ಬೆಂಗಳೂರು:ಸಮಾಜದ ಯಾವುದೇ ವ್ಯಕ್ತಿ ತನಗೆ ಅವಕಾಶ ಸಿಕ್ಕಾಗ ಉತ್ತಮ ಕೆಲಸ ಮಾಡಬೇಕು.ಉತ್ತಮ ಕಾರ್ಯದ ಮೂಲಕ ಇತರೆ ಎಲ್ಲ ಸಂಘಗಳಿಗೆ ಒಕ್ಕಲಿಗರ ಸಂಘ ಮಾದರಿಯಾಗಬೇಕು ಎಂದು ಪಟ್ಟನಾಯಕನಹಳ್ಳಿಯ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಂಜಾವಾಧೂತ ಸ್ವಾಮೀಜಿ ಸಲಹೆ ನೀಡಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘ ಕುವೆಂಪು ಕಲಾಕ್ಷೇತ್ರದಲ್ಲಿ ಹಮಿಕೊಂಡಿದ್ದ ಬೆಂಗಳೂರು ನಗರ,ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಘದಲ್ಲಿ ಹಾವು ಏಣಿ ಆಟ ಆಡಬಾರದು.ಒಗ್ಗಟ್ಟಿನಿಂದ ಎಲ್ಲರೂ ಸಂಘದ ಪ್ರಗತಿಗೆ ಶ್ರಮಿಸಬೇಕು.ರಾಜ್ಯ ಒಕ್ಕಲಿಗರ ಸಂಘವು ರಾಜಕಾರಣಿಗಳಿಗೆ ಬುದ್ಧಿ ಹೇಳುವ,ಮಾರ್ಗದರ್ಶನ ಮಾಡುವ ಮಟ್ಟದಲ್ಲಿರಬೇಕೇ ಹೊರತು,ಅವರಿಂದ ಬುದ್ಧಿ ಹೇಳಿಸಿಕೊಳ್ಳುವ ಸ್ಥಿತಿಗೆ ಹೋಗಬಾರದು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯೆಯ ಜೊತೆಗೆ ವಿಧೇಯತೆ ಹಾಗೂ ಸಂಸ್ಕಾರವನ್ನು ಕಲಿಸಬೇಕು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಲು ಒಂದು ತರಗತಿಯನ್ನು ಮೀಸಲಿಡುವ ಅಗತ್ಯವಿದೆ.ಒಳ್ಳೆಯ ವಿದ್ಯೆ ಜೊತೆಗೆ ವಿಧೇಯತೆ ಕಲಿಸಿದಾಗ ಅವರು ಸತ್ಪ್ರಜೆಗಳಾಗುತ್ತಾರೆ.ಕೇವಲ ಸಂಪಾದನೆ ಮಾಡುವುದು ಗುರಿಯಾಗಬಾರದು.ನೊಂದವರಿಗೆ ಸಹಾಯ ಹಸ್ತ ಚಾಚುವ ಮನೋಭಾವ ವಿದ್ಯಾರ್ಥಿಗಳಲ್ಲಿರಬೇಕು ಎಂದು ಸ್ವಾಮೀಜಿ ಹೇಳಿದರು.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸಂಘದ ಕಾರ್ಯಾಧ್ಯಕ್ಷ ಡಾ.ಡಿ.ಕೆ.ರಮೇಶ್,ಗೌರವಾಧ್ಯಕ್ಷ ಎಂ.ಪುಟ್ಟಸ್ವಾಮಿ,ಉಪಾಧ್ಯಕ್ಷ ಆರ್.ಪ್ರಕಾಶ್,ಪ್ರಧಾನ ಕಾರ್ಯದರ್ಶಿ ಸಿ.ದೇವರಾಜ್,ಸಹಾಯಕ ಕಾರ್ಯದರ್ಶಿ ಆರ್.ಹನುಮಂತರಾಯಪ್ಪ,ಖಜಾಂಚಿ ಎಂ.ಎಸ್.ಉಮಾಪತಿ,ನಿರ್ದೇಶಕರಾದ ಡಾ.ಟಿ.ಹೆಚ್.ಆಂಜನಪ್ಪ,ಚಂದ್ರಶೇಖರ್,ಲೋಕೇಶ್ ಬಿ.ನಾಗರಾಜಯ್ಯ,ವೆಂಕಟರಾಮೇಗೌಡ,ಸಿಇಒ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಆಡಳಿತಾತ್ಮಕವಾಗಿ ಸರ್ಕಾರ4ಭಾಗ ಮಾಡುವ ನಿರ್ಧಾರ ಮಾಡಲು ಮುಂದಾಗಿದ್ದು,ಆ ರೀತಿ ಮಾಡುವಾಗ ಕೆಂಪೇಗೌಡರ ಹೆಸರಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಶಾಸಕ ಸಿ.ಎನ್.ಬಾಲಕೃಷ್ಣ ಒತ್ತಾಯಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 11 =
Remember me
