ಬೆಂಗಳೂರು:ತನ್ನನ್ನು ತಾನು ಅರಿತು,ತನ್ನೊಳಗಿರುವ ಸೂಕ್ಷ್ಮ ಶಕ್ತಿಯನ್ನು ಜಾಗೃತಗೊಳಿಸುವುದೇ ಆಧ್ಯಾತ್ಮಿಕ ಆರೋಗ್ಯ ಎಂದು ವೈದ್ಯ ಸಾಹಿತಿ,ಥಟ್ ಅಂತ ಹೇಳಿ ಖ್ಯಾತಿಯ ಡಾ.ನಾ.ಸೋಮೇಶ್ವರ ಅಭಿಪ್ರಾಯಿಸಿದ್ದಾರೆ.ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಅಯೋಧ್ಯಾ ಪಬ್ಲಿಕೇಷನ್ಸ್ ಆಯೋಜಿಸಿದ್ದ ವಿವಿಧ ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ವ್ಯಾಖ್ಯಾನವನ್ನು ಹೇಳುವಾಗ ದೈಹಿಕ ಮತ್ತು ಮಾನಸಿಕ ವಿಷಯವನ್ನಷ್ಟೇ ಉಲ್ಲೇಖಿಸಿದ್ದು,ಆಧ್ಯಾತ್ಮಿಕ ವಿಷಯವನ್ನು ಸೇರಿಸಬೇಕೆನ್ನುವ ಬೇಡಿಕೆಯನ್ನು ಹಲವು ರಾಷ್ಟ್ರಗಳು ಸಲ್ಲಿಸಿವೆ.ವಾಸ್ತವದಲ್ಲಿ ಆಧ್ಯಾತ್ಮಿಕ ಆರೋಗ್ಯಕ್ಕೂ ದೇವರು ಅಥವಾ ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲದಿದ್ದರೂ ವಿಶ್ವಸಂಸ್ಥೆ ಈ ಬೇಡಿಕೆಯನ್ನು ಪುರಸ್ಕರಿಸಿಲ್ಲ.ಆದರೆ ಸಮಾಜದ ಸ್ವಾಸ್ಥ್ಯ ಮತ್ತು ಸಾಧನೆಗೆ ಆಧ್ಯಾತ್ಮಿಕ ಆರೋಗ್ಯ ಅವಶ್ಯಕವಾಗಿದೆ.
ಮನುಷ್ಯನ ದೇಹದಲ್ಲಿ37.2ಲಕ್ಷ ಜೀವಕೋಶಗಳಿದ್ದರೆ;ಅದಕ್ಕೆ ಮೂರು ಪಟ್ಟು ಅಂದರೆ100ಲಕ್ಷ ಸೂಕ್ಷ್ಮಜೀವಿಗಳು ದೇಹದ ಹೊರಗೆ ಒಳಗೆ ಜೀವಿಸುತ್ತಿವೆ.ಆ ಸೂಕ್ಷ್ಮಜೀವಿಗಳಿಗೆ ಬೇಕಾದ ಪದಾರ್ಥವನ್ನು ನೀಡದಿದ್ದರೆ ದೇಹಕ್ಕೆ ಅನಗತ್ಯವಾದ ರಾಸಾಯನಿಕವನ್ನು ಬಿಡುಗಡೆ ಮಾಡಿದ ಮೆದುಳು ಸರಿಯಾಗಿ ಕೆಲಸ ಮಾಡದಂತೆ ಮಾಡುತ್ತವೆ.ಪ್ರತಿದಿನ ನಾರಿನಿಂದ ಕೂಡಿದ ಆಹಾರ ಪದಾರ್ಥ,ಮೊಸರು ಮಜ್ಜಿಗೆಯನ್ನು ಸೇವಿಸಬೇಕು.ಬದಲಿಗೆ ಜಂಕ್‌ುಡ್ ಸೇವನೆ ಮಾಡಿದರೆ ಸೂಕ್ಷ್ಮಜೀವಿಗಳು ಬೊಜ್ಜು,ಮಧುಮೇಹ,ಬಿಪಿ ಇದರಿಂದ ಹೃದಯಾಘಾತಕ್ಕೆ ಕಾರಣವಾಗುತ್ತದೆ.