ಬೆಂಗಳೂರು:ಮನುಷ್ಯ ಪುಣ್ಯದ ಫಲ ಬಯಸುತ್ತಾನೆ.ಆದರೆ ಪುಣ್ಯದ ಕಾರ್ಯ ಮಾಡುವುದಿಲ್ಲ.ಪಾಪದ ಫಲ ಯಾರೂ ಬಯಸುವುದಿಲ್ಲ.ಆದರೆ ಅದೆಷ್ಟೋ ಪಾಪ ಮಾಡುತ್ತಲೇ ಇರುತ್ತಾನೆ.ಜೀವನದ ಉನ್ನತಿ ಮತ್ತು ಶ್ರೇಯಸ್ಸಿಗೆ ಒಂದಿಷ್ಟಾದರೂ ಆಧ್ಯಾತ್ಮದ ಅರಿವು ಮುಖ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಶನಿವಾರ ಜೆ.ಪಿ.ನಗರದ ವೀರಶೈವ ಲಿಂಗಾಯತ ಸಂಗಮ ಆಶ್ರಯದಲ್ಲಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮಾನವನ ಬದುಕು ಸಂಪತ್ತಿನಿಂದ ಕೂಡಿದ್ದರೂ ಮಾನಸಿಕ ಶಾಂತಿ ಇಲ್ಲದಾಗಿದೆ.ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕಾಗಿದೆ.ಮಾನವ ಜೀವನ ಸಜ್ಜನರ ಸತ್ಸಂಗದ ತೋಟದಲ್ಲಿ ಬಾಳಬೇಕು ಬೆಳೆಯಬೇಕು.ಅರಿತು ನಡೆದರೆ ಬಾಳು ಬಂಗಾರ.ಮರೆತು ನಡೆದರೆ ಜೀವನ ಬಂಧನಕಾರಿ.ಸಂಸ್ಕಾರ ಸಂಸ್ಕೃತಿ ಅಳವಡಿಸಿಕೊಂಡು ಬಾಳಿದರೆ ಜೀವನದಲ್ಲಿ ಶ್ರೇಯಸ್ಸು ದೊರಕುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ.ವಿಶ್ವ ಬಂಧುತ್ವದ ಮತ್ತು ಸಾಮರಸ್ಯ ಬದುಕಿಗೆ ವೀರಶೈವ ಧರ್ಮ ಅಮೂಲ್ಯ ಕೊಡುಗೆ ಕೊಟ್ಟಿದೆ.ಜೆ.ಪಿ.ನಗರದ ಶ್ರೀ ವೀರಶೈವ ಲಿಂಗಾಯತ ಸಂಗಮ ಸಮಾಜದಲ್ಲಿ ಅನೇಕ ಧರ್ಮ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಸಮಾರಂಭ ಉದ್ಘಾಟಿಸಿ ಮಾತನಾಡಿ,ಬದುಕು ನೂರೆಂಟು ಕಷ್ಟಗಳ ಸರಮಾಲೆ.ನಾವೆಷ್ಟೋ ಸುಖವಾಗಿ ಇದ್ದೇವೆ ಅಂದುಕೊಂಡರೂ ಒಂದಿಲ್ಲ ಒಂದು ಕೊರತೆ ಇದ್ದೇ ಇರುತ್ತದೆ.ಸತ್ಯ ಸುಂದರ ಬಾಳಿಗಾಗಿ ಶಿವಜ್ಞಾನದ ಅರಿವು ಮತ್ತು ಗುರು ಕಾರುಣ್ಯ ಮುಖ್ಯ ಎಂದರು.ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಧರ್ಮ ಧರ್ಮಗಳಲ್ಲಿ ವ್ಯಕ್ತಿ ವ್ಯಕ್ತಿಗಳಲ್ಲಿ ದ್ವೇಷ ಅಸೂಯೆ ಮತ್ಸರಗಳು ಬೆಳೆಯುತ್ತಿರುವುದು ನೋವಿನ ಸಂಗತಿ.ಪರಿವರ್ತನಾಶೀಲ ಸಮಾಜ ನಿರ್ಮಾಣಕ್ಕೆ ಆಚಾರ್ಯರ ಹಾಗೂ ಶರಣರ ವಿಚಾರ ಧಾರೆ ಅವಶ್ಯಕ.ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.ರಾಜಾಪುರ ಸಂಸ್ಥಾನಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಂಸ್ಕಾರ ಸದ್ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಾಳಬೇಕಾಗುತ್ತದೆ.ಇವುಗಳನ್ನು ನಿರ್ಲಕ್ಷ ಮಾಡಿದರೆ ಅಪಾಯ ತಪ್ಪಿದ್ದಲ್ಲವೆಂದರು.ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ,ಮಾಜಿ ಬಿಬಿಎಂಪಿ ಸದಸ್ಯರಾದ ಎಂ.ಜಯರಾಮ್,ಟಿ.ನಾರಾಯಣ್,ಆರ್.ಆರ್.ಹಿರೇಮಠ,ಚನ್ನಬಸವಾರಾಧ್ಯರು,ಎ.ಆರ್.ಶಿವಕುಮಾರ್,ಅಮರೇಗೌಡ ಮಾಲಿಪಾಟೀಲ,ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಕಲ್ಲುಬಾಳು ಮಠದ ಶಿವಾನಂದ ಶ್ರೀಗಳು,ನಾಗಲಾಪುರ ಮಠದ ತೇಜೇಶಲಿಂಗ ಶ್ರೀಗಳು,ದೊಡ್ಡಗುಣಿ ರೇವಣಸಿದ್ಧ ಶ್ರೀಗಳು,ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶ್ರೀಗಳು ಉಪಸ್ಥಿತರಿದ್ದರು.ನೇತೃತ್ವ ವಹಿಸಿದ ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮದಲ್ಲಿ ವಿಶ್ವ ಬಂಧುತ್ವದ ಚಿಂತನೆಗಳಿವೆ.ಕಾಯಕ ಮತ್ತು ದಾಸೋಹದ ತಳಹದಿಯ ಮೇಲೆ ಹಸನಾದ ಬದುಕು ನಿರ್ಮಾಣಗೊಳ್ಳಲು ಸಾಧ್ಯ.ಪೂರ್ವದ ಋಷಿ ಮುನಿಗಳ ಆಚಾರ್ಯರ ಮತ್ತು ಸತ್ಪುರುಷರ ಚಿಂತನೆಗಳು ನಮ್ಮೆಲ್ಲರಿಗೆ ದಾರಿ ದೀಪವಾಗಬೇಕೆಂದರು.ಶ್ರೀ ವೀರಶೈವ ಲಿಂಗಾಯತ ಸಂಗಮದ ಅಧ್ಯಕ್ಷ ಚಂದ್ರಶೇಖರಗೌಡರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯದರ್ಶಿ ಜಂಬಗಿ ಕೊಟ್ರೇಶ್ ಸ್ವಾಗತಿಸಿದರು.ನೀಲಾಂಬಿಕ ಮಹಿಳಾ ಸಮಾಜದ ಸದಸ್ಯರಿಂದ ಪ್ರಾರ್ಥನೆ ಜರುಗಿತು.ಸವಿತಾ ಶಿವಕುಮಾರ ನಿರೂಪಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 11 =
Remember me
