ಬೆಂಗಳೂರು:ಇಂದು ವರನಟ ಡಾ. ರಾಜ್​ಕುಮಾರ್​ ಅವರ ಜನ್ಮ ದಿನ. ಕರೊನಾ ಸಂಕಷ್ಟಕಾಲ ಇಲ್ಲವಾಗಿದ್ದರೆ ಇಷ್ಟೊತ್ತಿಗೆ ಅವರ ಲಕ್ಷಾಂತರ ಅಭಿಮಾನಿಗಳು ಡಾ.ರಾಜ್​ರ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸುತ್ತಿದ್ದರು. ಅವರ ಹೆಸರಲ್ಲಿ ಅನ್ನದಾನ, ರಕ್ತದಾನದಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಾರ್ಥಕತೆ ಮೆರೆಯುತ್ತಿದ್ದರು. ಆದರೂ ಹಲವು ತಾವಿರುವಲ್ಲೇ ರಾಜ್​ರ​ ಫೋಟೋಗೆ ಪುಷ್ಪಾರ್ಚನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಜ್​ಕುಮಾರ್​ರ ಫೋಟೋ ಹಾಕಿಕೊಂಡು ಶುಭಕೋರಿದ್ದಾರೆ.
ಆದರೆ, ಈ ಬಾರಿ ಅವರ ಮಗ ಪುನೀತ್​ ರಾಜ್​ಕುಮಾರ್​ ತಂದೆಯ ಹುಟ್ಟುಹಬ್ಬಕ್ಕೆ ವಿಭಿನ್ನ ಕಾಣಿಕೆ ಕೊಟ್ಟಿದ್ದಾರೆ. ಹಾಡಿನ ಮೂಲಕ ತಂದೆಯ ಜೊತೆಗಿನ ಬಾಂಧವ್ಯದ ಬಗ್ಗೆ ಬಿಚ್ವಿಟ್ಟಿದ್ದಾರೆ.
‘ಬಡವರ ಬಂಧು’ ಸಿನಿಮಾದ ‘ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ… ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ… ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ. ಬಿಸಲು ಮಳೆಗೆ ನರಳದಂತೆ ನಿನ್ನ ನೆರಳಲಿ ಸಲಹಿದೆ, ಆ ಪ್ರೀತಿಯ ಮನ ಮರೆವುದೇ…’ ಎಂಬ ಹಾಡು ಭಾವನಾತ್ಮಕವಾಗಿ ಮೂಡಿಬಂದಿದೆ. ಪುನೀತ್ ರಾಜ್​ಕುಮಾರ್​ ತನ್ನ ತಂದೆಯನ್ನ ಎಷ್ಟು ಪ್ರೀತಿಸುತ್ತಾರೆ, ತಂದೆ ಜೊತೆ ಅವರಿಗಿದ್ದ ಬಾಂಧವ್ಯ ಎಂತಹದ್ದು ಎಂಬುದು ಹಾಡನ್ನ ಕೇಳಿದರೆ ಅರಿವಾಗಲಿದೆ.
1 ನಿಮಿಷ 36 ಸೆಕೆಂಡ್​ ಇರುವ ಹಾಡಿನ ವಿಡಿಯೋವನ್ನು ಪುನೀತ್​, ಟ್ವಿಟರ್​ನಲ್ಲಿ ಶೇರ್​ ಮಾಡಿ, ‘ಅಪ್ಪಾಜಿ ಅವರ 92ನೇ ಹುಟ್ಟುಹಬ್ಬಕ್ಕೆ ನಮ್ಮ ಪುಟ್ಟ ಕಾಣಿಕೆ’ ಎಂದು ಬರೆದುಕೊಂಡಿದ್ದಾರೆ. ಇದನ್ನು ಲಕ್ಷಾಂತರ ಜನ ನೋಡಿದ್ದಾರೆ. ಇದು ಅಪ್ಪಾಜಿ ಅವರ 92ನೇ ಜನ್ಮದಿನದ ಪ್ರಯುಕ್ತ ನಮ್ಮ ಒಂದು ಪುಟ್ಟ ಕಾಣಿಕೆ ಅಂತಾ ಪವರ್ ಸ್ಟಾರ್ ಹಂಚಿಕೊಂಡಿದ್ದಾರೆ.
ಕ್ರಿಕೆಟ್​ ಆಟಗಾರ್ತಿ ವೇದಾಕೃಷ್ಣಮೂರ್ತಿ ತಾಯಿ ಕರೊನಾಗೆ ಬಲಿ

ಹುಬ್ಬಳ್ಳಿಯಲ್ಲಿ ನಟಿ ಶನಾಯ ಅರೆಸ್ಟ್: ಹೈಸ್ಕೂಲ್​ ಲವ್​ಗೆ ಅಡ್ಡಿಯಾದ ಸೋದರನ ಸಾವಿನ ಹಿಂದಿದೆ ಬೆಚ್ಚಿಬೀಳಿಸೋ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
