ಬೆಂಗಳೂರು: ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಈ ಬಾರಿ ಹಿರಿಯ ಪತ್ರಕರ್ತರಾದ ಡಾ. ಯು.ಬಿ. ರಾಜಲಕ್ಷ್ಮಿ ಅವರಿಗೆ ಲಭಿಸಿದೆ. ಇದುವರೆಗೆ ಈ ಪ್ರಶಸ್ತಿಯನ್ನು 26 ಹಿರಿಯ ಪತ್ರಕರ್ತರು ಪಡೆದಿದ್ದು, ಇವರು 27ನೇಯವರಾಗಿದ್ದಾರೆ. ಪ್ರಶಸ್ತಿ 15 ಸಾವಿರ ರೂ. ನಗದು ಹಾಗೂ ಫಲಕ ಹೊಂದಿದೆ.
ಡಾ. ಯು.ಬಿ. ರಾಜಲಕ್ಷ್ಮಿ ಕಳೆದ 37 ವರ್ಷಗಳಿಂದ ಪತ್ರಿಕಾರಂಗದಲ್ಲಿದ್ದಾರೆ. ಉಡುಪಿಯ ಜಿಲ್ಲೆಯ ಕಾರ್ಕಳದವರಾದ ಇವರು ಹೊಸ ದಿಗಂತ, ಮುಂಗಾರು, ಟೈಮ್ಸ್ ಆಫ್ ಡೆಕ್ಕನ್ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿ 1987ರಲ್ಲಿ ತರಂಗ ವಾರಪತ್ರಿಕೆಯಲ್ಲಿ ಸೇವೆ ಆರಂಭಿಸಿ ಈಗ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿಪತ್ರಿಕೋದ್ಯಮದಲ್ಲಿ ವೈಭವೀಕರಣ ಸಲ್ಲ
ಮೈಸೂರು ವಿವಿಯಲ್ಲಿ ಕನ್ನಡ ಎಂ.ಎ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪಡೆದು ಹಂಪಿ ವಿವಿಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಹಲವು ಕೃತಿಗಳನ್ನು ರಚಿಸಿರುವ ಇವರು ಸಾಕ್ಷ್ಯಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಮಲೇಷ್ಯಾ ಸರ್ಕಾರದ ಆಹ್ವಾನದ ಮೇಲೆ ಅಧ್ಯಯನ ಪ್ರವಾಸ ಕೈಗೊಂಡಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯಗಳಲ್ಲಿ ಪರಿಣತಿ ಹೊಂದಿದ್ದಾರೆ ಎಂದು ಖಾದ್ರಿ ಶಾಮಣ್ಣ ಟ್ರಸ್ಟ್ ಟ್ರಸ್ಟಿ ಎಚ್.ಅರ್. ಶ್ರೀಶ ತಿಳಿಸಿದ್ದಾರೆ.
ಇದನ್ನೂ ಓದಿಪತ್ರಿಕೋದ್ಯಮದಲ್ಲಿ ಲೇಖಕರಾಗಿಯೂ ಬೆಳೆಯಲು ಸಾಧ್ಯ
https://www.vijayavani.net/vijayawani-chief-deputy-editor-bs-harish-rotary-silicon-journalism-award-mysore/

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:fourteen + ten =
Remember me
