ಬೆಂಗಳೂರು: 2022ನೇ ಸಾಲಿನ ಡಾ.ಎಚ್. ಗಿರಿಜಮ್ಮ ಪ್ರಶಸ್ತಿಗೆ ಡಾ.ಕೆ.ಸುಶೀಲಾ ಅವರ ‘ವೈದ್ಯೆಯೊಬ್ಬರ ನೆನಪಿನಂಗಳದಿಂದ’ ಹಾಗೂ ಡಾ.ಬಿ.ಪ್ರೇಮಲತಾ ಅವರ ‘ಐದು ಬೆರಳುಗಳು’ ಕಥಾಸಂಕಲನ ಆಯ್ಕೆಯಾಗಿವೆ.
ಡಾ.ಗಿರಿಜಮ್ಮ ಪ್ರಶಸ್ತಿಗೆ 2022ರಲ್ಲಿ ಪ್ರಕಟವಾದ ವೈದ್ಯ ಸಾಹಿತ್ಯ ಮತ್ತು ವೈದ್ಯೇತರ ಸಾಹಿತ್ಯ ವಿಭಾಗದಿಂದ ಕೃತಿಗಳನ್ನು ವೈದ್ಯಲೇಖಕಿಯರಿಂದ ಆಹ್ವಾನಿಸಲಾಗಿತ್ತು. ಈ ಪ್ರಯುಕ್ತ ರಾಜ್ಯಾದ್ಯಂತ ಸಾಕಷ್ಟು ಕೃತಿಗಳು ಬಂದಿದ್ದು ಅಂತಿಮವಾಗಿ ವೈದ್ಯ ಸಾಹಿತ್ಯದಿಂದ ಡಾ.ಕೆ.ಸುಶೀಲಾ ಅವರ ‘ವೈದ್ಯೆಯೊಬ್ಬರ ನೆನಪಿನಂಗಳದಿಂದ’ ಹಾಗೂ ವೈದ್ಯೇತರ ಸಾಹಿತ್ಯ ವಿಭಾಗದಿಂದ ಡಾ. ಬಿ.ಪ್ರೇಮಲತಾ ಅವರ ‘ಐದು ಬೆರಳುಗಳು’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ತಲಾ 25 ಸಾವಿರ ರೂ. ನಗದು ಮತ್ತು ಸ್ಮರಣಫಲಕ ಒಳಗೊಂಡಿರುತ್ತದೆ.
ಇದನ್ನೂ ಓದಿ:ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ: ಕಪ್ ಗೆದ್ದ ಕ್ರಿಕೆಟ್ ತಂಡದ ಹಿಂದಿರುವ ಕರಾವಳಿ ಮಹಿಳೆ ಯಾರು?
ಆಯ್ಕೆ ಸಮಿತಿಯಲ್ಲಿದ್ದ ಹಿರಿಯ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್, ವೈದ್ಯರಾದ ಡಾ.ಆರ್.ಕೆ.ಸರೋಜ, ಡಾ.ನಾ. ಸೋಮೇಶ್ವರ ಹಾಗೂ ಹಿರಿಯ ಕವಯಿತ್ರಿ ಡಾ.ಎಚ್.ಎಲ್.ಪುಷ್ಪ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭ ಡಿ.9ರ ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
‘ನಂಗೆ ಕನ್ನಡ ತುಂಬಾ ಇಷ್ಟ..’ ಎಂದು ಕ್ರಿಕೆಟಿಗ ಕಪಿಲ್​ದೇವ್ ಅವರಿಂದ ಹೇಳಿಸಿದ್ರು ಕನ್ನಡದ ನಟಿ!

ರಾಜಕೀಯಕ್ಕೆ ಇಳಿಯಲಿದ್ದಾರಾ ಜೂನಿಯರ್ ಅಂಬರೀಷ್?; ರಾಜಕೀಯ ಪ್ರವೇಶದ ಕುರಿತು ಅಭಿಷೇಕ್ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
