ಬೆಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಅಬ್ಬರ ಹೆಚ್ಚಾಗಿದೆ. ಪೊಲೀಸ್​ ಅಧಿಕಾರಿಗಳ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ವಂಚನೆ ಎಸಗಿರುವ ಕೆಲ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಇದೀಗ ಲೈಂಗಿಕ ತಜ್ಞೆ ಪದ್ಮಿನಿ ಪ್ರಸಾದ್ ಹೆಸರಿನಲ್ಲೂ ನಕಲಿ ಖಾತೆ ತೆರೆದು ವಂಚನೆ ಎಸಲಾಗುತ್ತಿದ್ದು, ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.
ಫೇಸ್​ಬುಕ್​ನಲ್ಲಿ ಪದ್ಮಿನಿ ಪ್ರಸಾದ್​ ಹೆಸರಿನಲ್ಲಿ ಪ್ರೊಫೈಲ್​ ಫೋಟೋ ಜತೆಗೆ ಫೇಕ್ ಅಕೌಂಟ್ ತೆರೆದಿರುವ ಖತರ್ನಾಕ್​ ಗ್ಯಾಂಗ್​ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದೆ. ಪದ್ಮಿನಿ ಪ್ರಸಾದ್ ಹೆಸರಲ್ಲಿ ಮಹಿಳೆಯರ ಜತೆ ಚಾಟಿಂಗ್​ ಸಹ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಹುಡುಗನಾಗಿದ್ದರೂ, ಹುಡುಗರನ್ನು ಕಂಡರೆ ಏನೇನೋ ಆಸೆ ಹುಟ್ಟುತ್ತಿದೆ: ಪ್ಲೀಸ್​ ಪರಿಹಾರ ಹೇಳಿ…
ಖಾಸಗಿ ಅಂಗಗಳ ವಿಡಿಯೋ ರೆಕಾರ್ಡ್​ ಮಾಡಿ ಕಳಿಸುವಂತೆ ಖತರ್ನಾಕ್​ ಗ್ಯಾಂಗ್​ ಒತ್ತಾಯಿಸಿರುವುದು ಬಹಿರಂಗವಾಗಿದೆ. ಅಲ್ಲದೆ, ಖಾಸಗಿ ವಿಚಾರಗಳ ಕುರಿತು ಮಹಿಳೆಯರ ಜತೆ ಚಾಟಿಂಗ್ ನಡೆಸಿದ್ದು, ಭೇಟಿಯಾಗುವ ಸ್ಥಳದ ಬಗ್ಗೆ ಮಾಹಿತಿ ಸೇರಿದಂತೆ ಅನೇಕ ಮಾಹಿತಿಗಳನ್ನು ಕಲೆಹಾಕುವ ಪ್ರಯತ್ನಗಳನ್ನು ಗ್ಯಾಂಗ್​ ಮಾಡಿದೆ.
ಮಹಿಳೆಯರೊಂದಿಗೆ ನಡೆಸಿರುವ ಅಶ್ಲೀಲ ಚಾಟಿಂಗ್​ ಸ್ಕ್ರೀನ್​ ಶಾಟ್ ಇದೀಗ ಬಹಿರಂಗವಾಗಿದ್ದು, ಇದರಿಂದ ಎಚ್ಚೆತ್ತಿರುವ ಪ್ರದ್ಮಿನಿ ಪ್ರಸಾದ್​ ಅವರು ಸೈಬರ್ ಕ್ರೈಮ್​ಗೆ ದೂರು ಕೊಡಲು ಮುಂದಾಗಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನು ಓದಿ:ಅಮ್ಮ ವಿವಾಹಿತನ ಜತೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾಳೆ- ಭಾವಿ ಪತಿಗೆ ಹೇಗೆ ತಿಳಿಸಲಿ?
2021 ಹೇಗೆ ಏನು ಎತ್ತ? ಭಾರತ, ಕರ್ನಾಟಕದ ರಾಜಕೀಯ, ಆರೋಗ್ಯ, ಹವಾಮಾನ ಮುಂತಾದ ರಂಗಗಳಲ್ಲಿ ಏನಾಗಲಿದೆ?

ಫೈಜರ್​ ತುರ್ತುಬಳಕೆಗೆ ಒಕೆ : ಡಬ್ಲ್ಯುಎಚ್​ಒ ಅನುಮೋದಿಸಿದ ಮೊದಲ ಕೋವಿಡ್​-19 ಲಸಿಕೆ

ಗ್ರಾಮ ಪಂಚಾಯಿತಿ ಚುನಾವಣೆ: ಯಾವ ಪಾರ್ಟಿಗೆ ಎಷ್ಟು ಸೀಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 4 =
Remember me
