಿಯಮಗಳ ಉಲ್ಲಂಘನೆಯೂ ಆಗಿದೆ. ಈ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕೆಂದು ಬರೆಯಲಾಗಿತ್ತು.
ಇದನ್ನೂ ಓದಿ;ಜಗತ್ತಿನ ಮೊದಲ ಕರೊನಾ ಲಸಿಕೆ ರಷ್ಯಾದಲ್ಲಿ ಸಿದ್ಧ; ಅಕ್ಟೋಬರ್​ನಲ್ಲಿ ಎಲ್ಲರಿಗೂ ಲಭ್ಯ; ಸ್ಪುಟ್ನಿಕ್​ ಯಶಸ್ಸಿಗೆ ಹೋಲಿಕೆ
ಇದಕ್ಕೆ ಡಾ. ಗಿರಿಧರ್​ ಕಜೆ ಪ್ರತಿಕ್ರಿಯೆ ನೀಡಿದ್ದು, ನನಗೆ ಯಾವುದೇ ನೋಟಿಸ್​ ತಲುಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್​ಐ) ಎಥಿಕಲ್ ಕಮಿಟಿ 17.07.2020 ರಂದು ನೋಟಿಸ್​ ಎಂದು ಎಂದು ಪತ್ರವೊಂದು ಹರಿದಾಡುತ್ತಿದೆ. ಅದರೊಂದಿಗೆ ಹಲವು ವದಂತಿಗಳನ್ನು ಹಬ್ಬಿಸಲಾಗಿದೆ. ಅಂಥ ಯಾವುದೇ ನೋಟಿಸ್​ ನನಗೆ ತಲುಪಿಲ್ಲ. ಇದು ನನಗೆ ಹಅಗೂ ನನ್ನ ಪ್ರೀತಿಪಾತ್ರರಿಗೆ ನೋವನ್ನುಂಟು ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಲಾಗಿದ್ದು, ಉನ್ನತ ಧ್ಯೇಯವೊಂದಕ್ಕೆ ಸೋಲಾಗದಿರಲಿ ಎಂದು ಹೇಳಿದ್ದಾರೆ.
ಮೂಲಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದ ಲಾಬಿ ವಿಚಾರದ ವದಂತಿಗೆ ಇನ್ನಷ್ಟು ಪುಷ್ಟಿಯನ್ನು ತುಂಬಿದೆ. ಇವೆಲ್ಲದರ ನಡುವೆ, ಇಂದು ಸಂಜೆ ಡಾ.ಗಿರಿಧರ ಕಜೆಯವರು ನಾಳೆ ಸಂಜೆ ಫೇಸ್​ಬುಕ್​ ಲೈವ್​ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿ ಕುತೂಹಲವನ್ನು ಮೂಡಿಸಿದ್ದಾರೆ.
ಆರಂಭವಾಗಿದೆ ಕರೊನಾದ ಅಂತ್ಯಕಾಲ; ದೆಹಲಿ ಮುಂಚೂಣಿಯಲ್ಲಿ; ಏನಿದು ಆರ್​-ವ್ಯಾಲ್ಯೂ ಲೆಕ್ಕಾಚಾರ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 7 =
Remember me
