ಮಂಡ್ಯ:ಐದು ರೂಪಾಯಿ ವೈದ್ಯರೆಂದೇ ಮನೆ ಮಾತಾಗಿರುವ ಚರ್ಮರೋಗ ತಜ್ಞ ಡಾ.ಎಸ್.ಸಿ.ಶಂಕರೇಗೌಡ ಅವರ ಕುರಿತ ಅಭಿನಂದನಾ ಗ್ರಂಥ ಹೊರ ತರಲಾಗುತ್ತಿದೆ ಎಂದು ಗ್ರಂಥದ ಸಂಪಾದಕ ಡಾ.ಪ್ರದೀಪಕುಮಾರ ಹೆಬ್ರಿ ಹೇಳಿದರು.ಅಭಿಮಾನಿಗಳು, ಹಿತೈಷಿಗಳು, ಒಡನಾಡಿಗಳು, ಕವಿಗಳು, ಸಾಹಿತಿಗಳು, ಸಹಪಾಠಿಗಳು, ಸಹೋದ್ಯೋಗಿಗಳು, ಬಂಧು-ಮಿತ್ರರು ಹಾಗೂ ಪತ್ರಕರ್ತರು ಸೇರಿದಂತೆ ಅವರ ಬಗ್ಗೆ ‘ನಾವು ಕಂಡಂತೆ ಡಾ.ಎಸ್.ಸಿ.ಶಂಕರೇಗೌಡರ’ ವಿಷಯಕ್ಕೆ ಸಂಬಂಧಿಸಿದಂತೆ ಕವನ, ಲೇಖನ, ಪ್ರಬಂಧ, ಚಿತ್ರಗಳನ್ನು ಬರೆದು ಕಳುಹಿಸಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ನ.30ರೊಳಗೆ ಲೇಖನ, ಕವನ, ಪ್ರಬಂಧ, ಚಿತ್ರಗಳನ್ನು ಡಾ.ಪ್ರದೀಪಕುಮಾರ ಹೆಬ್ರಿ, ಸಂಪಾದಕರು, ಅಭಿನಂದನಾ ಗ್ರಂಥ, 287, ದೃಶ್ಯ, ಹಾಲಹಳ್ಳಿ ಮುಖ್ಯರಸ್ತೆ, ಮಂಡ್ಯ-571401 ವಿಳಾಸಕ್ಕೆ ಕಳುಹಿಸಬಹುದು ಎಂದು ತಿಳಿಸಿದರು.ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಪ್ರೊ.ಎಸ್.ಮಂಜು, ಚಂದ್ರಶೇಖರ ದ.ಕೋ.ಹಳ್ಳಿ, ಹೊಳಲು ಶ್ರೀಧರ್, ಬಿ.ಜಿ.ಉಮಾ, ಡಾ.ಗೋಪಾಲಕೃಷ್ಣ ಗುಪ್ತ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