ಈ ಸೂಕ್ಷ್ಮ ಅಂಶಗಳನ್ನು ತಿಳಿದುಕೊಳ್ಳಲು ಆಧ್ಯಾತ್ಮಿಕ ಆರೋಗ್ಯ ಅವಶ್ಯಕವಾಗಿದ್ದು,ಇಂತಹ ಅಂಶಗಳುಳ್ಳ ಮಾಹಿತಿ ‘ಆರೋಗ್ಯ ಸಂಹಿತೆ’ ಗ್ರಂಥದಲ್ಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿ.ಬಿ.ಹರೀಶ್ ಅವರ ಸುಭಾಷಚಂದ್ರ ಬೋಸ್ ಅವರ ಅಂತ್ಯ ಮತ್ತಿತರ ಕುತೂಹಲದ ಮಾಹಿತಿಗಳನ್ನೊಳಗೊಂಡ ‘ಮಹಾಕಾಲ’ ಕೃತಿ,ಡಿ.ಎಸ್.ಶ್ರೀಧರ್ ಅವರ ‘ಯುಗಾಂತರ’ ಕೃತಿ,ಡಾ.ನಾ.ಸೋಮೇಶ್ವರ ಅವರ ‘ಆರೋಗ್ಯ ಸಂಹಿತೆ’ ಹಾಗೂ ‘ಬಾಲಾಢ್ಯ ಹನುಮ’ ಕೃತಿ ಲೋಕಾರ್ಪಣೆಯಾದವು.
ಸಮಾರಂಭದಲ್ಲಿ ಹಿರಿಯ ಚಿಂತಕ ಡಾ.ಬಾಬು ಕೃಷ್ಣಮೂತಿ,ಅಜಕ್ಕಳ ಗಿರೀಶ್ ಭಟ್,ಡಿ.ಎಸ್.ಶ್ರೀಧರ್,ಜಿ.ಬಿ.ಹರೀಶ್,ರೋಹಿತ್ ಚಕ್ರತೀರ್ಥ,ಮಲ್ಲೇಪುರಂ ಜಿ.ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಸ್ವಾತಂತ್ರ್ಯ ಹೋರಾಟದ ವಿಷಯದಲ್ಲಿ ಗಾಂಧಿ,ನೆಹರು,ಪಟೇಲರನ್ನು ಕುರಿತು ಅನೇಕ ಗ್ರಂಥಗಳು ಹೊರಬಂದಿವೆ.ಅದು ಅಗತ್ಯ ಕೂಡಾ.ಅದರ ಜೊತೆಗೆ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟವರಿಗೂ ನ್ಯಾಯ ಒದಗಿಸಬೇಕಲ್ಲವೇ?ಗಾಂಧೀಜಿಯವರು ನಡೆಸಿದ ದಂಡಿ ಸತ್ಯಾಗ್ರಹದ ಯಶಸ್ಸಿಗೆ ಭಗತ್ ಸಿಂಗ್ ಬಲಿದಾನವೇ ಕಾರಣ ಎಂದು ಹಿರಿಯ ಚಿಂತಕ ಡಾ.ಬಾಬು ಕೃಷ್ಣಮೂರ್ತಿ ಹೇಳಿದರು.ಭಗತ್ ಸಿಂಗ್,ಚಂದ್ರಶೇಖರ್ ಅಜಾದ್,ಸುಭಾಷಚಂದ್ರ ಬೋಸ್ ರಂತಹ ಅನೇಕರ ತ್ಯಾಗಕ್ಕೆ ಸರಿಯಾದ ಮನ್ನಣೆ ದೊರೆಯಬೇಕು.ಆ ನಿಟ್ಟಿನಲ್ಲಿ ಮಹಾಕಾಲ ಕೃತಿ ಪ್ರಕಟವಾಗಿದ್ದು ಸ್ವಾಗತಾರ್ಹ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
