ಬೆಂಗಳೂರು:ಕರೊನಾ ಮೂರನೇ ಅಲೆ ಹೆಚ್ಚಾಗಿ ಮಕ್ಕಳನ್ನೇ ಕಾಡಲಿದೆ ಎಂಬ ಆತಂಕದ ನಡುವೆಯೇ ಮಕ್ಕಳಿಗೆ ಹಾಗೂ ಮಕ್ಕಳಿರುವವರಿಗೆ ಈಗ ಮತ್ತೊಂದು ಭೀತಿ ಎದುರಾಗಿದ್ದು, ಭಯದ ನಡುವೆಯೇ ದಿನಗಳನ್ನು ಎದುರಿಸುವಂತಾಗಿದೆ. ಏಕೆಂದರೆ ಕರೊನಾ ಮೂರನೇ ಅಲೆ ಬರುತ್ತದೋ ಇಲ್ಲವೋ, ಆದರೆ ಈಗಾಗಲೇ ಕರೊನಾ ಬಂದು ಗುಣವಾಗಿರುವ ಮಕ್ಕಳಿಗಂತೂ ಇದು ಆತಂಕದ ವಿಷಯ. ಕೋವಿಡ್​ನಿಂದ ಗುಣಮುಖರಾದ ಮಕ್ಕಳನ್ನು ಈಗ ಮತ್ತೊಂದು ಮಾರಕ ರೋಗ ಕಾಡಲಾರಂಭಿಸಿದೆ. ಮಲ್ಟಿಸಿಸ್ಟಮ್​ ಇನ್​ಫ್ಲಮೇಟರಿ ಸಿಂಡ್ರೋಮ್​ ಇನ್​ ಚಿಲ್ಡ್ರನ್​ (MIS-C) ಎಂದು ಕರೆಯಲಾಗುವ ಈ ರೋಗ ರಾಜ್ಯದಲ್ಲಿ ಈಗಾಗಲೇ ಮೊದಲ ಬಲಿಯನ್ನು ಪಡೆದಿದೆ.
ರಾಜ್ಯದಲ್ಲಿ ಮೊದಲ ಪ್ರಕರಣ:ಜೂನ್​ 23ರಂದು ದಾವಣಗೆರೆಯಲ್ಲಿ ಮಿಸ್​-ಸಿ ಸೋಂಕು ಕಾಣಿಸಿಕೊಂಡಿದ್ದು, ಇದು ರಾಜ್ಯದಲ್ಲಿನ ಮೊದಲ ಪ್ರಕರಣವಾಗಿದೆ. ಆ ಬಳಿಕ ಇದು ಹತ್ತು ಮಕ್ಕಳಲ್ಲಿ ಕಾಣಿಸಿಕೊಂಡಿದ್ದು, ಆ ಪೈಕಿ ಏಳು ಮಂದಿ ಗುಣಮುಖರಾಗಿದ್ದಾರೆ. ಇನ್ನು ಮೂವರು ಆಸ್ಪತ್ರೆಯಲ್ಲೇ ಇದ್ದು, ಚಿಕಿತ್ಸೆ ಮುಂದುವರಿದಿದೆ. ಕೋವಿಡ್​ನಿಂದ ಗುಣಮುಖರಾದ ಮಕ್ಕಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಮಿಸ್​-ಸಿ ಬಹುಅಂಗಾಂಗ ವೈಫಲ್ಯಕ್ಕೂ ಕಾರಣವಾಗುತ್ತಿರುವುದು ಆತಂಕಕಾರಿ.
ರೋಗಲಕ್ಷಣಗಳು:ತೀವ್ರ ಜ್ವರ, ತಲೆನೋವು, ಹೊಟ್ಟೆನೋವು, ಕಣ್ಣು ಕೆಂಪಾಗುವುದು ಹಾಗೂ ಚರ್ಮದ ಮೇಲೆ ಗಾದರೆಗಳಾಗುವುದು ಮಿಸ್​-ಸಿ ರೋಗದ ಪ್ರಮುಖ ಲಕ್ಷಣಗಳು. ಈ ರೋಗವನ್ನು ಇಮ್ಯುನೋಗ್ಲೋಬಿನ್ ಆ್ಯಂಟಿಬಯಾಟಿಕ್ ಮೂಲಕ ಚಿಕಿತ್ಸೆ ನೀಡಿ ಗುಣಪಡಿಸಬಹುದು.
ಪಾಲಕರೇ.. ಈ ಮುನ್ನೆಚ್ಚರಿಕೆ ಪಾಲಿಸಿ:ಮಿಸ್​-ಸಿ ರೋಗ ಎಲ್ಲರಿಗೂ ಬರಬಹುದಾದರೂ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಆತಂಕಕಾರಿ ರೋಗವಾದರೂ ಪಾಲಕರು ಈ ಬಗ್ಗೆ ಹೆಚ್ಚಿನ ಭೀತಿಗೊಳಗಾಗುವ ಅಗತ್ಯವಿಲ್ಲ. ಮಿಸ್-ಸಿ ಕಾಯಿಲೆಯ ಲಕ್ಷಣಗಳು, ಅದರಿಂದ ಮಕ್ಕಳನ್ನು ಪಾರು ಮಾಡಲು ಪಾಲಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ನಿಜಗುಣ ಅವರು ‘ವಿಜಯವಾಣಿ’ ಯೂಟ್ಯೂಬ್ ಚಾನೆಲ್ ವೀಕ್ಷಕರಿಗೆಂದೇ ವಿಶೇಷವಾಗಿ ನೀಡಿರುವ ಟಿಪ್ಸ್ ಇಲ್ಲಿವೆ.
ಎರಡೂ ಡೋಸ್ ಲಸಿಕೆ ಪಡೆದರೆ ಕೋವಿಡ್​ನಿಂದಾಗಿ ಸಾಯದಿರುವ ಸಾಧ್ಯತೆ ಎಷ್ಟು?

ಗರ್ಭಿಣಿಯರು ಕರೊನಾ ಲಸಿಕೆ ತೆಗೆದುಕೊಳ್ಳಬಹುದೇ?; ಕೇಂದ್ರ ಸರ್ಕಾರದ ಸ್ಪಷ್ಟನೆ ಹೀಗಿದೆ…

ಎರಡೂ ಡೋಸ್ ಲಸಿಕೆ ಪಡೆದವರಿಗಿಂತಲೂ ಇವರಲ್ಲೇ ಹೆಚ್ಚು ರೋಗನಿರೋಧಕ ಶಕ್ತಿ!; ಯಾರಿವರು?

Sign in to your account
Please enter an answer in digits:ten − six =
Remember me
